Breaking News

Daily Archives: ಅಕ್ಟೋಬರ್ 2, 2026

ಕನ್ನಡ ಶಾಸನಗಳು ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿ: ಡಾ. ಎಸ್.ಡಿ. ಕೆಂಗಲಗುತ್ತಿ

ಬಾಗಲಕೋಟೆ: ಕನ್ನಡ ನಾಡಿನ ಬಹುತೇಕ ಶಾಸನಗಳ ರಚನೆಗೆ ಧರ್ಮ ಹಾಗೂ ವೀರ ಮೌಲ್ಯಗಳು ಪ್ರೇರಣೆಯಾಗಿವೆ. ಇತಿಹಾಸದ ನಿಖರ ನಿರ್ಮಾಣಕ್ಕೆ ಶಾಸನಗಳು ಪ್ರಮುಖ ಆಧಾರಗಳಾಗಿದ್ದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ತವನಿಧಿಗಳಾಗಿವೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್.ಡಿ. ಕೆಂಗಲಗುತ್ತಿ ಹೇಳಿದರು. ನಗರದ ಬಿ.ವ್ಹಿ.ವ್ಹಿ.ಎಸ್. ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ …

Read More »

ಬೆಳಗಾವಿ ಮೇಯರ್, ಉಪಮೇಯರ್ ಬದಲಾವಣೆಗೆ ಆಗ್ರಹಿಸಿದ ಕನ್ನಡ ಸಂಘಟನೆಗಳು

ಬೆಳಗಾವಿ: ಕನ್ನಡಪರ ಸಂಘಟನೆಗಳ ಸತತ ಹೋರಾಟಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಜಯ ಸಿಕ್ಕಿದೆ. ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಕನ್ನಡಪರ ಗೊತ್ತುವಳಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 30ರಂದು ಅಂಗೀಕರಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಕಳೆದ ಆರು ತಿಂಗಳಿಂದ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕನ್ನಡ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ತಿಳಿಸಿದ್ದಾರೆ. 2005ರಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು …

Read More »

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಾಗ್ದಾಳಿ: ಡಿಕೆಶಿ ವಿರುದ್ಧ ಸರಣಿ ಆರೋಪ

ಬೆಳಗಾವಿ: ರಾಜ್ಯ ಸರ್ಕಾರದ ಆಡಳಿತ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿ ಕುರಿತು ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ ಸುಮಾರು ₹38 ಸಾವಿರ ಕೋಟಿ ಬಿಲ್ ಬಾಕಿ ಇದೆ ಎಂದು ಹೇಳುತ್ತಿದ್ದರೂ, ಈ ವಿಚಾರಕ್ಕೆ ಡಿ.ಕೆ. ಶಿವಕುಮಾರ್ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ ಮಾಡಲಾಗಿದೆ ಎಂದು ಹೇಳುವುದಾದರೆ, ಈಗ ನೀವು ಮುಖ್ಯಮಂತ್ರಿ …

Read More »

ಕಬ್ಬು ಬೆಳೆಗಾರರಿಗೆ ಮತ್ತೆ ಎಫ್‌ಆರ್‌ಪಿ ಹೆಚ್ಚಳ ಸಾಧ್ಯತೆ: ಸಂಜಯ ಪಾಟೀಲ್

ಬೆಳಗಾವಿ: ಎಂಎಸ್‌ಪಿ ಮತ್ತು ಕಬ್ಬಿನ ಬೆಲೆ ನಿಗದಿ ಮಾಡುವ ಎಫ್‌ಆರ್‌ಪಿ ಎರಡೂ ವಿಭಿನ್ನವಾಗಿದ್ದು, ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮಾಜಿ ಶಾಸಕ ಹಾಗೂ ಬಿಜೆಪಿ ವಿಭಾಗ ಪ್ರಭಾರಿ ಸಂಜಯ ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಬೆಲೆ ಕುಸಿತದಿಂದಾಗಿ ಕಾರ್ಖಾನೆಗಳು ಹಾಗೂ ರೈತರಿಗೆ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 2018ರಲ್ಲಿ ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್‌ಪಿ ಜಾರಿಗೊಳಿಸಿತು. ಎಂಎಸ್‌ಪಿ ಸಕ್ಕರೆಯ ಕನಿಷ್ಠ …

Read More »

ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಇಬ್ಬರು ಸ್ಕೇಟರ್‌ಗಳ ಆಯ್ಕೆ

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳಾದ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಭುವನೇಶ್ವರ (ಒಡಿಶಾ) ಹಾಗೂ ಮೊಹಾಲಿ (ಚಂಡೀಗಢ)ದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ಉತ್ತಮ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ದೇವೇನ್ ಬಾಮಣೆ ಅವರು ಕೆಎಲ್‌ಎಸ್ ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೈರಾಜ್ ಮೆಂಡಕೆ ಅವರು ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಬ್ಬರೂ …

Read More »