Breaking News

ಬೆಳಗಾವಿಯಲ್ಲಿ ಮ್ಯಾಗ್ನೆಟಾ ಹವಾ: ಟಿಳಕವಾಡಿಯಲ್ಲಿ ‘ಮ್ಯಾಗ್ ಕೆಫೆ’ 3ನೇ ಶಾಖೆ ಅದ್ಧೂರಿ ಉದ್ಘಾಟನೆ!

Spread the love

ಬೆಳಗಾವಿ: ನಗರದ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್ ‘ಮ್ಯಾಗ್ನೆಟಾ’ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದ್ದು, ಸೋಮವಾರ ಸಂಜೆ ತಿಲಕವಾಡಿಯಲ್ಲಿ ತನ್ನ ಮೂರನೇ ‘ಮ್ಯಾಗ್ ಕೆಫೆ’ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿತು.
ಬೆಳಗಾವಿ ಟಿಳಕವಾಡಿಯ ಮಂಗಳವಾರ ಪೇಟೆಯ ‘ಮಧುಕಮಲ್ ಎಟರ್ನಿಯಾ’ ಕಟ್ಟಡದಲ್ಲಿ ನಡೆದ ಈ ಸಮಾರಂಭದಲ್ಲಿ ಉದ್ಯಮಿಗಳು, ಗಣ್ಯರು ಹಾಗೂ ಸೃಜನಾತ್ಮಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪಾಯುಕ್ತರಾದ ನಾರಾಯಣ್ ಬರಮನಿ ಅವರು ಮೆಗ್ನೆಟಾದ ಮೂರನೇ ಶಾಖೆಗೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಶಶಿ ಸಿದ್ದನಾಳ ಫುಡ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕಾಂತ್ ಸಿದ್ದನಾಳ, ಇಂದ್ರಜೀತ ಸಿದ್ನಾಳ್ , ವಾಣಿ ಸಿದ್ನಾಳ್ ಅವರು ಅತಿಥಿಗಳನ್ನು ಬರಮಾಡಿಕೊಂಡರು.
100% ಶುದ್ಧ ಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್‌ಗಳಿಗೆ ಹೆಸರಾಗಿರುವ ಮ್ಯಾಗ್ನೆಟಾ, ಈ ಹೊಸ ಕೆಫೆಯ ಮೂಲಕ ಗ್ರಾಹಕರಿಗೆ ವಿಭಿನ್ನ ಅನುಭವ ನೀಡಲು ಮುಂದಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕೆಫೆಯ ಆಧುನಿಕ ವಿನ್ಯಾಸ ಮತ್ತು ಅಲ್ಲಿನ ವಿಶೇಷ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಯ ಐಸ್‌ಕ್ರೀಮ್ ಪ್ರಿಯರಿಗೆ ಇದು ಮತ್ತೊಂದು ನೆಚ್ಚಿನ ತಾಣವಾಗಿ ಮೂಡಿಬಂದಿದೆ.
ಮಾಜಿ ಸಂಸದ ಸಿದ್ನಾಳರ ಮೊಮ್ಮಗ ದಿಗ್ವಿಜಯ ಸಿದ್ನಾಳ ಅವರು ರಾಜಕೀಯ ಕ್ಷೇತ್ರದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಎಲ್ಲರೊಂದಿಗೆ ಅರಿತು ಬೆರೆತು ನಡೆಯುತ್ತಿರುವುದು ಬೆಳಗಾವಿಗರಿಗೆ ಹೊಸದಲ್ಲ. ಅವರ ಕಾರ್ಯಗಳು ಮತ್ತು ಅವರ ವ್ಯವಸ್ಥಾಯದ ಉನ್ನತಿಗೆ ಮೆಗ್ನೆಟಾ ಉತ್ತಮ ಉದಾಹರಣೆಯಾಗಿದೆ. ಅತ್ಯಂತ ಸುಂದರವಾದ ಮೆಗ್ನೆಟಾ ಕೆಫೆಯನ್ನು ಆರಂಭಿಸಿದ್ದು, ಬೆಳಗಾವಿಗರು ಇದಕ್ಕೆ ಭೇಟಿ ನೀಡಿ. ಬೆಳಗಾವಿಯಲ್ಲಿ ಇಂತಹ ಕೆಫೆಗಳು ಇನ್ನಷ್ಟು ಹೆಚ್ಚಾಗಲಿ. ಮೆಗ್ನೆಟಾ ತಿನ್ನಿ ಅದರ ರುಚಿಯನ್ನು ಆಸ್ವಾದಿಸಿ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದರು.
ಸಿದ್ನಾಳ ಅವರ ಸಾರಥ್ಯದ ಮೆಗ್ನೆಟಾ ಉತ್ಪನ್ನಗಳು ಅತ್ಯಂತ ಸ್ವಾದಿಷ್ಟಕರ ಮತ್ತು ವಿಭಿನ್ನವಾದ ರುಚಿಯನ್ನು ಹೊಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಲಿವೆ. ಅಲ್ಲದೇ ಈಗ ಕೆಫೆಯನ್ನು ನಿರ್ಮಿಸಿದ್ದು, ಕಾಫಿಯೊಂದಿಗೆ ವಿವಿಧ ಬಗೆಯ ವ್ಯಂಜನಗಳು ಜನರ ಗಮನ ಸೆಳೆಯಲಿವೆ ಎಂದು ಡಿಸಿಪಿ ನಾರಾಯಣ್ ಬರಮನಿ ಹೇಳಿದರು.
ಇನ್ನು ಸಂಸ್ಥಾಪಕರಾದ ದಿಗ್ವಿಜಯ ಸಿದ್ನಾಳ್ ಅವರು ಇದು ನಮ್ಮ ಮೂರನೇ ಶಾಖೆಯಾಗಿದೆ. ನಮ್ಮಲ್ಲಿ ವಿವಿಧ ಬಗೆಯ ಐಸಕ್ರೀಮ್ಸ್, ಕ್ಯಾಂಡಿಸ್, ಫಾಲೂದಾ, ಗಡಬಡ ಸೇರಿದಂತೆ ವಿಶೇಷವಾಗಿ ಐಸಕ್ರೀಂ ಸವಿಯುವವರ ಜೊತೆಗೆ ಕಾಫಿಯ ಆನಂದವನ್ನು ಪಡೆಯುವವರಿಗೆ ಕೆಫೆಯನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ. ನಾವೂ ಯಾವುದೇ ರೀತಿಯ ಎಣ್ಣೆಯನ್ನು ಉಪಯೋಗಿಸದೇ, ಶುದ್ಧ ಹಾಲಿನ ಮೂಲಕ ತಯಾರಿಸಿದ ಬೆಳಗಾವಿಯ ಬ್ರ್ಯಾಂಡ್ ಐಸಕ್ರೀಂ. ಇದನ್ನ ಬೆಳೆಸಲು ಬೆಳಗಾವಿಗರ ಪ್ರೀತಿ ವಿಶ್ವಾಸ ಅತ್ಯಗತ್ಯ ಎಂದರು.
ನಾನು ಹಾಗೂ ನನ್ನ ಇಬ್ಬರೂ ಸಹೋದರರು ಕೂಡಿಕೊಂಡು ಬೆಳಗಾವಿಯಲ್ಲಿಗ ಮೂರನೇ ಕೆಫೆಯನ್ನು ಆರಂಭಿಸಿದ್ದೇವೆ. ಕಾಫಿ, ಡೆಜರ್ಟ್ಸ್, ಡೊನೆಟ್ಸ್ ಸೇರಿದಂತೆ ಬಗೆ ಬಗೆಯ ಖಾದ್ಯಗಳು ಮೆಗ್ನೆಟಾ ಕೆಫೆಯಲ್ಲಿ ಲಭ್ಯವಿದ್ದು, ಬೆಳಗಾವಿಗರಿಂದ ಈ ಶಾಖೆಗೂ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುವ ನಿರೀಕ್ಷೆಯಿದೆ. ಎಲ್ಲರೂ ಒಂದು ಬಾರಿ ಭೇಟಿ ನೀಡಲೇಬೇಕೆಂದು ವೈಭವಿ ಸಿದ್ನಾಳ್ ಅವರು ಆಗ್ರಹಿಸಿದರು.
ಇನ್ನು ಶಶಿಕಾಂತ ಸಿದ್ನಾಳ್ ಅವರು ಮೆಗ್ನೆಟಾ ಐಸಕ್ರೀಂ ಶೇ. 100 ರಷ್ಟು ಶುದ್ಧ ಮತ್ತು ಶಾಕಾಹಾರಿ ಐಸಕ್ರೀಂ ಆಗಿದೆ. ಗ್ರಾಹಕರಿಗೆ ಉತ್ತಮ ಮತ್ತು ಆಕರ್ಷಕ ಸೇವೆ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದರು.

Spread the love

About Laxminews 24x7

Check Also

ಮುಂಬರುವ ಗ್ರಾ.ಪಂ,ಜಿ.ಪಂ,ತಾ.ಪಂ ಚುನಾವಣೆ ಬಿಜೆಪಿ ತಯಾರಿ – ಮತಕ್ಷೇತ್ರವಾರು ಸಂಘಟನಾತ್ಮಕ ಸಭೆ

Spread the loveಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ