Breaking News

ಹಿಡಕಲ್​ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

Spread the love

ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆ (ಜಿಆರ್​ಬಿಸಿ) ಯ ದುರಸ್ತಿ ಕಾಮಗಾರಿ ಭಾಗಶ ಪೂರ್ತಿಯಾಗಿದ್ದು, ಜನ&ಜಾನುವಾರುಗಳ ಹಿತದಷ್ಟಿಯಿಂದ ಹಿಡಕಲ್​ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕೋರಿದ್ದಾರೆ. ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಮಳೆಯಾಗದ್ದರಿಂದ ಬೇಸಿಗೆಯಲ್ಲಿ ಜನ& ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಿಡಕಲ್​ ಜಲಾಶಯದಿಂದ ಪ್ರತಿ ಸಲವೂ ಮೂರೂ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆಯಾದರೂ ಈ ಬಾರಿ ಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಿಲ್ಲ. ಈಗ ಕಾಮಗಾರಿಯು ಮುಗಿದಿರುವುದರಿಂದ ಜೂ.5ರಿಂದ 10 ದಿನಗಳವರೆಗೆ ಜಿಆರ್​ಬಿಸಿ ಕಾಲುವೆಗೆ ನಿತ್ಯ 2,000 ಕ್ಯೂಸೆಕ್​ನಂತೆ ಕುಡಿಯುವ ನೀರು ಬಿಡುಗಡೆ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

CWC ಸದಸ್ಯರಾಗಿ ಸಿದ್ದರಾಮಯ್ಯ ನೇಮಕ

Spread the loveನವದೆಹಲಿ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ  ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ನೇಮಕ ಮಾಡಿದೆ. CWC ಕಾಂಗ್ರೆಸ್ ಪಕ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ