Breaking News

ನನಗೆ ಕೊಟ್ರೆ ರಾಜ್ಯದ KAT, KPSC ಯನ್ನೇ ರದ್ದು ಮಾಡ್ತೇನೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ನನಗೆ ಬಿಟ್ಟರೆ ರಾಜ್ಯದ ಕೆಎಟಿ ಮತ್ತು ಕೆಪಿಎಸ್ಸಿಯನ್ನೇ ರದ್ದು ಮಾಡುತ್ತೇನೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

KPSC ಅಧ್ಯಕ್ಷರ ಪುತ್ರಿಯ ಮೇಲೆ FIR ದಾಖಲು ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಕಲಿ ಆದಾಯ ಪ್ರಮಾಣ ಪತ್ರದ ದೂರು ಆಗಿದೆ. ನಿನ್ನೆ ರಾತ್ರಿ ಎಫ್‌ಐಆರ್‌ ದಾಖಲಾಗಿದೆ. ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆ. ಅದನ್ನ ಕಾನೂನಾತ್ಮಕವಾಗಿ ಹೇಗೆ ಟ್ಯಾಕಲ್ ಮಾಡಬಹುದು ನೋಡಬೇಕು. ಬೇಲಿನೇ ಎದ್ದು ಹೊಲ ಮೇದರೆ ಏನು ಮಾಡೋದು. ನಮ್ಮ ಕೈಯಲ್ಲಿ ಇಲ್ಲ ಇದು, ನನಗೆ ಇದನ್ನ ಬಿಟ್ಟರೆ KAT ರದ್ದು ಮಾಡ್ತೀನಿ. KPSC ಯನ್ನು ರದ್ದು ಮಾಡ್ತೀನಿ ಅಂತ ತಿಳಿಸಿದರು.

ಇದನ್ನ ಸಂವಿಧಾನಾತ್ಮಕವಾಗಿಯೇ ಮಾಡಬೇಕಾಗುತ್ತದೆ. ಹೊಸ ಕಾನೂನು ತರಬೇಕಾಗುತ್ತದೆ. ಕೆಲವರು ಮಾಡೋಕೆ ಆಗಲ್ಲ ಅಂತಾರೆ. ಕಾನೂನು ಮಾಡೋದು ನಾವು. ಶಾಸನ ಮಾಡೋದು ನಾವು, ನಾವೆಲ್ಲರು ಸೇರಿ ತೀರ್ಮಾನ ಮಾಡಿದ್ರೆ ಶುದ್ದೀಕರಣ ಮಾಡಬಹುದು. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡೋದು ಸರಿಯಲ್ಲ ಅಂತ ತಿಳಿಸಿದರು.

ಯಾವುದೇ ನಾಯಕರು ಇಲ್ಲದೇ ಹುಬ್ಬಳ್ಳಿ – ಧಾರವಾಡದಲ್ಲಿ ಎಷ್ಟು ಯುವಕರು ಹೋರಾಟ ಮಾಡಿದ್ರಿ ಎಲ್ಲರೂ ನೋಡಿದ್ರಿ. ಇವೆಲ್ಲವನ್ನು ನಿರ್ಲಕ್ಷ್ಯ ಮಾಡಲು ಆಗೊಲ್ಲ. ನಿನ್ನೆ ಎಫ್‌ಐಆರ್‌ ದಾಖಲಾಗಿದೆ. ಕೇಸ್ ಸತ್ಯಾಸತ್ಯತೆ ಚೆಕ್ ಮಾಡಿ ಹೇಳಬೇಕಾಗುತ್ತದೆ. ದಾಖಲಾತಿ ನೋಡದೇ ಮಾತಾಡೋದು ಸರಿಯಲ್ಲ. ಸಿಎಂ ಅವರು ನೇಮಕಾತಿ ಮಾಡಬೇಕು ಅಂತ ಹೇಳಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಲ್ಲ. ಹಿಂದೆ ಒಂದು ಕಾನೂನು ತಂದಿದ್ದೇವೆ. ಭ್ರಷ್ಟಾಚಾರ ನಿರಂತರ ಮಾಡೋದಕ್ಕೆ. ಇದಕ್ಕೆ ರೂಲ್ಸ್ ಫ್ರೇಮ್ 1 ವಾರ 10 ದಿನಗಳಲ್ಲಿ ನಾನೇ ಮಾಡ್ತೀನಿ ಎಂದರು.

ಅಧ್ಯಕ್ಷರ ಮೇಲೆ ಕ್ರಮ ರಾಜ್ಯಪಾಲರು ಮಾಡಬೇಕು. ಆದರೆ ಸುದ್ದಿ ಆಗಿರೋದು ನಕಲಿ ಆದಾಯ ಪ್ರಮಾಣ ಪತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ರಾಜ್ಯಪಾಲರು ಏನ್ ಮಾಡ್ತಾರೋ ನೋಡೋಣ. ದಾಖಲಾತಿ ಕೊಡೋದು ನಮ್ಮ ಕೆಲಸ ಕೊಡ್ತೀವಿ. ಅನುಮಾನ ಇದ್ದಾಗ ಆಯೋಗ ಸರಿ ಮಾಡಬೇಕು. ನಾವು ಸಲಹೆ ಕೊಡಬಹುದು. ಈಗ ಆಯೋಗವೇ ಸರಿ ಮಾಡಬೇಕು. ಸದಸ್ಯರೇ ಇದನ್ನ ಮಾಡಿರೋದು. ಅಲ್ಲಿ ಹೊಂದಾಣಿಕೆ, ಪಾರದರ್ಶಕತೆ ಇಲ್ಲ ಅಂತ ಗೊತ್ತಾಗಿದೆ. ಮೋಸ ಇದೆ ಅಂತ ಗೊತ್ತಾಗಿದೆ. ಇದು ಯಾವುದೇ ಸರ್ಕಾರಕ್ಕೆ ಒಳ್ಳೆಯದಲ್ಲ. ಕೇರಳಾದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಮುಂದೆ ಏನ್ ಮಾಡೋಣ ಅಂತ ನೋಡೋಣ ಅಂತ ತಿಳಿಸಿದರು.


Spread the love

About Laxminews 24x7

Check Also

ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

Spread the loveಬೆಂಗಳೂರು: ಶಾಶ್ವತ ನಿವಾಸ ಪ್ರಮಾಣ ಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು? ಆ ರೀತಿ ನಿಯಮ ಇದ್ಯಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ