ಮೈಸೂರು:ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 3.40 ಲಕ್ಷ ರೂ. ನಗದು ಹಾಗೂ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಹೂಟಗಳ್ಳಿಯ ಶಂಕುತಲಾ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನೂತನವಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ಅದರ ಕೆಲಸಕ್ಕೆ ಹಣ ಅಗತ್ಯ ಇದ್ದುದ್ದರಿಂದ ಚಿನ್ನಾಭರಣವನ್ನು ಹೂಟಗಳ್ಳಿಯ ಕೆನರಾ ಬ್ಯಾಂಕ್ನಲ್ಲಿ ಆ.1ರಂದು ಅಡವಿಟ್ಟು 3.35 ಲಕ್ಷ ರೂ.
ಪಡೆದಿದ್ದರು. ಬಳಿಕ ಪುತ್ರ ಬೀರೇಂದ್ರ ಕುಮಾರ್ ಸಾಹು ಅವರೊಂದಿಗೆ ತೆರಳುತ್ತಿದ್ದಾಗ ಸ್ಕೂಟರ್ ಮುಂದಿನ ಚಿತ್ರ ಪಂಕ್ಚರ್ ಅಯಿತು. ಅದನ್ನು ದುರಸ್ತಿಗೆ ಸಮೀಪವಿದ್ದ ಗ್ಯಾರೇಜ್ಗೆ ಹೋದಾಗ ಮೆಕ್ಯಾನಿಕ್ ಹೊರಗೆ ಹೋಗಿದ್ದು, ಅಲ್ಲೆ ಕಾಯುತ್ತಿದ್ದೆವು. ಆ ಸಮಯದಲ್ಲಿ ವ್ಯಕ್ತಿಯೊಬ್ಬ ಬಂದು ನಿಮ್ಮ ಹಣ ಅಲ್ಲಿ ಕೆಳಗೆ ಬಿದ್ದಿದೆ ಎಂದು ಹೇಳಿದ್ದರಿಂದ ಗಾಬರಿಯಾಗಿ ನಾನು ಹಾಗೂ ಪುತ್ರ ಇಬ್ಬರೂ ಗ್ಯಾರೇಜ್ನಿಂದ ಮುಂದೆ ರಸ್ತೆಗೆ ಹೋಗಿ ನೋಡಿದಾಗ 10, 20 ಹಾಗೂ 50 ರೂ. ಮುಖ ಬೆಲೆಯ ನೋಟುಗಳು ಬಿದ್ದಿರುವುದು ಕಾಣಿಸಿತು. ಆ ನೋಟುಗಳನ್ನು ಆಯ್ದುಕೊಂಡು ಗ್ಯಾರೇಜ್ ಸಮೀಪ ಬಂದಾಗ ಸ್ಕೂಟರ್ ಡಿಕ್ಕಿಯಲ್ಲಿದ್ದ ನಗದು ಹಾಗೂ ಚಿನ್ನದ ಓಲೆಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಜಯನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Laxmi News 24×7