ಖಾನಾಪೂರ : ಹಜ್ ಯಾತ್ರೆಗೆ ತೆರಳುತ್ತಿರುವ ಮುಸ್ಲಿಂ ಬಾಂಧವರನ್ನು ಶುಭ ಹಾರೈಸಿ ಬೀಳ್ಕೊಟ್ಟ ಪಿಎಸ್ಐ ಹಾಗೂ ವಿವಿಧ ಮುಖಂಡರು
ಹೌದು ಶಾಂತಿ ಸೌಹಾರ್ದತೆ ಮತ್ತು ನಮ್ಮ ದೇಶದ ಭಾವೈಕ್ಯತೆಯ ಬಗ್ಗೆ ಬೇಡಿಕೊಂಡು ಜನರಲ್ಲಿ ಪ್ರೀತಿ ಪ್ರೇಮದಿಂದ ಜೀವನ ಸಾಗಿಸಲು ಆ ಅಲ್ಲಾಹನ ಬಳಿ ಬೇಡಿಕೊಂಡು ಬನ್ನಿ ಎಂದು ನಂದಗಡ ಪೋಲಿಸ್ ಠಾಣೆಯ ಪಿಎಸ್ಐ ಬಾದಾಮಿ ಅವರು ಹಜ್ ಯಾತ್ರೆಗೆ ತೆರಳಿದ ಮುಸ್ಲಿಂ ಬಂಧು, ಸಹೋದರಿಯರಲ್ಲಿ ಕೇಳಿಕೊಂಡರು ನಂದಗಡದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮನ್ಸೂರ್ ತಹಶೀಲ್ದಾರ್ ಅವರು ಹಜ್ ಯಾತ್ರೆಗೆ ತೆರಳಿದ ಸಹೋದರ, ಸಹೋದರಿಯರನ್ನು ಗೌರವಿಸುವ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಖಾನಾಪೂರ ಪಿಎಲ್ ಡಿ ಬ್ಯಾಂಕಿನ ನಿವೃತ್ತಿ ವ್ಯವಸ್ಥಾಪಕ ಅಬ್ದುಲ್ ಸತ್ತಾರ ಜಂಗುಬಾಯಿ, ಶಿಕ್ಷಕಿ ಯಾಸ್ಮಿನ್ ತಹಶೀಲ್ದಾರ್, ಯುವ ಉದ್ಯಮಿ ಹಾರೀಶ್ ಜಂಗುಬಾಯಿ, ಪಿಡಬ್ಲ್ಯುಡಿ ಗುತ್ತಿಗೆದಾರರ ಮೆನೋದ್ದಿನ್ ಕಿತ್ತೂರು,ಬಶೀರಾ ಕಿತ್ತೂರು ಸೇರಿದಂತೆ ಇನ್ನಿತರರು ಈ ಸಲದ ಹಜ್ ಯಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಮನ್ಸೂರ್ ತಹಶೀಲ್ದಾರ್ ಅವರು ನಮ್ಮ ಗ್ರಾಮಸ್ಥರ ಬಗ್ಗೆ ಎಲ್ಲರ ಬಗ್ಗೆಯೂ ಹಜ್ ಸಂದರ್ಭದಲ್ಲಿ ದುವಾ ಮಾಡಲು ವಿನಂತಿಸಿದ್ರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹಾಜಿ ಮುಹಮ್ಮದ್ ಇಕ್ಬಾಲ್ ಬಸರೀಕಟ್ಟಿ, ರಫೀಕ್ ಬಸರೀಕಟ್ಟಿ, ಮಹಮ್ಮದ್ ಶಫೀ ಖಾಜಿ,ಇಸಾಕ್ ತಾಸೆವಾಲೆ,ಸುಭಾನಿ ಯಳ್ಳೂರ,ಲಾಯಕಲಿ ಬಿಚ್ಚುನವರ, ಸಂದೀಪ್ ಪಾರೀಶ್ವಾಡಕರ, ನಾಗೇಂದ್ರ ಪಾಟೀಲ್, ಕಿಶೋರ್ ಕಲಾಲ, ಇಲಿಯಾಸ್ ಬಸರೀಕಟ್ಟಿ ಸೇರಿದಂತೆ ಮುಸ್ಲಿಂ ಸಮುದಾಯದ ಧರ್ಮಗುರು ಉಪಸ್ಥಿತರಿದ್ದರು.
Laxmi News 24×7