Breaking News

ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾ. ಪಂ.ಯಲ್ಲಿ ಅಧ್ಯಕ್ಷ ಆಡಿದ್ದೇ ಆಟ ???!! 2 ಗುಂಟೆಗೂ ಅಧಿಕ ಜಾಗ ಕಬಳಿಕ ಆರೋಪ

Spread the love

ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾ. ಪಂ.ಯಲ್ಲಿ ಅಧ್ಯಕ್ಷ ಆಡಿದ್ದೇ ಆಟ ???!!
2 ಗುಂಟೆಗೂ ಅಧಿಕ ಜಾಗ ಕಬಳಿಕ ಆರೋಪ
ಅಧಿಕಾರಕ್ಕೆ ಬರುವ ಮುನ್ನ ಜನ, ಗ್ರಾಮ ಅಭಿವೃದ್ಧಿ ವಾಗ್ದಾನ ಮಾಡೋ ಪಂಚಾಯತಿ ಜನಪ್ರತಿನಿಧಿಗಳು ಅಧಿಕಾರ ಸಿಕ್ಕಮೇಲೆ ಏನೇಲ್ಲ ಮಾಡುತ್ತಾರೆ ಎಂಬವುದಕ್ಕೆ ಇದೂ ತಾಜಾ ಉದಾಹರಣೆಯಾಗಿದೆ. ಪಂಚಾಯತಿ ಅಧ್ಯಕ್ಷನ ಸರ್ಕಾರಿ ಜಮೀನು ತಮ್ಮ ಸಂಬಂಧಿ ಹೆಸರಿಗೆ ಮಾಡಿಕೊಂಡ ಅಕ್ರಮದ ಬಗ್ಗೆ ಬೇಸತ್ತ ಗ್ರಾಮಸ್ಥರು ಬೀದಿಗೆ ಇಳಿದು ತನಿಖೆ ಆಗ್ರಹಿಸಿದ್ದಾರೆ.
ಹೌದು ಇದೂ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಪಂಚಾಯತಿ ಅಧ್ಯಕ್ಷ ಶಿವಪ್ಪ ಕುಂಬಾರ ಅವರ ಮೇಲೆ ಗ್ರಾಮಸ್ಥರೇ ಈಗ ಬೀದಿಗೆ ಇಳಿದು ಗಂಭೀರ ಆರೋಪಗಳನ್ನು ಮಾಡುವುದರ ಜತೆಗೆ ಅಧ್ಯಕ್ಷನ ಆಕ್ರಮದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಅವರನ್ನು ಭೇಟಿ ಮಾಡಿದ ಗ್ರಾಮದ ಪ್ರಮುಖರು ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓ ವಿರುದ್ಧ ತನಿಖೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇನ್ನೂ ಪಂಚಾಯತಿ ಅಧ್ಯಕ್ಷ ಶಿವಪ್ಪ ಕುಂಬಾರ ಹಾಗೂ ಪಿಡಿಓ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು,
ಅಧ್ಯಕ್ಷನ ಸಂಬಂಧಿಗಳ ಹೆಸರಿಗೆ ಸರ್ಕಾರಿ ಜಾಗವನ್ನು ಕಬಳಿಸಿರುವ ಆರೋಪ ಕೇಳಿ ಬಂದಿದೆ. ಕೋಟಿ ಬಿಲ್ ಮೂಲಕ ಪಂಚಾಯತಿ ಅಧ್ಯಕ್ಷ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಫಕ್ಕೀರಗೌಡ ಯಡ್ರಾವಿ ಅವರು ತಮ್ಮ ಮನೆಯ ಮುಂದಿನ ತಗ್ಗುಗಳಿಗೆ ಸ್ವಂತ ಹಣ ಖರ್ಚು ಮಾಡಿ ಮೊರಂ ಹಾಕಿದ್ದು,
ಗ್ರಾಪಂ ಅಧಿಕಾರಿಗಳು ಕಾಮಗಾರಿ ಮಾಡಲಾಗಿದೆ ಎಂದು ಹಣ ಖರ್ಚು ಹಾಕಿ ಖೊಟ್ಟಿ ಬಿಲ್ ಸೃಷ್ಠಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಅಧ್ಯಕ್ಷ ಸ್ಥಳೀಯ ಶಾಸಕರ ಪ್ರಭಾವ ಬಳಸಿಕೊಂಡು ತಾನು ಏನಬೇಕಾದ್ರೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಹಾಗಾಗಿ ಈ ಕೂಡಲೇ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓ ಅವರ ಅಕ್ರಮಗಳ ಬಗ್ಗೆ ತನಿಖೆ ಕೈಗೊಂಡು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ