Breaking News

Yearly Archives: 2026

ತುರಮುರಿ ಕಸದ ಡಿಪೋಗೆ ಶಾಶ್ವತ ಪರಿಹಾರ ಹಾಗೂ ಬೆಳಗಾವಿಯಲ್ಲಿ ಸೆಮಿಕಂಡಕ್ಟರ್ ಪ್ಲಾಂಟ್ ಸ್ಥಾಪನೆಗೆ ಆಗ್ರಹ

ಬೆಳಗಾವಿಯ ತುರಮುರಿ ಕಸದ ಡಿಪೋದಿಂದ ಹರಡುತ್ತಿರುವ ಮಾಲಿನ್ಯ ತಡೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಕೈಗಾರಿಕಾ ಅಭಿವೃದ್ಧಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಸ್ಥಾಪಿಸಬೇಕು ಎಂದು ಸೋಶಿಯಲ್ ಜಸ್ಟಿಸ್ ಫೋರಂ ಜಿಲ್ಲಾಡಳಿತಕ್ಕೆ ಮಹತ್ವದ ಮನವಿ ಸಲ್ಲಿಸಿದೆ. ಬೆಳಗಾವಿ ತಾಲೂಕಿನ ತುರಮುರಿ ಕಸದ ಡಿಪೋದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದ್ದು, ಮಣ್ಣು ಮತ್ತು ನೀರು ಕಲುಷಿತಗೊಂಡು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ …

Read More »

ಧಾರವಾಡ ವಿದ್ಯಾರ್ಥಿ ಸುಸೈಡ್ ಪ್ರಕರಣ…ವಿದ್ಯಾಗಿರಿ ಇನಸ್ಪೆಕ್ಟರ್ ತಹಶಿಲ್ದಾರ ಸಸ್ಪೆಂಡ್

ಧಾರವಾಡ:-ಧಾರವಾಡದಲ್ಲಿ ತಂದೆ ಇಲ್ಲದ ತಬ್ಬಲಿ ವಿದ್ಯಾರ್ಥಿ ಸುಸೈಡ್ ಪ್ರಕರಣಕ್ಕೆ ಮತ್ತೊಂದು ಬಲಿ..ಧಾರವಾಡ ವಿದ್ಯಾಗಿರಿ ಇನಸ್ಪೆಕ್ಟರ್ ರಫೀಕ್ ತಹಶೀಲ್ದಾರ ಸಸ್ಪೆಂಡ್ ಆಗಿದ್ದಾರೆ.. ಕೆಲ ಘಂಟೆಗಳ ಹಿಂದೆ ಪೋಲೀಸ ಇಲಾಖೆಯ ವಿರುದ್ಧ ಹರಿಹಾಯ್ದಿದ್ದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಒಂದೆರಡು ದಿನದಲ್ಲಿ ಕಮೀಷನರ್ ಎನ್ ಶಶಿಕುಮಾರ್ ಮೇಲೆ ಕ್ರಮಕೈಕೊಳ್ಳಬೇಕು.ಇಲ್ಲದಿದ್ದರೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಈಗ ಇನಸ್ಪೆಕ್ಟರ್ ತಹಶೀಲ್ದಾರ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಎನ್ ಶಶಿಕುಮಾರ ಹೊರಡಿಸಿದ್ದಾರೆ. ಸುಸೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಕೋಲ್ಕತ್ತಾದಲ್ಲಿ ತಡರಾತ್ರಿ ಮಮತಾ ಹೈಡ್ರಾಮಾ – ಸ್ಟ್ರಾಂಗ್ ರೂಮ್‌ ತೆರೆದಿಲ್ಲ ಎಂದ ಆಯೋಗ

ಕೋಲ್ಕತ್ತಾ: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ತಾವು ಸ್ಪರ್ಧಿಸಿರುವ ಭವಾನಿಪುರಕ್ಷೇತ್ರದ ಮತ ಎಣಿಕಾ ಕೇಂದ್ರವಾದ ಸಖಾವತ್ ಮೆಮೋರಿಯಲ್ ಸ್ಕೂಲ್ ಬಳಿ ಮಮತಾ ಬ್ಯಾನರ್ಜಿ ಅವರು ಸ್ವತಃ ಭೇಟಿ ನೀಡಿ ಸುಮಾರು ನಾಲ್ಕು ಗಂಟೆಗಳ ಕಾಲ ತಂಗಿದ್ದರು. ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಮತ್ತು ಅವುಗಳ ಟ್ಯಾಂಪರಿಂಗ್‌ಗೆ  ಸಂಚು …

Read More »

ಅಕಾಲಿಕ ಮಳೆಗೆ ಎಕರೆಗಟ್ಟಲೆ ಬಾಳೆ ಬೆಳೆ ನಾಶ – ರೈತರ ಕಣ್ಣೀರು

ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ (Rain) ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ಅರಕಲಗೂಡು ತಾಲೂಕಿನ, ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಯ ಲೋಕೇಶ್, ಪರಮೇಶ್, ನಾಗರಾಜ್ ಎಂಬುವವರಿಗೆ ಸೇರಿದ ಸಾವಿರಾರು ಬಾಳೆ ಗಿಡಗಳು ಸರ್ವನಾಶವಾಗಿವೆ. ಫಸಲಿಗೆ ಬಂದಿದ್ದ ಅಪಾರ ಪ್ರಮಾಣದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಇನ್ನೊಂದು ತಿಂಗಳಿನಲ್ಲಿ ಬಾಳೆಗೊನೆ ಕಟಾವು ಮಾಡಿ ಮಾರಾಟ ಮಾಡಬೇಕಿತ್ತು. ಆದರೆ ಭಾರೀ ಮಳೆ, ಗಾಳಿಗೆ ಬಾಳೆಗೊನೆ ಸಹಿತ ಗಿಡ …

Read More »

ಅಥಣಿಯ ಸತ್ತಿ ಗ್ರಾಮದ ಬಾರ್‌ನಲ್ಲಿ 24×7 ರಾಜಾರೋಷ ಎಣ್ಣೆ ಮಾರಾಟ!ಹಿಂಬಾಗಿಲಿನಿಂದ 24 ಗಂಟೆ ಮದ್ಯದ ಸಪ್ಲೈ!!!

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಬಾರ್ ಮಾಲೀಕರ ದರ್ಬಾರ್ ಮಿತಿಮೀರಿದೆ. ಕಾನೂನಿನ ಭಯವಿಲ್ಲದೆ ಹಗಲು-ರಾತ್ರಿ ಮದ್ಯ ಮಾರಾಟ ಮಾಡುತ್ತಿರುವ ಬಾರ್ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿರುವ ‘ಅನುಶ್ರೀ ಪೆಗ್’ ಬಾರ್‌ನಲ್ಲಿ ಅಬಕಾರಿ ನಿಯಮಗಳು ಗಾಳಿಗೆ ತೂರಲ್ಪಟ್ಟಿವೆ. ಮುಂಭಾಗದ ಬಾಗಿಲು ಮುಚ್ಚಿದಂತೆ ಕಂಡರೂ, ಬಾರ್‌ನ ಹಿಂಬದಿಯ ಮಾರ್ಗವಾಗಿ 24 ಗಂಟೆಯೂ ಎಣ್ಣೆ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ನಿಗದಿಪಡಿಸಿದ ಸಮಯದ ಮಿತಿ …

Read More »

ಬೌರಿಂಗ್ ಆಸ್ಪತ್ರೆ ದುರಂತ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟೀಸು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆ ದುರಂತದ ಹಿನ್ನೆಲೆಯಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ ಜರುಗಿತು. ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದಿಂದ ನಿನ್ನೆ ಏಳು ಜನ ಮೃತಪಟ್ಟಿರುವ ಕುರಿತಂತೆ ಜಿಬಿಎ ಆಯುಕ್ತರೊಂದಿಗೆ …

Read More »

ಅನುಮಾನದ ಕೆಂಡಕ್ಕೆ ಬಲಿಯಾದ ಬ್ಯೂಟಿ ಪಾರ್ಲರ್ ಪುಷ್ಪ: ಕಗ್ಗತ್ತಲ ರಾತ್ರಿ ರಕ್ಕಸನಾದ ಗಂಡ! 

“ಅನುಮಾನ ಅನ್ನೋದು ಸೆರಗಿಗೆ ಕಟ್ಕೊಂಡ ಕೆಂಡ ಇದ್ದಂತೆ.. ಅದು ಸುಡೋಕೆ ಶುರು ಮಾಡಿದ್ರೆ ಇಡೀ ಸಂಸಾರವೇ ಬೂದಿಯಾಗುತ್ತೆ!” ಮೈಸೂರಿನ ಹಳೆ ಕೆಸರೆಯಲ್ಲಿ ನಡೆದ ಈ ಘೋರ ಹತ್ಯೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಮದುವೆಯಾದ ಕೇವಲ ಒಂದೂವರೆ ವರ್ಷಕ್ಕೆ, ತನ್ನ ಪತಿಯೇ ತನ್ನ ಪ್ರಾಣದಾತನಾಗಬೇಕಿದ್ದವನು ಯಮನಾಗಿ ಅಟ್ಟಹಾಸ ಮೆರೆದಿದ್ದಾನೆ. ಮದುವೆ ಮಂಟಪದಲ್ಲಿ ‘ರಾಮ’.. ಮನೆಯೊಳಗೆ ಸೇರಿದ ಮೇಲೆ ‘ಕುಡುಕ’ ರಾಕ್ಷಸ! ಒಂದೂವರೆ ವರ್ಷದ ಹಿಂದೆ ಪುಷ್ಪ ಎಂಬ ಸುಂದರ ಯುವತಿಯನ್ನು ಮಹೇಶ …

Read More »

ಉಡುಪಿ: ಕಾರ್ಕಳದ ಉದ್ಯಮಿ ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ – ಆರೋಪಿ ಸೌಮ್ಯ ಶೆಟ್ಟಿಗೆ ಸಿಗದ ಜಾಮೀನು!

​ಕಾರ್ಕಳದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುದೀಪ್ ಅವರ ಪತ್ನಿ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿಯ ಸೆಷನ್ಸ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ​ ಪ್ರಕರಣದ ಹಿನ್ನೆಲೆ ಏನು? ಕಾರ್ಕಳದ ಯುವ ಉದ್ಯಮಿಯಾಗಿದ್ದ ಸುದೀಪ್ ಶೆಟ್ಟಿ ಅವರು ಕಳೆದ ಮಾರ್ಚ್ 22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಾವು ಇಡೀ ಜಿಲ್ಲೆಯಲ್ಲಿ ದೊಡ್ಡ …

Read More »

ಕಾಡು ಕಾಯುವ ‘ಕೈ’ಗಳಿಗೆ ಗತಿಯಿಲ್ಲ: ಅರಣ್ಯ ಇಲಾಖೆಯ ದಿನಗೂಲಿ ನೌಕರರ ಕಣ್ಣೀರಿನ ಕಥೆ! 

ನಮ್ಮ ನಾಡಿನ ಹಸಿರನ್ನು, ವನ್ಯಜೀವಿಗಳನ್ನು ಹಗಲು-ಇರುಳು ಎನ್ನದೆ ಪ್ರಾಣದ ಹಂಗು ತೊರೆದು ಕಾಯುವ ಅರಣ್ಯ ರಕ್ಷಕರ ಸ್ಥಿತಿ ಇಂದು ಬೀದಿಗೆ ಬಂದಿದೆ. ಅಧಿಕಾರಿಗಳಿಗೆ ಲಕ್ಷ ಲಕ್ಷ ಸಂಬಳ, ಎಸಿ ರೂಮುಗಳ ಸುಖ.. ಆದರೆ ಕಾಡಿನ ಒಳಗೆ ಪ್ರಾಣಿಗಳ ಎದುರು ನಿಂತು ಕೆಲಸ ಮಾಡುವ ವಾಚರ್‌ಗಳಿಗೆ ಕನಿಷ್ಠ ವೇತನವೂ ಇಲ್ಲದಂತಾಗಿದೆ! ಇದು ನಮ್ಮ ವ್ಯವಸ್ಥೆಯ ದುರಂತವಲ್ಲವೇ? ಬಂಡೀಪುರದಲ್ಲಿ ಪ್ರತಿಭಟನೆಯ ಕಿಚ್ಚು! ನ್ಯಾಯಕ್ಕಾಗಿ ಆಗ್ರಹಿಸಿ ಇಂದಿನಿಂದ ಬಂಡೀಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ. ರಾಜ್ಯದ …

Read More »

ನೇಹಾ ಹಿರೇಮಠ ಕೊಲೆ ಪ್ರಕರಣ: ಐದನೇ ಬಾರಿಯೂ ಹಂತಕನ ಜಾಮೀನು ಅರ್ಜಿ ರಿಜೆಕ್ಟ್..!

ನೇಹಾ ಹಿರೇಮಠ ಹತ್ಯೆ ನಡೆದು 2 ವರ್ಷವೇ ಕಳೆದಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ನ್ಯಾಯ ಕೊಡಿಸುತ್ತೇವೆ ಎಂಬ ಸರ್ಕಾರ ಭರವಸೆ ಹುಸಿಯಾಗಿದೆ. ಆದರೆ ನೇಹಾ ಪರ ವಕೀಲರ ಪರಿಶ್ರಮದಿಂದ ಹಂತಕನಿಗೆ ಐದನೇ ಬಾರಿಯೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿಯೇ ಹಾಡಹಗಲೇ ಭೀಕರವಾಗಿ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ, ಕೊಲೆಯಾಗಿ ಏಪ್ರಿಲ್ 18ಕ್ಕೆ ಎರಡು ವರ್ಷ ಕಳೆದಿದೆ. ಆದ್ರೆ, ಈ ವರೆಗೂ ನೇಹಾಳ ಸಾವಿಗೆ ನ್ಯಾಯ ದೊರಕಿಲ್ಲ. ತ್ವರಿತ …

Read More »