Breaking News

ಇಂಡೋ – ಪಾಕ್‌ ವಿವಾದದ ನಡುವೆ ಚುಟುಕು ಕ್ರಿಕೆಟ್‌ ಕದನ – ಇಂದಿನಿಂದ ವಿಶ್ವಕಪ್‌ ಹಬ್ಬ

Spread the love

ಮುಂಬೈ: ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್‌ ಹಬ್ಬ ಇಂದಿನಿಂದ ಶುರುವಾಗುತ್ತಿದೆ. ಈ ಬಾರಿ ವಿವಾದಗಳಿಂದಲೇ ಸದ್ದು ಮಾಡಿದ 10ನೇ ಆವೃತ್ತಿಯ ಚುಟುಕು ಕ್ರಿಕೆಟ್‌ ಸಮರಕ್ಕೆ ಚಾಲನೆ ಸಿಗಲಿದೆ. ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಅಮಾನತುಗೊಳಿಸಿದ ಬಳಿಕ ಶುರುವಾದ ವಿವಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಬಂದುನಿಂತಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ ರೋಚಕ ಎಂದೇ ಹೇಳಬಹುದು.

ಭಾರತದ 5 ಹಾಗೂ ಶ್ರೀಲಂಕಾದ  3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಟಿ20 ವಿಶ್ವಕಪ್‌ಗೆ ಈಗ 20 ವರ್ಷದ ಸಂಭ್ರಮ
ಐಸಿಸಿ ಟಿ20 ವಿಶ್ವಕಪ್‌ ಈಗ 20 ವರ್ಷದ ಸಂಭ್ರಮದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮೊದಲ ಬಾರಿ ಟೂರ್ನಿ ಆಯೋಜಿಸಿದ್ದು 2007ರಲ್ಲಿ. ಅದರಲ್ಲಿ ಭಾರತ ಗೆದ್ದಿತ್ತು. 2007-2024ರ ನಡುವೆ ಒಟ್ಟು 9 ಬಾರಿ ಟಿ20 ವಿಶ್ವಕಪ್‌ ನಡೆದಿದೆ. ಪ್ರತಿ 2 ವರ್ಷಕ್ಕೊಮ್ಮೆ ಟೂರ್ನಿ ನಡೆಯುತ್ತದೆ. ಈ ಬಾರಿ 10ನೇ ಆವೃತ್ತಿ. ಭಾರತ ಸೇರಿದಂತೆ ಒಟ್ಟು 6 ತಂಡಗಳು ಈವರೆಗೂ ಕನಿಷ್ಠ ಒಮ್ಮೆಯಾದರೂ ಚಾಂಪಿಯನ್‌ ಆಗಿವೆ.

ಭಾರತ-ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ ಪಂದ್ಯ, ಟ್ರೋಫಿ, ಸ್ಟಾರ್‌ ಆಟಗಾರರು, ಚಾಂಪಿಯನ್‌ ಟೀಮ್‌ ಅಥವಾ ಕ್ರೀಡಾಂಗಣಕ್ಕಿಂತ ಜಾಸ್ತಿ ಪಾಕಿಸ್ತಾನ, ಬಾಂಗ್ಲಾದೇಶ ವಿವಾದವೇ ಹೆಚ್ಚು ಸದ್ದು ಮಾಡಿತು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಹಾಗೂ ಭಾರತೀಯರ ಮೇಲಿನ ದೌರ್ಜನ್ಯ ನಡೆಯುತ್ತಿದ್ದಾಗಲೇ ಬಾಂಗ್ಲಾದೇಶ ತಂಡದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಅಮಾನತು ಮಾಡಲಾಯಿತು. ಬಳಿಕ ಬಾಂಗ್ಲಾದೇಶ ಭಾರತದಿಂದ ಹೊರಗೆ ಪಂದ್ಯಗಳನ್ನ ನಿಯೋಜಿಸುವಂತೆ ಪಟ್ಟು ಹಿಡಿದಿತ್ತು. ಇದಕ್ಕೆ ಒಪ್ಪದ ಐಸಿಸಿ ಬಾಂಗ್ಲಾದೇಶ ತಂಡವನ್ನೇ ಟೂರ್ನಿಯಿಂದ ಹೊರದಬ್ಬಿತ್ತು. ಬಾಂಗ್ಲಾ ತಂಡ ಹೊರದಬ್ಬಿದ ಬಳಿಕ ಸ್ಕಾಟ್‌ಲೆಂಡ್‌ಗೆ ಅವಕಾಶ ನೀಡಲಾಯಿತು. ಆದ್ರೆ ಈ ವಿಷಯದಲ್ಲಿ ಮೂಗು ತೂರಿಸಿದ ಪಾಕಿಸ್ತಾನ ಮೊದಲು ಟೂರ್ನಿ ಬಹಿಷ್ಕರಿಸೋದಾಗಿ ಹೇಳಿತ್ತು. ಆ ನಂತರ ಟೂರ್ನಿ ಆಡುತ್ತೇವೆ, ಆದ್ರೆ ಭಾರತದ ವಿರುದ್ಧ ಆಡಲ್ಲ ಎಂದು ಹೇಳಿದೆ. ಆದಾಗ್ಯೂ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ವಿಶ್ವಕಪ್‌ ಆಡಲು ತೆರಳಲಿದೆ.

ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ ಆತಿಥ್ಯ ವಹಿಸುತ್ತಿದೆ. 2016ರಲ್ಲಿ ಮೊದಲ ಬಾರಿ ಭಾರತದಲ್ಲಿ ಪಂದ್ಯಗಳು ನಡೆದಿದ್ದವು. 2021ರಲ್ಲಿ ಆತಿಥ್ಯ ಹಕ್ಕು ಭಾರತಕ್ಕೆ ಸಿಕ್ಕರೂ ಪಂದ್ಯಗಳು ಕೋವಿಡ್‌ ಕಾರಣದಿಂದಾಗಿ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಗೊಂಡಿದ್ದವು. ಈ ಬಾರಿ ಭಾರತ-ಶ್ರೀಲಂಕಾ ಜಂಟಿಯಾಗಿ ಟೂರ್ನಿ ನಡೆಸುತ್ತಿವೆ. ಟೂರ್ನಿ ಆಯೋಜನೆಗೆ ಆರಂಭದಲ್ಲಿ ಶ್ರೀಲಂಕಾ ಮಾತ್ರ ಆಸಕ್ತಿ ತೋರಿತ್ತು. 2021ರಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದ ಐಸಿಸಿ, ಟೂರ್ನಿ ಲಂಕಾದಲ್ಲಿ ನಡೆಯುವುದಾಗಿ ತಿಳಿಸಿತ್ತು. ಆದರೆ ಟೂರ್ನಿಯ ವಿಸ್ತರಣೆ ಹಾಗೂ ಲಂಕಾದಲ್ಲಿ ಕ್ರೀಡಾಂಗಣಗಳ ಕೊರತೆಯ ಕಾರಣದಿಂದಾಗಿ ಭಾರತದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಆಯೋಜಿಸಲು ಐಸಿಸಿ ನಿರ್ಧರಿಸಿತು. ಶ್ರೀಲಂಕಾ ಈ ಹಿಂದೆ 2012ರಲ್ಲಿ ವಿಶ್ವಕಪ್ ಆಯೋಜಿಸಿತ್ತು.
ಟೂರ್ನಿಯಲ್ಲಿ ಒಟ್ಟು 20 ತಂಡಗಳಿವೆ. ಇದನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಇತರ 4 ತಂಡಗಳ ವಿರುದ್ಧ ಒಮ್ಮೆ ಆಡಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಸೂಪರ್‌-8 ಹಂತ ಪ್ರವೇಶಿಸಲಿವೆ. ಈ 8 ತಂಡಗಳನ್ನು ಮತ್ತೆ ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ತಂಡಗಳು ತಲಾ 1 ಬಾರಿ ಪರಸ್ಪರ ಆಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮೀಸ್‌ನಲ್ಲಿ ಗೆದ್ದ ತಂಡಗಳು ಫೈನಲ್‌ ಆಡಲಿವೆ.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯವಿಡೀ ಒಣ ಹವೆಯ ವಾತಾವರಣ

Spread the loveಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬರುತ್ತಿದ್ದು, ಇಂದೂ ಸಹ ಅದೇ ಹವಾಮಾನವಿರಲಿದೆ ಎಂದು ಇಲಾಖೆ ತಿಳಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ