ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸೆಪ್ಟೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. 22 ದಿನಗಳ ಅವಧಿಯಲ್ಲಿ ಬರೋಬ್ಬರಿ 3 ಕೋಟಿ 4 ಲಕ್ಷ 37,906 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭಕ್ತರ ದಂಡು ಹರಿದು ಬಂದಿದ್ದು, ರಾಯರ ದರ್ಶನ ಪಡೆದ ಭಕ್ತರು ಹುಂಡಿಗೆ ಭಾರೀ ಪ್ರಮಾಣದಲ್ಲಿ ಕಾಣಿಕೆ ಹಾಕಿದ್ದಾರೆ. ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ 2 ಕೋಟಿ 96 ಲಕ್ಷ 7,906 …
Read More »Daily Archives: ಅಕ್ಟೋಬರ್ 2, 2026
ವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಹಬ್ಬ ಮಾಡಿದ್ರೆ ತಪ್ಪೇನು: ಪ್ರಿಯಾಂಕ್ ಸಮರ್ಥನೆ
ಬೆಂಗಳೂರು:ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆ ಮಾಡುವ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉರ್ದು ಕೂಡ ಈ ನೆಲದ ಭಾಷೆಯೇ ಅಲ್ಲವೇ? ಉರ್ದು ಹಬ್ಬ ಮಾಡಲಿ, ಹಿಂದಿ ಹಬ್ಬವನ್ನೂ ಮಾಡಲಿ. ನಮ್ಮಲ್ಲಿ ಹಿಂದಿ ಪ್ರಚಾರ ಸಭೆ ಇತ್ತು, …
Read More »KSRTC ಬಸ್, ಲಾರಿ ಮಧ್ಯೆ ಭೀಕರ ಅಪಘಾತ – ಬಸ್ ಚಾಲಕ ದುರ್ಮರಣ, ಹಲವರಿಗೆ ಗಾಯ
ಚಿತ್ರದುರ್ಗ: ಸರ್ಕಾರಿ ಬಸ್ಸೊಂದು ಲಾರಿಗೆ ಡಿಕ್ಕಿಯಾದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗದ ಕಣಿವೆ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದೂ, ಮೃತರನ್ನು ನಾಗರಾಜ್ ನಾಯ್ಕ (52) ಎಂದು ಗುರುತಿಸಲಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್, ಕಣಿವೆ ಬಳಿ ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಬಸ್‌ನಲ್ಲಿದ್ದ ನಾಲ್ಕಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ …
Read More »ಬೀದರ್‌ನಲ್ಲಿ ಯುವಕನ ಕಿಡ್ನಾಪ್ ಮಾಡಿ ಭೀಕರ ಕೊಲೆ; ಐವರ ಬಂಧನ
ಬೀದರ್: ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಸುದರ್ಶನ ರಟಕಲ್ ಕೊಲೆಯಾದ ಯುವಕ. ಬಂಧಿತರನ್ನು ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂದು ಗುರುತಿಸಲಾಗಿದೆ. ಭಾಲ್ಕಿ ಪಟ್ಟಣದ ಮಾಸುಮಪಾಶಾ ಕಾಲೋನಿಯಲ್ಲಿ ಯುವಕನನ್ನು ಐವರು ಆರೋಪಿಗಳು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ. ಬಳಿಕ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ …
Read More »ರಚಿತಾ ರಾಮ್‌ಗೆ ನಿರಾಸೆ; 2 ಗಂಟೆ ಕಾದರೂ ಹೊರಬರಲಿಲ್ಲ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರಿಗೆ ಭಾರೀ ನಿರಾಸೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾದು ನಿಂತರೂ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ ನಟಿ ಬೇಸರದಿಂದಲೇ ಕಾರನ್ನೇರಿ ವಾಪಸ್ ತೆರಳಿದ್ದಾರೆ. ಜೈಲಿನಲ್ಲಿರುವ ತಮ್ಮ ನೆಚ್ಚಿನ ಸಹನಟ ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಕಾರಾಗೃಹದ ಆವರಣಕ್ಕೆ …
Read More »ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ: ಕಾಂಗ್ರೆಸ್‌ಗೆ ಆರ್.ಅಶೋಕ್ ಸವಾಲು
ಬೆಂಗಳೂರು: ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ. ಬಿಜೆಪಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಚುನಾವಣಾ ವ್ಯವಸ್ಥೆಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಅವರು ರಾಜ್ಯದ ಸಿಎಂ, ಕಾಂಗ್ರೆಸ್ ಅಧ್ಯಕ್ಷರಲ್ಲ. ಸಂವಿಧಾನ ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ಮಾಡಿದವರು ಅವರು. …
Read More »ಕಾಂಗ್ರೆಸ್ ಧರಣಿಗೆ ಮಣಿದ ರಾಜ್ಯ ಚುನಾವಣಾ ಆಯೋಗ – ಫಾರಂ 7 ಅರ್ಜಿ ಪರಿಗಣಿಸದಂತೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಫಾರಂ-7 ದುರ್ಬಳಕೆ ಆರೋಪಿಸಿ ಕಾಂಗ್ರೆಸ್ ಧರಣಿ ನಡೆಸಿದ ಬೆನ್ನಲ್ಲೇ ಫಾರಂ-7 ಅರ್ಜಿಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ಬಲ್ಕ್ ಆಗಿ ಸಲ್ಲಿಕೆಯಾಗುವ ಫಾರಂ-7 ಅರ್ಜಿಗಳನ್ನು ಪರಿಗಣಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಬಿಎ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಲ್ಕ್ ಆಗಿ ಫಾರಂ-7 ಅರ್ಜಿಗಳನ್ನು ಇಆರ್‌ಒಗಳಿಗೆ ಸಲ್ಲಿಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಲ್ಕ್ ಆಗಿ ನೀಡುವ ಫಾರಂ-7 ಅರ್ಜಿಗಳನ್ನು ಇಆರ್‌ಒಗಳು …
Read More »ಡಬಲ್ ಎಂಟ್ರಿ ಹೊರತುಪಡಿಸಿ ಬೇರೆ ಫಾರಂ 7 ಅರ್ಜಿ ಪರಿಗಣಿಸದಂತೆ ಸೂಚನೆ: ಡಿಕೆಶಿ
ಬೆಂಗಳೂರು: ಡಬಲ್ ಎಂಟ್ರಿ ಹೊರತುಪಡಿಸಿ ಬೇರೆ ಫಾರಂ 7 ಅರ್ಜಿ ಪರಿಗಣಿಸದಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚುನಾವಣಾ ಆಯೋಗದ ತೀರ್ಮಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಣ ಹಾಗೂ ಎರಡು ಬಾರಿ ನೋಂದಣಿ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫಾರಂ 7 ಅನ್ನು ಅನುಮೋದನೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ರಾಜ್ಯದ ಎಲ್ಲಾ ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. …
Read More »ಜಿಯೋ ಫೈನಾನ್ಸ್‌ನಿಂದ ಜಿಯೋ ಸಿಲ್ವರ್ ಕೊಡುಗೆ – 10 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಿ!
ಮುಂಬೈ: 10 ರೂಪಾಯಿಗೆ ಬೆಳ್ಳಿ ಖರೀದಿಸ್ಬೇಕು ಅಂತಿದ್ದೀರಾ? ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಫೈನಾನ್ಸ್ ಈಗ ತನ್ನ ಆಪ್‌ನಲ್ಲಿ ‘ಜಿಯೋ ಸಿಲ್ವರ್’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಗಳಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ಜಿಯೋ ಫೈನಾನ್ಸ್ ಆಪ್ ಮೂಲಕ ಸಾಲ, ವಿಮೆ, ಹೂಡಿಕೆ ಹಾಗೂ ಪೇಮೆಂಟ್ ಸೇವೆಗಳನ್ನು ಒದಗಿಸುತ್ತಿರುವ `ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಅಂಡ್ ಸರ್ವೀಸ್ ಲಿಮಿಟೆಡ್’ …
Read More »ದೃಶ್ಯ ರೂಪ ಪಡೆದುಕೊಂಡ ವೀರಭೂಮಿ ಮ್ಯೂಸಿಯಂ
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಅಪ್ರತಿಮ ಶೌರ್ಯ ಮೆರೆದು ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಅಮರ ತ್ಯಾಗಗಾಥೆ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ‘ವೀರಭೂಮಿ ಮ್ಯೂಸಿಯಂ’ನಲ್ಲಿ ದೃಶ್ಯರೂಪ ಪಡೆದುಕೊಂಡಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು, ಲೇಖಕರು ಹಾಗೂ ಸೃಜನಶೀಲ ಕಥೆಗಾರರಾದ ಅನಿಲ್ ಅಣ್ಣಯ್ಯ ಅವರು ಸೆಪ್ಟೆಂಬರ್ 27ರ ಭಾನುವಾರದಂದು ನಂದಗಡದ 13 ಎಕರೆ ವಿಸ್ತೀರ್ಣದ ಈ ಪವಿತ್ರ ಭೂಮಿಗೆ ಭೇಟಿ ನೀಡಿದ್ದರು. ತಾವು …
Read More »
Laxmi News 24×7