Breaking News

ಕುಟುಂಬದ ಭದ್ರತೆಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ

Spread the love

ಬೆಳಗಾವಿಯ ಎಂಎನ್‌ಆರ್‌ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಸಂಚಾರ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಸಿಪಿ ಜ್ಯೋತಿಬಾ ನಿಕ್ಕಂ ಉದ್ಘಾಟಿಸಿದರು.

ಬೆಳಗಾವಿ: ವಾಹನ ಚಲಾಯಿಸುವಾಗ ವ್ಯಕ್ತಿಗಳು ತಮ್ಮ ಪ್ರಾಣದ ಜತೆಗೆ ಕುಟುಂಬದ ಭದ್ರತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವ ಇಡೀ ಕುಟುಂಬದ ಹೊಣೆ ತನ್ನ ಮೇಲಿದೆ ಎಂಬುದನ್ನು ಅರಿತು ಜಾಗೃತವಾಗಿರಬೇಕು ಎಂದು ಟ್ರಾಫಿಕ್ ಎಸಿಪಿ ಜ್ಯೋತಿಬಾ ನಿಕ್ಕಂ ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅವಾಸ ಫೈನಾನ್ಸಿಯರ ಲಿಮಿಟೆಡ್ ಮತ್ತು ತ್ರಿಗುಣಾ ಸೈನ್ಸ್ ಆಫ್ ಲಿವಿಂಗ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸರುಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಜಾಗರೂಕತೆ ಹಾಗೂ ಅವಿವೇಕತನದಿಂದ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ ಎಂದರು.
ದಕ್ಷಿಣ ಸಂಚಾರ ಠಾಣೆಯ ಪಿಎಸ್‌ಐ ಮಹಾಂತೇಶ ಮಿರ್ಜಿ ಮಾತನಾಡಿ, ಸಂಚಾರ ನಿಮಯಗಳ ಮಹತ್ವದ ಕುರಿತು ವಿವರಿಸಿದರು. ಎಂ.ಎನ್.ಆರ್.ಎ, ಸಿಟಿಇ, ಸಾಗರ ಮತ್ತು ಕೆ.ಎಸ್.ಆರ್ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ  250  ಹೆಲ್ಮೆಟ್ ಉಚಿತವಾಗಿ ವಿತರಿಸಲಾಯಿತು.
ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಗುರವ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ  ಸಂಜೀತ ಪಟ್ಟಣಶೆಟ್ಟಿ, ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ, ಶಶಿಧರ, ಅನುಷ್ಕಾ ದಾಸ, ಅತುಲ ಕೃಷ್ಣ, ದೀಪಕ, ಮಾರುತಿ, ಮಲ್ಲಿಕಾರ್ಜುನ ಇತರರಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ