Breaking News

ಅನುಮತಿ ಇಲ್ಲದೆ ಮದುವೆಯಲ್ಲಿ ಡಿಜೆ ಬಳಕೆ: ಇಬ್ಬರ ಮೇಲೆ ಪ್ರಕರಣ ದಾಖಲು

Spread the love

ಬೆಳಗಾವಿ: ಮದುವೆ ಕಾರ್ಯಕ್ರಮಕ್ಕೆ ಡಿಜೆ ಬಳಸಲು ಅನುಮತಿ ನಿರಾಕರಿಸಿದರೂ ಕೂಡ ಡಿಜೆ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡಿ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದವರ ಮೇಲೆ ಬೆಳಗಾವಿಯ ತಿಲಕವಾಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಗೋಳದಲ್ಲಿ ಈ ಘಟನೆ ನಡೆದಿದೆ. ತಿಲಕವಾಡಿಯ ಅನಗೋಳ ಬಡಮಂಜಿನಗರದ ನಿವಾಸಿಯಾದ ಶುಭಂ ನಾರಾಯಣ ಬಡಮಂಜಿ ಎಂಬುವವರು ತಮ್ಮ ಮದುವೆ ಕಾರ್ಯಕ್ರಮದ ಅಂಗವಾಗಿ  ಮನೆಯ ಮುಂದೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ಡಿಜೆ ಬಳಸುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮದುವೆಗೂ ಮುಂಚೆ ಆರೋಪಿಗಳಾದ ಶುಭಂ ನಾರಾಯಣ ಬಡಮಂಜ, ಡಿಕೆ ಮಾಲಿಕ ಶ್ಯಾಮ ಪರಶುರಾಮ ಗೌಂಡವಾಡಕರ ಮದುವೆ ಕಾರ್ಯಕ್ರಮಕ್ಕೆ ಡಿಜೆ ಬಳಸಲು ಅನುಮತಿ ಕೋರಿದರು, ಆದರೆ ಅನುಮತಿ ಕೋರಿರುವ ಪ್ರದೇಶವು ಜನವಸತಿ ಪ್ರದೇಶವಾಗಿದ್ದರಿಂದ ಅಲ್ಲ ವಾಸಿಸುವ ಹಿರಿಯ ನಾಗರಿಕರಿಗೆ, ಸಣ್ಣ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯುಂಟಾಗುತ್ತದೆ ಎಂದು ಅವರ ಅನುಮತಿಯನ್ನು ನೀರಾಕರಿಸಲಾಗಿದೆ.

ಆದರೂ ಡಿಜೆ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡಿದ್ದರಿಂದ ಇಬ್ಬರ ಮೇಲೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ