Breaking News

ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಆರೋಪ – ಆರ್.ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು

Spread the love

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ  ಹಾಗೂ ವಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದರು.

ವಿಧಾನಸೌಧದ ಕೆಂಗಲ್‌ ಗೇಟ್‌ ಬಳಿ ಮಾತನಾಡಿದ ಶಾಸಕ ವಿಜಯೇಂದ್ರ, ಸಿದ್ದರಾಮಯ್ಯ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ. ಹಗರಣಗಳ ಅಲೆಯಲ್ಲಿ ಸಿಲುಕಿಕೊಂಡಿದೆ. ಅಬಕಾರಿ ಇಲಾಖೆವರೆಗೂ  ಬಂದು ತಲುಪಿದೆ. ಮನಸೋ ಇಚ್ಛೆ ಬೇಕಾಬಿಟ್ಟಿ ಲಿಕ್ಕರ್ ಲೆಸೆನ್ಸ್ ಕೊಡ್ತಾ ಇದ್ದಾರೆ. ಇಷ್ಟು ಭ್ರಷ್ಟಾಚಾರ ಯಾವುದೇ ಇಲಾಖೆ ತೆಗೆದುಕೊಂಡಿಲ್ಲ. 6 ಸಾವಿರ ಕೋಟಿ ಹಗರಣ ಆಗಿದೆ. ಆಡಿಯೋ ಟೇಪ್ ನಲ್ಲಿ ಹೆಸರು ಬಂದಿದೆ ಎಂದು ಕಿಡಿ ಕಾರಿದ್ರು.

ಗಣಪತಿ ಅವರ ಕೇಸ್ ನಲ್ಲಿ ಜಾರ್ಜ್ ರಾಜೀನಾಮೆ ಕೊಡಬೇಕಿತ್ತು. ಅಬಕಾರಿ ಸಚಿವರ ವಿರುದ್ಧ ಸೂಕ್ತ ಸಿಎಂ ತೆಗೆದುಕೊಳ್ಳಬೇಕು. ಮೊದಲು ರಾಜೀನಾಮೆ ಪಡೆದು ನಂತರ ತನಿಖೆ ಆಗಲಿ. ಅವರು ಭ್ರಷ್ಟಾಚಾರ ನಡೆಸಿಲ್ಲ ಎಂದಾದ್ರೆ ಆಮೇಲೆ ಮತ್ತೆ ಬರಲಿ. ಸರ್ಕಾರ ಕೂಡಲೇ ರಾಜೀನಾಮೆ ಪಡೆಯದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ಇನ್ನೂ ವಿಧಾನಸಭೆಯಲ್ಲಿ ಮಾತನಾಡಿದ ಆರ್.‌ ಅಶೋಕ್‌, 6 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ದಾಖಲೆ ಕೇಳಿದ್ರು, ಐದು ದಾಖಲೆ ಕೊಟ್ಟಿದೀವಿ. ಇಷ್ಟು ಕೊಟ್ರೂ ಸರ್ಕಾರ ಸುಮ್ಮನೆ ಇದೆ. ಆರು ಸಾವಿರ ಕೋಟಿ ಲೂಟಿ ಆದರೂ ಮೌನ ಏಕೆ? ಮೊದಲು ತಿಮ್ಮಾಪೂರ್‌ ರಾಜೀನಾಮೆ ಪಡೀರಿ ಎಂದು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ