Breaking News

Monthly Archives: ಆಗಷ್ಟ್ 2026

ಹಲಸಿ-ಬೇಕವಾಡ ರಸ್ತೆ ತಗ್ಗು-ಗುಂಡಿಮಯ; ಆಕ್ರೋಶಗೊಂಡ ಗ್ರಾಮಸ್ಥರು!

ಖಾನಾಪುರ: ಹಲಸಿ-ಬೇಕವಾಡ ರಸ್ತೆ ತಗ್ಗು-ಗುಂಡಿಮಯ; ಆಕ್ರೋಶಗೊಂಡ ಗ್ರಾಮಸ್ಥರು! ಖಾನಾಪುರ ತಾಲೂಕಿನ ಐತಿಹಾಸಿಕ ಹಲಸಿ ಮತ್ತು ಬೇಕವಾಡ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ತಗ್ಗು-ಗುಂಡಿಗಳಿಂದ ಆವೃತವಾಗಿದ್ದು, ಸಾರ್ವಜನಿಕರು ಹಾಗೂ ಶ್ರಾವಣ ಮಾಸದಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಹಲಸಿ ಗ್ರಾಮಕ್ಕೆ ಪ್ರತಿದಿನ ನೂರಾರು ಜನರು ಸಂಚರಿಸುತ್ತಾರೆ. ಪ್ರಸ್ತುತ ಶ್ರಾವಣ ಮಾಸದ …

Read More »

ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿ 3 ಉದ್ಯಾನ ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ ಕೆ ಶಿವಕುಮಾರ್ ರಕ್ಷಣಾ ಇಲಾಖೆ ಜಾಗದಲ್ಲಿ ನಿರ್ಮಿಸಲು ಅನುಮತಿಗಾಗಿ ಪತ್ರ

ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿ 3 ಉದ್ಯಾನ ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ ಕೆ ಶಿವಕುಮಾರ್ ರಕ್ಷಣಾ ಇಲಾಖೆ ಜಾಗದಲ್ಲಿ ನಿರ್ಮಿಸಲು ಅನುಮತಿಗಾಗಿ ಪತ್ರ ನಾಗರಿಕರು ಬಂದು ಈ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಬೇಕು “ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿಯ 3 ಉದ್ಯಾನ ನಿರ್ಮಾಣ ಮಾಡಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ ನಲ್ಲಿ ‘ಗಂಗ …

Read More »

ಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ

ಲಿಂಗರಾಜ್ ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಉದ್ಘಾಟನೆ ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸಮಾಜ ಯಾವಾಗಲೂ ಸಾಧಕರನ್ನು ಮಾತ್ರ ಗುರುತಿಸುತ್ತದೆ. ಆದ್ದರಿಂದ ಪಠ್ಯದ ಜೊತೆಗೆ ಕ್ರೀಡೆ, ಸಂಘ ಹಾಗೂ ಕ್ಲಬ್ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು” ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೊಳ್ಳಿ ನುಡಿದರು. …

Read More »

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಶಾಸಕ ಅಭಯ್ ಪಾಟೀಲ್: ಐಟಿ-ಸೆಮಿಕಂಡಕ್ಟರ್ ಪಾರ್ಕ್‌ಗೆ ಭೂಮಿ ನೀಡಲು ಮನವಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಶಾಸಕ ಅಭಯ್ ಪಾಟೀಲ್: ಐಟಿ-ಸೆಮಿಕಂಡಕ್ಟರ್ ಪಾರ್ಕ್‌ಗೆ ಭೂಮಿ ನೀಡಲು ಮನವಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಳಗಾವಿಯ ಅಭಿವೃದ್ಧಿ ಹಾಗೂ ಯುವಕರ ಉದ್ಯೋಗ ಸೃಷ್ಟಿ ಕುರಿತು ಪ್ರಮುಖ ಚರ್ಚೆ ನಡೆಸಿದರು. ಬೆಳಗಾವಿಯಲ್ಲಿರುವ ರಕ್ಷಣಾ ಇಲಾಖೆಯ ಭೂಮಿಯನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಅಥವಾ ಅಲ್ಲಿ ಪ್ರಮುಖ ಕೈಗಾರಿಕಾ …

Read More »

ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ೨೪ ಗಂಟೆ ನೀರು ಸರಬರಾಜು ಹಾಗೂ ಬಿಲ್ಲಿಂಗ್ ಕುರಿತು ಜಾಗೃತಿ ಸಭೆ

ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ೨೪ ಗಂಟೆ ನೀರು ಸರಬರಾಜು ಹಾಗೂ ಬಿಲ್ಲಿಂಗ್ ಕುರಿತು ಜಾಗೃತಿ ಸಭೆ ಬೆಳಗಾವಿಯ ವಾರ್ಡ್ ಸಂಖ್ಯೆ ೩೩ರ ಮಾರ್ಕಂಡೇಯ ನಗರದಲ್ಲಿ ಸಾರ್ವಜನಿಕರಿಗೆ ೨೪ ಗಂಟೆ ಕುಡಿಯುವ ನೀರಿನ ಸಂಪರ್ಕ ಹಾಗೂ ಬಿಲ್ಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ವಿಶೇಷ ಸಭೆ ಆಯೋಜಿಸಲಾಗಿತ್ತು. ಮಾಜಿ ಉಪಮೇಯರ್ ಹಾಗೂ ಹಾಲಿ ನಗರಸೇವಕಿ ರೇಷ್ಮಾ ಪ್ರವೀಣ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಎಲ್ ಆಂಡ್ ಟಿ ಸಂಸ್ಥೆಯ …

Read More »

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿಯಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿಯಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಬೆಂಗಳೂರು, ಆ. 6: ಕಾಹೇರ್ (KAHER) ಕುಲಾಧಿಪತಿ ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಪ್ರಭಾಕರ ಬಿ. ಕೋರೆ ಅವರು ಇಂದು ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಇತ್ತೀಚೆಗೆ ನಿಧನರಾದ ಅವರ ಧರ್ಮಪತ್ನಿ ಶ್ರೀಮತಿ ಚಿನ್ನಮ್ಮ ದೇವೇಗೌಡ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಚಿನ್ನಮ್ಮ ಅವರ ನಿಧನವು ದೇವೇಗೌಡರ …

Read More »

ಶಿಕ್ಷಕರ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳಿಂದ 200 ಸಸಿ ನೆಡುವ ಕಾರ್ಯಕ್ರಮ

ಅಥಣಿ : ಕೇವಲ ರೀಲ್ಸ್ ನಲ್ಲಿ ಪ್ರಕೃತಿ ಪ್ರೇಮ ತೋರಿಸದೆ ಸಸಿ ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಕೆಲಸವನ್ನು ಯುವ ಸಮೂಹ ಮಾಡಬೇಕು. ಗ್ರಾಮ ಹಸಿರಾಗಿದ್ದರೆ ಜನರ ಸ್ವಾಸ್ಥ್ಯ ಉತ್ತಮವಾಗಿರುತ್ತದೆ ಎಂದು ನದಿ ಇಂಗಳಗಾಂವ ಗ್ರಾಮದ ಗುರುಲಿಂಗದೇವರ ಮಠದ ಪ.ಪೂ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ನದಿ ಇಂಗಳಗಾಂವ ಗ್ರಾಮದ ಸರಕಾರಿ ಹೈಸ್ಕೂಲ್ ನಲ್ಲಿ‌ ಕಲಿತ 2008 ರ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ …

Read More »

ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 3.40 ಲಕ್ಷ ರೂ. ನಗದು ಕಳ್ಳತನ

ಮೈಸೂರು:ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 3.40 ಲಕ್ಷ ರೂ. ನಗದು ಹಾಗೂ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಹೂಟಗಳ್ಳಿಯ ಶಂಕುತಲಾ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನೂತನವಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ಅದರ ಕೆಲಸಕ್ಕೆ ಹಣ ಅಗತ್ಯ ಇದ್ದುದ್ದರಿಂದ ಚಿನ್ನಾಭರಣವನ್ನು ಹೂಟಗಳ್ಳಿಯ ಕೆನರಾ ಬ್ಯಾಂಕ್‌ನಲ್ಲಿ ಆ.1ರಂದು ಅಡವಿಟ್ಟು 3.35 ಲಕ್ಷ ರೂ. ಪಡೆದಿದ್ದರು. ಬಳಿಕ ಪುತ್ರ ಬೀರೇಂದ್ರ ಕುಮಾರ್ …

Read More »

ಅಂಬೋಲಿ ಕಣಿವೆಯಲ್ಲಿ ಕಣ್ಮರೆಯಾದ ನಿಪ್ಪಾಣಿ ವೈದ್ಯ: ತೀವ್ರಗೊಂಡ ಶೋಧ ಕಾರ್ಯಾಚರಣೆ

ಚಿಕ್ಕೋಡಿ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಅಂಬೋಲಿಯ ಮಹಾದೇವಗಢ ಪಾಯಿಂಟ್‌ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ನಿಪ್ಪಾಣಿ ತಾಲೂಕಿನ ಪ್ರಸಿದ್ಧ ವೈದ್ಯ ಡಾ. ಅಯೂಬ್ ಸಯ್ಯದ್ (೪೬) ಅವರು ಆಳವಾದ ಕಣಿವೆಗೆ ಬಿದ್ದು ಕಣ್ಮರೆಯಾಗಿದ್ದಾರೆ. ನಿಪ್ಪಾಣಿ ತಾಲೂಕಿನ ಜತ್ರಾಟ್ ನಿವಾಸಿಯಾಗಿರುವ ಡಾ. ಅಯೂಬ್ ಸಯ್ಯದ್ ಅವರು ಮಂಗಳವಾರ (ಆಗಸ್ಟ್ ೪) ತಮ್ಮ ಸ್ನೇಹಿತರೊಡನೆ ಅಂಬೋಲಿಗೆ ಪ್ರವಾಸ ಕೈಗೊಂಡಿದ್ದರು. ಸಂಜೆ ಸುಮಾರು ೫:೩೦ರ ಸುಮಾರಿಗೆ ಮಹಾದೇವಗಢ ಪಾಯಿಂಟ್‌ನಲ್ಲಿ ಸ್ನೇಹಿತರೊಂದಿಗೆ …

Read More »

ಧಾರವಾಡಗೆ ಬರುತ್ತಿದಂತೆ ಲಾಡ್‌ ಅವರಿಗೆ ರೈತರ ಪ್ರತಿಭಟನೆ ಬಿಸಿ

ಧಾರವಾಡಗೆ ಬರುತ್ತಿದಂತೆ ಲಾಡ್‌ ಅವರಿಗೆ ರೈತರ ಪ್ರತಿಭಟನೆ ಬಿಸಿ…. ಬರ ಜಿಲ್ಲೆಯೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ರೈತರಿಂದ ನೂತನ ಸಚಿವ ಸಂತೋಷ ಲಾಡ್‌ಗೆ ಮನವಿ. ಸಿಎಂ ಡಿಕೆಶಿಯವರ ಕ್ಯಾಬಿನೆಟ‌ನಲ್ಲಿ ಮಂತ್ರಿ ಸ್ಥಾನ ಪಡೆದುಕೊಂಡ ಬಳಿಕ ಮೊದಲ‌ ಬಾರಿಗೆ ಧಾರವಾಡ‌ಗೆ ಸಚಿವ ಸಂತೋಷ ಲಾಡ್ ಅವರು ಭೇಟಿ ನೀಡುತ್ತಿದಂತೆ, ಲಾಡ್ ಅವರಿಗೆ ರೈತರ ಪ್ರತಿಭಟನೆ ಬಿಸಿ ತಟ್ಟಿದೆ. ಹೌದು… ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದು ಧಾರವಾಡಗೆ ಮೊದಲ ಬಾರಿ ಆಗಮಿಸಿದ …

Read More »