Breaking News

ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು,

Spread the love

ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರವಾಗಿ ಗಾಯಗೊಂಡು ಘಟನೆ ನಡೆದಿದೆ
ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಸಮೀಪ ವ್ಯಾಗನಾರ್ ಕಾರು ರಸ್ತೆ ಬದಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಈ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಗೋವಾ ಪಣಜಿ ನಗರದಿಂದ ಅಳ್ನಾವರ ಕಡೆಗೆ ತೆರಳುತ್ತಿದ್ದ
ವ್ಯಾಗನಾರ್ ಕಾರು ಜಿಎ 05ಬಿಝ323 ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಾರು ಚಾಲಕ ಅಬ್ದುಲ್ ಖಾದ್ (55)ಚಿಮ್ಲಾ ಪಣಜಿ ಗೋವಾ) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ದಾದು ಕೌಸರ್ (30) ಮತ್ತು ಹಿಂಭಾಗದಲ್ಲಿ ಕುಳಿತಿದ್ದ ಹೀನಾ ಕೌಸರ್ (39) ಪಣಜಿ ಗೋವಾ ಇವರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗೆ ರಾಮನಗರದಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ರವಾನಿಸಲಾಗಿದೆ ವ್ಯಾಗನಾರ್ ಕಾರು ನುಜ್ಜು,ನುಜ್ಜಾಗಿದ್ದು ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಖಾನಾಪೂರ ಪೋಲಿಸ್ ಠಾಣೆಯ ಪೊಲೀಸರು ಧಾವಿಸಿ ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ
ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು ಇದರ ಕುರಿತು ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ