Breaking News

ಸಚಿವ ಬಾಲಕೃಷ್ಣ ನಕಲಿ ದಾಖಲೆ ಸೃಷ್ಟಿಸಿ 36 ಎಕರೆ ಜಾಗ ಕಬಳಿಸಿದ್ದಾರೆ: ಮಂಜುನಾಥ್

Spread the love

ಬೆಂಗಳೂರು: ಸಚಿವ ಬಾಲಕೃಷ್ಣ  ಸರ್ಕಾರಿ ಜಮೀನು ನಕಲಿ ದಾಖಲೆ ಸೃಷ್ಟಿ ಮಾಡಿ 36 ಎಕರೆ ಜಾಗ ಲೂಟಿ ಮಾಡಿದ್ದಾರೆ ಅಂತ ಮಾಜಿ ಶಾಸಕ ಮಾಗಡಿ ಮಂಜುನಾಥ್ ದಾಖಲಾತಿ ಸಮೇತ ಆರೋಪ ಮಾಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಸಚಿವ ಬಾಲಕೃಷ್ಣ ತಾವರೆಕೆರೆ ಕುರುಬಹಳ್ಳಿ ಬಳಿ 36 ಎಕರೆ ಜಮೀನು ಕಬಳಿಸಿದ್ದಾರೆ. ಅವರ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ. 26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಉಳುಮೆ ಚೀಟಿಯಿಂದ ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವವರನ್ನು ಬೆದರಿಸಿ ಅವರನ್ನ ಹೊರಗೆ ಹಾಕಿದ್ದಾರೆ. ಸಿಎಂ ಪಾರದರ್ಶಕವಾಗಿ ಇದ್ದರೆ ಕೂಡಲೇ ಈ ಜಮೀನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು.

ಐಎಎಸ್ ಅಧಿಕಾರಿ ಜೊತೆ ಸೇರಿಕೊಂಡು, ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಕ್ರಮ ಮಾಡಿದ್ದಾರೆ. ರಾಜ್ಯಪಾಲರಿಗೆ ಸಮಯ ಕೇಳಿದ್ದೇವೆ. ಅವರು ಸಮಯ ಕೊಟ್ಟ ಮೇಲೆ ಬಾಲಕೃಷ್ಣ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದರು.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ