Breaking News

ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ರಾಜ್ಯ ಮಾನ್ಯತೆ ನೀಡಿ: ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರಿಗೆ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಮನವಿ

Spread the love

ಬೆಳಗಾವಿ: ಡಿಜಿಟಲ್ ನ್ಯೂಸ್ ಅಸೋಸಿಯೇಷನ್ (ಡಿಎನ್ಎ) ನಿಯೋಗವು ರ‍್ನಾಟಕದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ರಾಜ್ಯದ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಅಧಿಕೃತ ಮಾನ್ಯತೆ, ಡಿಜಿಟಲ್ ಪತ್ರರ‍್ತರಿಗೆ ಅಕ್ರೆಡಿಟೇಶನ್ ಹಾಗೂ ಪತ್ರರ‍್ತರ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸುವಂತೆ ಕೋರಿ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿತು.

ಮನವಿಯನ್ನು ಸೌಹರ‍್ದಯುತವಾಗಿ ಸ್ವೀಕರಿಸಿದ  ಮುಖ್ಯಮಂತ್ರಿಗಳು, ನಿಯೋಗದ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ, ಡಿಜಿಟಲ್ ಸುದ್ದಿ ಮಾಧ್ಯಮದ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದರು.
ಇಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮವು, ವಿಶೇಷವಾಗಿ ಯುವಜನತೆಗೆ, ಸುದ್ದಿಯ ಪ್ರಮುಖ ಮೂಲವಾಗಿ ಬೆಳೆದಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ತಳಮಟ್ಟದವರೆಗೆ ಸುದ್ದಿ ತಲುಪಿಸುತ್ತಿದೆ. ಆದರೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರರ‍್ತರಿಗೆ ದೊರೆಯುತ್ತಿರುವ ಅಧಿಕೃತ ಮಾನ್ಯತೆ, ಅಕ್ರೆಡಿಟೇಶನ್, ರ‍್ಕಾರಿ ಮಾಧ್ಯಮ ಸೌಲಭ್ಯಗಳು ಹಾಗೂ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ರಾಜ್ಯದ ಡಿಜಿಟಲ್ ಪತ್ರರ‍್ತರು ಇಂದಿಗೂ ವಂಚಿತರಾಗಿದ್ದಾರೆ ಎಂಬ ಅಂಶವನ್ನು ನಿಯೋಗವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.

ಮನವಿ ಪತ್ರದಲ್ಲಿ ಸಲ್ಲಿಸಲಾದ ಪ್ರಮುಖ ಬೇಡಿಕೆಗಳು:
೧.    ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಅನ್ನು ರ‍್ನಾಟಕದ ಡಿಜಿಟಲ್ ಸುದ್ದಿ ಮಾಧ್ಯಮದ ಪ್ರಾತಿನಿಧಿಕ ಸ್ವಯಂ ನಿಯಂತ್ರಣ ಸಂಸ್ಥೆಯಾಗಿ ಮಾನ್ಯ ಮಾಡಿ, ರಾಜ್ಯ ರ‍್ಕಾರದ ಮಾಧ್ಯಮ ನೀತಿ ಸಮಾಲೋಚನೆಗಳಲ್ಲಿ ಸರ‍್ಪಡೆಗೊಳಿಸುವುದು;
೨.    ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪತ್ರರ‍್ತರಿಗೆ ಸಮಾನವಾಗಿ ಡಿಜಿಟಲ್ ಸುದ್ದಿ ಪತ್ರರ‍್ತರಿಗೆ ಅಕ್ರೆಡಿಟೇಶನ್ ನೀಡಲು ಮರ‍್ಗಸೂಚಿಗಳನ್ನು ರೂಪಿಸುವಂತೆ ವರ‍್ತಾ ಮತ್ತು ಸರ‍್ವಜನಿಕ ಸಂರ‍್ಕ ಇಲಾಖೆಗೆ ನರ‍್ದೇಶನ ನೀಡುವುದು;
೩.    ಪರಿಶೀಲಿತ ಡಿಜಿಟಲ್ ಸುದ್ದಿ ಪರ‍್ಟಲ್ಗಳನ್ನು ರ‍್ನಾಟಕ ರ‍್ಕಾರದ ಜಾಹೀರಾತು ನೀತಿಯಲ್ಲಿ ಸೇರಿಸುವುದು;
೪.    ಆರೋಗ್ಯ ವಿಮೆ, ಪಿಂಚಣಿ ಹಾಗೂ ವಸತಿ ಸೇರಿದಂತೆ ಪತ್ರರ‍್ತರ ಕಲ್ಯಾಣ ಯೋಜನೆಗಳನ್ನು ಡಿಜಿಟಲ್ ಪತ್ರರ‍್ತರಿಗೂ ವಿಸ್ತರಿಸುವುದು;
೫.    ಡಿಜಿಟಲ್ ಸುದ್ದಿ ಮಾಧ್ಯಮಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ರ‍್ನಾಟಕ ರ‍್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕರ‍್ಯನರ‍್ವಹಿಸಲು ಸಂಸ್ಥೆ ಸಂಪರ‍್ಣ ಸಿದ್ಧವಿದೆ ಎಂಬುದನ್ನು ನಿಯೋಗವು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿತು.


ಡಿಜಿಟಲ್ ನ್ಯೂಸ್ ಅಸೋಸಿಯೇಷನ್ನ ಸದಸ್ಯರಾಗಿರುವ ಹಲವು ಡಿಜಿಟಲ್ ಸುದ್ದಿ ಮಾಧ್ಯಮಗಳು ಈಗಾಗಲೇ ಮಾಹಿತಿ ತಂತ್ರಜ್ಞಾನ ನಿಯಮಗಳು–೨೦೨೧ರ ಅಡಿಯಲ್ಲಿ ಭಾರತ ರ‍್ಕಾರದ ವರ‍್ತಾ ಮತ್ತು ಪ್ರಸಾರ ಸಚಿವಾಲಯದಿಂದ ಮಾನ್ಯತೆ ಪಡೆದಿವೆ. ಇದೇ ಮಾದರಿಯಲ್ಲಿ ರಾಜ್ಯ ರ‍್ಕಾರವೂ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಅಧಿಕೃತ ಮಾನ್ಯತೆ ನೀಡಬೇಕೆಂದು ನಿಯೋಗವು ಮನವಿ ಮಾಡಿತು.
ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಭಾರತ ರ‍್ಕಾರದ ಮಾಹಿತಿ ತಂತ್ರಜ್ಞಾನ (ಮಧ್ಯರ‍್ತಿ ಮರ‍್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, ೨೦೨೧ರ ಚೌಕಟ್ಟಿಗೆ ಅನುಗುಣವಾಗಿ ೨೦೨೪ರಲ್ಲಿ ಬೆಳಗಾವಿಯಲ್ಲಿ ಸ್ಥಾಪನೆಯಾದ ಸ್ವಯಂ ನಿಯಂತ್ರಣ ಸಂಸ್ಥೆಯಾಗಿದೆ. ನಿವೃತ್ತ ನ್ಯಾಯಮರ‍್ತಿ ಅರವಿಂದ ಎಸ್. ಪಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ಕರ‍್ಯನರ‍್ವಹಿಸುತ್ತಿರುವ ಸಂಸ್ಥೆಯು, ಪ್ರಸ್ತುತ ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ೨೧ಕ್ಕೂ ಹೆಚ್ಚು ಪರಿಶೀಲಿತ ಡಿಜಿಟಲ್ ಸುದ್ದಿ ಪರ‍್ಟಲ್ಗಳನ್ನು ಪ್ರತಿನಿಧಿಸುತ್ತಿದೆ. ಸಂಸ್ಥೆಯು ತನ್ನ ಸದಸ್ಯರಿಗಾಗಿ ನೀತಿ ಸಂಹಿತೆಯನ್ನು ಅಳವಡಿಸಿಕೊಂಡಿದ್ದು, ಐಟಿ ನಿಯಮಗಳ ಅನ್ವಯ ಮೂರು ಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ.
ಜವಾಬ್ದಾರಿಯುತ ಹಾಗೂ ಸ್ವಯಂ ನಿಯಂತ್ರಿತ ಡಿಜಿಟಲ್ ಪತ್ರಿಕೋದ್ಯಮಕ್ಕೆ ರ‍್ಕಾರದ ಮಾನ್ಯತೆ ದೊರೆತರೆ ನೈತಿಕ ಪತ್ರಿಕೋದ್ಯಮಕ್ಕೆ ಮತ್ತಷ್ಟು ಬಲ ಸಿಗಲಿದೆ, ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಯ ಹರಡುವಿಕೆಗೆ ಕಡಿವಾಣ ಬೀಳಲಿದೆ ಮತ್ತು ಜನತೆಗೆ ತಮ್ಮ ಮಾತೃಭಾಷೆಯಲ್ಲಿ ವಿಶ್ವಾಸರ‍್ಹ ಸುದ್ದಿಗಳು ಲಭ್ಯವಾಗಲಿವೆ ಎಂಬ ವಿಶ್ವಾಸವನ್ನು ನಿಯೋಗವು ವ್ಯಕ್ತಪಡಿಸಿತು.
ನಿಯೋಗದಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ನ ಉಪಾಧ್ಯಕ್ಷ ರತ್ನಾಕರ ಗೌಂಡಿ, ವಕ್ತಾರ ಇಕ್ಬಾಲ್ ಜಕಾತಿ, ಸಂಯೋಜಕ ದೀಪಕ್ ಸುತಾರ್,ಕೃಷ್ಣಶಿಂಧೆ ಸೇರಿದಂತೆ ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

Spread the loveಬೆಂಗಳೂರು: ಶಾಶ್ವತ ನಿವಾಸ ಪ್ರಮಾಣ ಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು? ಆ ರೀತಿ ನಿಯಮ ಇದ್ಯಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ