ದಾವಣಗೆರೆ: ಜಮೀನಿನಲ್ಲಿ ಬೆಳೆದಿದ್ದ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದ ಅರೋಪಿಯನ್ನು ದಾವಣಗೆರೆ (Davanagere) ಜಿಲ್ಲೆಯ ಮಾಯಕೊಂಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ಕಿರಣ್.ಆರ್ (26) ಬಂಧಿತ ಆರೋಪಿ. ಜುಲೈ 3ರಂದು ಬುಳ್ಳಾಪುರ ತಾಂಡದ ಸಿದ್ದೇಶ್ ನಾಯ್ಕ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದರು. ಸುಮಾರು 5 ಲಕ್ಷ ರೂ.ಗಿಂತಲೂ ಅಧಿಕ ನಷ್ಟ ಉಂಟಾಗಿದೆ ಎಂದು ಮಾಯಕೊಂಡ …
Read More »Daily Archives: ಜುಲೈ 17, 2026
ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನ – ಪ್ರೊಬೆಷನರಿ ಪಿಎಸ್ಐ ಬಂಧನ
ಬಳ್ಳಾರಿ: ಪತಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ, ಪ್ರೊಬೆಷನರಿ ಪಿಎಸ್ಐ ನನ್ನು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಪಟ್ಟಣದಲ್ಲಿ ನಡೆದಿದೆ. ದೊರೆನಾಯ್ಕ್ ಬಂಧಿತ ಪ್ರೊಬೇಷನರಿ PSI. ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ತಾಂಡಾದ ದೊರೆನಾಯ್ಕ್ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ PSI ಆಗಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದ. ತನ್ನೂರು ಪೂಜಾರಹಳ್ಳಿ ತಾಂಡಾದ ಯುವತಿಯನ್ನು ಮೊದಲ ಮದುವೆಯಾಗಿದ್ದ ದೊರೆನಾಯ್ಕ್, ಆ ಬಳಿಕ ದಾವಣಗೆರೆ ಸಮೀಪದ ಹುಲಿಕಟ್ಟಿ ತಾಂಡಾದ …
Read More »ಈ ಸರ್ಕಾರ ಕಿತ್ತೊಗೆದು ವಿಧಾನಸೌಧದ 3ನೇ ಮಹಡಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕು: ಬೊಮ್ಮಾಯಿ
ಹಾವೇರಿ: ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು, ಒಸಿ ಆಡಿಸುವವರು, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟ್ನರ್‌ಶಿಪ್ ನಡೆಯುತ್ತಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್‌ನಲ್ಲಿದ್ದವರು ಪೊಲೀಸ್ ಸ್ಟೇಷನ್‌ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಈ ಸರ್ಕಾರ ಕಿತ್ತೊಗೆದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಅವರು …
Read More »ಜೈಲಿಗೆ ಬರುವಾಗ ಊಟ ಕೇಳಿದ – ಜೀಪ್ ನಿಲ್ಲಿಸುತ್ತಿದ್ದಂತೆ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾದ ಆರೋಪಿ
ಶಿವಮೊಗ್ಗ: ಕಲಬುರಗಿ ಜೈಲಿನಿಂದ ಖೈದಿಗಳು ಪರಾರಿಯಾದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ ಸಹ ಅಂತಹದ್ದೇ ಒಂದು ಪ್ರಕರಣ ನಡೆದಿದೆ. ಜೈಲಿಗೆ ಕರೆದೊಯ್ಯುತ್ತಿದ್ದ ಆರೋಪಿಯೊಬ್ಬ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಹೊಸನಗರ ತಾಲೂಕಿನ ಅಡುಗೋಡಿ ನಿವಾಸಿ ವೆಂಕಟೇಶ್ (36) ಅರಣ್ಯ ಇಲಾಖೆ ವಶದಿಂದ ಪರಾರಿಯಾದ ಆರೋಪಿ. ಈತ 2019-20 ರಲ್ಲಿ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಚಕ್ರಪಾಣಿ ಅವರ ಮೇಲೆ ಹಲ್ಲೆ ಮಾಡಿದ …
Read More »ನಗರದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ
ಬೆಳಗಾವಿ : ನಗರದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಫ್ಲೈಓವರ್ (ಮೇಲ್ಸೇತುವೆ) ಯೋಜನೆಯ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಲೋಕೋಪಯೋಗಿ ಇಲಾಖೆಯು 4 ರಿಂದ5 ಕಿಮೀ ದೂರದ ಫ್ಲೈಓವರ್ ಯೋಜನೆಯ ಮೊದಲ ಹಂತಕ್ಕೆ 270 ಕೋಟಿ ರೂ. ಬಿಡುಗಡೆ ಮಾಡಿರುವ ಹಿನ್ನೆಲಟೆ ಟೆಂಡರ್ ಕರೆಯಲಾಗಿದೆ. …
Read More »ಕೈಗಾರಿಕೆ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಿ
ಬೆಳಗಾವಿ :ಬೆಳಗಾವಿ ನಗರ, ಗ್ರಾಮೀಣ ಭಾಗದ ಕೈಗಾರಿಕೆ ಪ್ರದೇಶಗಳಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆ ತಕ್ಷಣ ಪರಹರಿಸಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು. ನಗರದ ಹೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ನಡುವಿನ ಸಮನ್ವಯ ಕೊರತೆ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದಾಗಿ ಕೈಗಾರಿಕೆ ಉದ್ಯಮಿದಾರರು ಸಮಸ್ಯೆ ಎದುರಿಸುತ್ತಿರುವುದು ಮೇಲ್ನೋಟಕ್ಕೆ ಅನುಮಾನ ವ್ಯಕ್ತವಾಗಿದೆ. ನಿಮ್ಮ …
Read More »ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ, ಯುವಕ ಪೊಲೀಸ್ ವಶಕ್ಕೆ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಕಲ್ಲಾಜೆ ದೇವನಹಳ್ಳಿ ಎಂಬಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜು.7ರಂದು ಯೇನೆಕಲ್ಲು ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದು, ಜು.9ರಂದು ಮನೆಗೆ ಹಿಂದಿರುಗಿದ್ದಳು. ಈ ವೇಳೆ ಸ್ನೇಹಿತೆಯ ಮನೆಯಲ್ಲಿ ಇದ್ದಾಗ, ಕಲ್ಲಾಜೆ ದೇವನಹಳ್ಳಿ ನಿವಾಸಿ ಮೋಕ್ಷಿತ್ ಎಂಬಾತ ಮನೆ ಸಮೀಪಕ್ಕೆ ಕರೆದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, …
Read More »ಪ್ರೇಮ ವೈಫಲ್ಯಕ್ಕೆ ಇಬ್ಬರು ಬಲಿ: ಬೆಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿ ಹತ್ಯೆ
ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಇಬ್ಬರು ಯುವತಿಯರು ಭಗ್ನ ಪ್ರೇಮಿಗಳಿಂದ ಹತ್ಯೆಗೀಡಾಗಿದ್ದಾರೆ. ಪ್ರೀತಿಸಲು ನಿರಾಕರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಅಮೃತಾಳನ್ನು ((24) ಬೆಂಗಳೂರಿನ ಜೀವನ್ ಭೀಮಾನಗರದ ಕೋಡಿಹಳ್ಳಿಯಲ್ಲಿ ನಡುರಸ್ತೆಯಲ್ಲೇ ಅಡ್ಡಗಟ್ಟಿದ ಸಹೋದರರಿಬ್ಬರು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಲ್ಸನ್ಗಾರ್ಡ್ನ ನಿವಾಸಿ ಧನುಷ್(24) ಹಾಗೂ ಆತನ ಸಹೋದರ ಸೂರ್ಯ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜು.13ರಂದು ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜು.15ರ ಸಂಜೆ ಮೃತಪಟ್ಟಿದ್ದಾಳೆ. ಆರೋಪಿಗಳ …
Read More »ಬೆಳಗಾವಿ ಯೂನಿಯನ್ ಜಿಮ್ಖಾನಾ ಭೂಮಿಯನ್ನು ವಶಕ್ಕೆ ಪಡೆದ ರಕ್ಷಣಾ ಸಚಿವಾಲಯ
ಬೆಳಗಾವಿ: 23 ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಂತ್ಯ ಕಂಡಿದೆ. ಅಕ್ರಮವಾಗಿ ವಶದಲ್ಲಿದ್ದ ಬೆಳಗಾವಿಯ ಯೂನಿಯನ್ ಜಿಮ್ಖಾನಾ ರಕ್ಷಣಾ ಇಲಾಖೆ ಭೂಮಿಯನ್ನು ರಕ್ಷಣಾ ಸಚಿವಾಲಯವು 2026ರ ಜುಲೈ 16 ರಂದು ಮರಳಿ ವಶಕ್ಕೆ ಪಡೆದುಕೊಂಡಿದೆ. ಏನಾಯಿತು? ರಕ್ಷಣಾ ಎಸ್ಟೇಟ್ಸ್ ಕಚೇರಿ, ಕರ್ನಾಟಕ ವಲಯದ ಅಧಿಕಾರಿ ದಿವ್ಯಾ ಎಸ್. ಹೊಸೂರು ನೇತೃತ್ವದಲ್ಲಿ ಬೆಳಗಾವಿಯಲ್ಲಿರುವ ಸರಿಸುಮಾರು 6.50 ಎಕರೆ ಅಮೂಲ್ಯ ರಕ್ಷಣಾ ಭೂಮಿಯನ್ನು ವಶಕ್ಕೆ ಪಡೆಯಲಾಯಿತು. 2002ರಲ್ಲಿ ಗುತ್ತಿಗೆ ಅವಧಿ ಮುಗಿದ …
Read More »ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರಿಗೆ ಬೆಳಗಾವಿಯಲ್ಲಿ ಭವ್ಯ ಸನ್ಮಾನ ಸಮಾರಂಭ
ಬೆಳಗಾವಿ: ಶಿಕ್ಷಣ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಪದ್ಮಶ್ರೀ ಡಾ. ಪ್ರಭಾಕರ್ ಬಸವಪ್ರಭು ಕೋರೆ ಅವರನ್ನು ಸನ್ಮಾನಿಸುವ ಭವ್ಯ ಕಾರ್ಯಕ್ರಮ ಜುಲೈ 17 ರಂದು ಬೆಳಗಾವಿಯಲ್ಲಿ ನಡೆಯಲಿದೆ. ಗೋಗ್ಟೆ ಗ್ರೂಪ್, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್, ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಷನ್, ಬೆಳಗಾವಿ ಎಜುಕೇಶನ್ ಸೊಸೈಟಿ ಮತ್ತು ರೋಟರಿ ಪರಿವಾರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮದ ವಿವರ: …
Read More »
Laxmi News 24×7