Breaking News

ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆ

Spread the love

ತುಮಕೂರು: ನೈಸ್ ರಸ್ತೆ  ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್  ಅವರನ್ನು ಭೇಟಿಯಾಗಿದ್ಧು ಸತ್ಯ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು  ಸ್ಪಷ್ಟನೆ ನೀಡಿದ್ದಾರೆ.

ನೈಸ್ ವಿಚಾರ ಮತ್ತು ಬಿಡಿಎ ವಿಚಾರ ಇಟ್ಟುಕೊಂಡು ಹೋಗಿದ್ವಿ, ಅದು ಕ್ಯಾಬಿನೆಟ್‌ಲ್ಲಿ ತೀರ್ಮಾನ ಆಗಬೇಕಿತ್ತು ಹಾಗಾಗಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಅದಕ್ಕೆ ಸಿಎಂ ತುಂಬಾ ಸಂಸ್ಕಾರಯುತವಾಗಿ ʻಬುದ್ದಿ, ನೀವು ಯಾಕೇ ಬಂದ್ರಿ. ನಾನೇ ಅಲ್ಲಿಗೆ ಬರ್ತಿದ್ನಲ್ಲಾʼ ಎಂದರು. ನೈಸ್ ರಸ್ತೆಗೆ ನಮ್ಮ ಆಕ್ಷೇಪ ಇಲ್ಲ, ಹೆಚ್ಚುವರಿಯಾಗಿ ನೈಸ್ ರಸ್ತೆ ಹೆಸರಲ್ಲಿ ಜಮೀನು ಪಡೆದಿದ್ದಾರೆ ಅದನ್ನು ವಾಪಸ್ ಕೊಡಿ ಅನ್ನೋದು ರೈತರು ಸೇರಿ ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸೋಂಪುರದ ಬಳಿ ಮಠದ 7 ಎಕರೆ 39 ಕುಂಟೆ ಜಮೀನು ಇತ್ತು. 2001 ಮತ್ತು 2002 ರಲ್ಲಿ ಖೇಣಿ ಬಂದು ರಸ್ತೆಗೆ ಬೇಕು ಕೊಡಿ ಎಂದರು ಶಿವಕುಮಾರ ಶ್ರೀಗಳು ಆ ಜಮೀನು ಕೊಟ್ಟಿದ್ದರು. ಅಲ್ಲದೇ ಶ್ರೀಮಠಕ್ಕೆ ಖಾಯಂ ಆದಾಯ ಬರುವಂತೆ ಮಾಡುತ್ತೇವೆ. ಸೈಟ್ ಕೊಡ್ತಿನಿ ಎಂದು ಖೇಣಿ ಪತ್ರದಲ್ಲಿ ಬರೆದು ಕೊಟ್ಟಿದ್ದರು. ಆದರೆ ಅದ್ಯಾವುದೂ ಈಡೇರಿಲ್ಲ.

ಶ್ರೀಮಠದ 1 ಎಕರೆ 39 ಕುಂಟೆ ಜಮೀನು ಮಾತ್ರ ರಸ್ತೆಗೆ ಬಳಸಿಕೊಂಡಿದ್ದಾರೆ. ಉಳಿದ 6 ಎಕರೆ ಜಮೀನು ಹಾಗೇ ಇದೆ. ಆ ಉಳಿದ ಜಮೀನು ವಾಪಸ್ ಕೊಡಿ ಎಂದು ನಾವು ಕೇಳಿದ್ದೇವೆ. ಮಠದವರು ಜಮೀನು ಕೊಟ್ಟಿದ್ದನ್ನು ನೋಡಿ ಅಕ್ಕಪಕ್ಕದ ರೈತರೂ ಕೊಟ್ಟಿದ್ದರು. ರೈತರ ಸ್ವಲ್ಪ ಜಮೀನಿನಲ್ಲಿ ಮಾತ್ರ ರಸ್ತೆ ಮಾಡಿದ್ದಾರೆ. ಇನ್ನುಳಿದ ಜಮೀನು ಹಾಗೇ ಉಳಿದಿದೆ. ಹಾಗಾಗಿ ರೈತರು ನನ್ನನ್ನು ಸಿಎಂ ಭೇಟಿ ಮಾಡಲು ಬರುವಂತೆ ಕೇಳಿಕೊಂಡಿದ್ದರು. ರೈತರ ಒತ್ತಾಯದ ಮೇರೆಗೆ ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಎಂದು ಶ್ರೀಗಳು ಹೇಳಿದ್ದಾರೆ.


Spread the love

About Laxminews 24x7

Check Also

ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿ

Spread the loveಬೆಂಗಳೂರು: ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ