Breaking News

ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ,:ಜೋಶಿ

Spread the love

ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ,

 

ಧಾರವಾಡ: ಮಹದಾಯಿ ವಿಚಾರವಾಗಿ ಎಲ್ಲ ಕ್ಲಿಯರೆನ್ಸ್​ ನಾವು ಮಾಡಿಸಿದ್ದೇವೆ. ಬೇರೆ ಯಾರ ಕಾಲದಲ್ಲೂ ಯೋಜನೆಗಾಗಿ ಒಂದು ಪೈಸೆ ಕೆಲಸ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಭಾಷಣ ಮಾಡೋರು ಮಾಡಲಿ, ಅದಕ್ಕೆ ನನ್ನ ತಕರಾರಿಲ್ಲ. ಹಿಂದೆ ಮನಮೋಹನ್ ಸಿಂಗ್, ಸೋನಿಯಾ ಅವರ ಸರ್ಕಾರ ಇದ್ದಾಗ ಅದನ್ನು ಟ್ರಿಬ್ಯುನಲ್​ಗೆ ಕೊಡಲಾಗಿತ್ತು. ಆಗ ನಾವು ಅದನ್ನು ಬೇಡ ಎಂದಿದ್ವಿ. ಟ್ರಿಬ್ಯುನಲ್​ಗೆ ಕೊಡುವುದಾದರೆ ಅದನ್ನು ಕುಡಿಯುವ ನೀರನ್ನು ಹೊರತುಪಡಿಸಿ‌ ಕೊಡಿ ಎಂದಿದ್ವಿ. ಆದರೂ ಅವರು ಎಲ್ಲವನ್ನೂ ಸೇರಿಸಿ ಟ್ರಿಬ್ಯುನಲ್ ಕೊಟ್ಟರು ಎಂದರು.

ನಂತರ ಅದಕ್ಕೆ ಕಾಲಮಿತಿ ಮಾಡಲಿಲ್ಲ. ನ್ಯಾಯಮೂರ್ತಿಗಳನ್ನು ಕೂಡಾ ನೇಮಿಸಲಿಲ್ಲ. ಕಚೇರಿ ಕೂಡ ಕೊಡಲಿಲ್ಲ. ಮೋದಿ ಸರ್ಕಾರ‌ ಬಂದ ನಂತರ ನಾವು ತಕ್ಷಣ ನ್ಯಾಯಮೂರ್ತಿ ನೇಮಿಸಿದೆವು. ಅವರಿಗೆ ನಾಲ್ಕು ವರ್ಷ ಸಮಯ ಕೊಟ್ಟೆವು. 2018ಕ್ಕೆ ಮೊದಲು ಗಡ್ಕರಿ‌ ಅವರಿಗೆ ಟ್ರಿಬ್ಯುನಲ್ ವಿಸ್ತರಣೆಗೆ ಸಮಯಾವಕಾಶ ಕೊಡಬೇಕು ಎಂದು ಕೇಳಿದ್ರು. ಆಗ ನಾನು ಗಡ್ಕರಿ‌ ಅವರಿಗೆ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ವಿನಂತಿಸಿಕೊಂಡೆ. 2018ಕ್ಕೆ ವರದಿ ಬರುವಂತೆ ಮಾಡಿದೆವು, ನಂತರ ಅವಾರ್ಡ್​ ಬಂತು ಎಂದು ಹೇಳಿದರು.

ಇದು ಗೆಜೆಟ್ ನೋಟಿಫಿಕೇಷನ್ ಆಗಲ್ಲ ಎಂದು ಆಗ ಸಿಎಂ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ರು. ನಾವೇ ಗೆಜೆಟ್ ಮಾಡಿಸಿದ್ವಿ. ಸಿಎಂಗೆ ಇವತ್ತೂ ಕೂಡಾ ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ ಅಂತಾರೆ. ಇದರ ಡಿಪಿಆರ್ ಆಗಲ್ಲ ಎಂದ್ರು. ಡಿಪಿಆರ್ ಕೂಡ ಆಗಿದೆ. ಈಗ ವೈಲ್ಡ್ ಲೈಫ್ ಬೋರ್ಡ್​ನವರು ತಾಂತ್ರಿಕ ತೊಂದರೆ ಇದೆ ಎಂದು ಗೋವಾದವರಿಂದ ತಕರಾರಿದೆ. ಅದನ್ನು ಹೈಕೋರ್ಟ್​ನಲ್ಲಿ ಅರ್ಜಿ ಹಾಕಿ ತೆಗೆದು ಹಾಕುವಂತೆ ಮಾಡಬೇಕು ಎಂದು ಹೇಳಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ