Breaking News

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the love

ಕೊಟಗುಂಡಹುಣಸಿಯಲ್ಲಿ ನಿವ
ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.
ಆದ್ರೆ ಇಲ್ಲೊಬ್ಬ ನಿವೃತ್ತ ಶಿಕ್ಷಕ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ, ಜತೆಗೆ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಬಡ ಕುಟುಂಬಗಳ ಕಲ್ಯಾಣೋತ್ಸವಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಯಾರು ಆ ಶಿಕ್ಷಕರು? ಏನು ಅವರ ಕಾರ್ಯ? ನೋಡೋಣ ಈ ವರದಿಯಲ್ಲಿ…

ಕೊಟಗುಂಡಹುಣಸಿ ಗ್ರಾಮದ ನಿವೃತ್ತ ಶಿಕ್ಷಕ ಚಂದ್ರಗೌಡ ಪಾಟೀಲ್ ಅವರ ಮಾದರಿಯ ಸೇವೆ

ತಮ್ಮ ನಿವೃತ್ತಿ ಜೀವನದ ಹಣ ಜನ ಸೇವೆಗೆ ಉಪಯೋಗಿಸುವ ಮೂಲಕ ಇತರರಿಗೆ ಮಾಎಸ್ ಹುಬ್ಬಳ್ಳಿ ತಾಲೂಕಿನ ಕೊಟಗುಂಡಹುಣಸಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಚಂದ್ರಗೌಡ ಪಾಟೀಲ್ ಅವರು ತಮ್ಮ ಜೀವನದ ಉಳಿತಾಯವನ್ನು ಸಮಾಜ ಸೇವೆಗೆ ಅರ್ಪಿಸಿದ್ದಾರೆ. ಯಾವುದೇ ಸಹಾಯ ಸಹಾಕರ ಕೇಳದೇ ಸುಮಾರು 10 ಲಕ್ಷ ರೂಪಾಯಿ ಸ್ವಂತ ಹಣ ಖರ್ಚು ಮಾಡಿ, ಕೊಟಗುಂಡಹುಣಸಿ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿ ಅಕ್ಕ ಮಾಹದೇವಿ ಮಂಟಪ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಬಡ ಕುಟುಂಬಗಳ ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಉಪಯೋಗವಾಗುವ ಕಲ್ಯಾಣ ಮಂಟಪವನ್ನು ಇದಾಗಿದೆ. ಈ ಕಲ್ಯಾಣ ಮಂಟಪ ಕೇವಲ ತಮ್ಮ ಗ್ರಾಮಕ್ಕೆ ಮಾತ್ರವಲ್ಲದೆ, ಅಕ್ಕಪಕ್ಕದ ಹಲವು ಗ್ರಾಮಗಳ ಬಡ ಕುಟುಂಬಗಳಿಗೆ ಸಹ ನೆರವಾಗಲು ದೃಷ್ಟಿಕೋನ ಹೊಂದಿದೆ. ಮದುವೆ, ನಾಮಕರಣ, ಧಾರ್ಮಿಕ ಕಾರ್ಯಕ್ರಮಗಳು ಎಲ್ಲಕ್ಕೂ ಉಚಿತವಾಗಿ ಬಳಕೆಗೆ ಅವಕಾಶ ನೀಡಲು ಇದನ್ನು ನಿರ್ಮಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮುಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಲ್ಯಾಣ ಮಂಟಪ ಉದ್ಘಾಟಿಸಲಾಗಿದೆ.
ಅಕ್ಕ ಮಹಾದೇವಿ ಹೆಸರಿನ ಕಲ್ಯಾಣ ಮಂಟಪವನ್ನು ಧಾರವಾಡದ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಶಿಕ್ಷಕರಾದ ಚಂದ್ರಗೌಡರವರು ನಿವೃತ್ತಿಯ ನಂತರವೂ ಸಮಾಜದ ಬಗ್ಗೆ ಕಾಳಜಿ ತೋರಿದ ಅವರ ಈ ಕಾರ್ಯ, ಇಂದಿನ ಯುವಕರಿಗೂ ಹಾಗೂ ವಿವಿಧ ಇಲಾಖೆಯಿಂದ ನಿವೃತ್ತರಾಗುವವರಿಗೂ ಪ್ರೇರಣೆಯಾಗಿದೆ.
ಸಮಾಜ ಕೊಟ್ಟಿದ್ದನ್ನು ಸಮಾಜಕ್ಕೇ ಹಿಂತಿರುಗಿಸಬೇಕು ಅನ್ನೋ ಮನೋಭಾವವೇ ಈ ಸೇವೆಯ ಹಿಂದೆ ಇದ್ದು, ನಿವೃತ್ತ ಶಿಕ್ಷಕರ ಈ ಸಮಾಜ ಸೇವೆಯ ಕಾರ್ಯವನ್ನು ಕುಂದಗೋಳ ಶಾಸಕರು ಎಂ ಆರ್ ಪಾಟೀಲ್ ಸೇರಿದಂತೆ ಮುಮ್ಮಿಗಟ್ಟಿ ಬಸವಾನಂದ ಶ್ರೀಗಳು ಶ್ಲಾಘಿಸಿದರು.
: ಇಂದಿನ ದಿನಮಾನಗಳಲ್ಲಿ ಬಡ ಕುಟುಂಬಗಳು ಕಲ್ಯಾಣ ಮಂಟಪ ಬಳಿಯೇ ಹೊಗಲು ಹಿಂದೆ ಮುಂದೆ ನೋಡುವ ಸ್ಥಿತಿ ಈಗಿನ ಕಾಲದಲ್ಲಿ ನಿರ್ಮಾಣವಾಗಿದ್ದು, ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿನ ಕುಟುಂಬಗಳಿಗೆ ಈ ಕಲ್ಯಾಣ ಮಂಟಪ ತುಂಬಾ ಸಹಕಾರಿಯಾಗುವುದರಲ್ಲಿ ಎರಡನೇ ಮಾತಿಲ್ಲ. ಚಂದ್ರಗೌಡರವರ ಈ ಕಾರ್ಯಕ್ಕೆ ನಮ್ಮ ಕಡೆಯಿಂದ ಸಲಾಂ ಹೇಳಲೇಬೇಕು


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ