ಕಾಲು ಜಾರಿ ಬಾವಿಗೆ ಬಿದ್ದು ಯುವಕನ ಸಾವು…!!!
ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಖಾನಾಪೂರಾ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ನಡೆದಿದೆ.
ಖಾನಾಪೂರ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ದಿಗ್ವಿಜಯ ಮನೋಹರ್ ಜಾಧವ (36) ಎಂಬ ಯುವಕ ತನ್ನ ಹೊಲದ ಬಾವಿಯಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ
ನಿನ್ನೆ ಬೆಳಿಗ್ಗೆ ದಿಗ್ವಿಜಯ “ಹೊಲದ ಕಡೆಗೆ ಹೋಗುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದ. ಆದರೆ ಬಹಳ ಸಮಯವಾದರೂ ಮನೆಗೆ ಮರಳಿ ಬಾರದ ಕಾರಣ ಕುಟುಂಬದವರು ಹೊಲಕ್ಕೆ ಹುಡುಕಲು ಹೋದಾಗ ಬಾವಿಯ ಬಳಿಯಲ್ಲಿ ಅವನ ಚಪ್ಪಲಿಗಳು ಕಂಡುಬಂದವು. ಇದರಿಂದ ದಿಗ್ವಿಜಯ ಬಾವಿಗೆ ಬಿದ್ದಿರಬಹುದು ಎಂಬ ಅನುಮಾನ ಕುಟುಂಬಸ್ಥರಿಗೆ ಬಂದು ಅವರು ಖಾನಾಪೂರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತದನಂತರದಲ್ಲಿ ಅಗ್ನಿಶಾಮಕ ಸಿಬ್ಬಂದಿಯವರು ಸುಮಾರು ಗಂಟೆಗಳ ಶ್ರಮದ ನಂತರ ದಿಗ್ವಿಜಯನ ಶವವನ್ನು ಬಾವಿಯಿಂದ ಹೊರತೆಗೆದರು. ನಂತರ ಶವವನ್ನು ಖಾನಾಪೂರದ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗುತ್ತದೆ.
ಈ ಘಟನೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಸ್ಥಳದಲ್ಲಿ ಪಂಚನಾಮೆ ಕಾರ್ಯ ನಡೆಸಿ. ಈ ಪ್ರಕರಣದ ಮುಂದಿನ ತನಿಖೆಯನ್ನು ಖಾನಾಪೂರ ಪೊಲೀಸರು ಮುಂದುವರೆಸಿದ್ದಾರೆ.
Laxmi News 24×7