Breaking News

Daily Archives: ಜುಲೈ 17, 2026

ದೇವಸ್ಥಾನಗಳಲ್ಲಿ ಕನ್ನ: ನಾಲ್ವರನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಖದೀಮರ ಗ್ಯಾಂಗ್ ಒಂದನ್ನು ಬೆಳಗಾವಿ  ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಕನ್ನ ಹಾಕಿದ್ದ ಕಳ್ಳರನ್ನು ಹಿಡಿಯುವಲ್ಲಿ ಬೆಳಾವಿ ಜಿಲ್ಲೆಯ ಜಿಲ್ಲೆಯ ಹಾರೂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ತೋಟದ ಜಮೀನಿನಲ್ಲಿದ್ದ ಶ್ರೀ ರಾಣಮ್ಮಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ …

Read More »

ಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿಯ ಸಿಟೀಸ್ 2.0 ಯೋಜನೆ ಅನುಷ್ಠಾನ ಕುರಿತ ಸಭೆ

ಬೆಳಗಾವಿ : ಸ್ಮಾರ್ಟ್ ಸಿಟಿಯಡಿಯ ಸಿಟೀಜ 2.0 ಯೋಜನೆ ಅನುಷ್ಠಾನದ ಕುರಿತು ಬುಧವಾರ ಮಹಾನಗರ ಪಾಲಿಕೆಯಲ್ಲಿ ಸಭೆ ಜರುಗಿತು. ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಎಂ.ಡಿ.ಕವಿತಾ ವಾರಂಗಲ್ ಸಭೆಗೆ ಮಾಹಿತಿ ನೀಡಿದರು. ಘನ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಕ್ರಿಯಾಯೋಜನೆಗೊಳಪಡುವ  ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ಇ ತ್ಯಾಜ್ಯ ಸಂಗ್ರಹಣ ಘಟಕ, ಯಂತ್ರಗಳು, ವಾಹನಗಳು ಹಾಗೂ ಮಾನವ ಸಂಪನ್ಮೂಲದ ಅಗತ್ಯತೆ ಸೇರಿದಂತೆ …

Read More »

ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರ ಅದ್ಭುತ ಸಾಧನೆ

ಬೆಳಗಾವಿ: ಕಿತ್ತೂರಿನ, ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ಜುಲೈ 6 ರಿಂದ ಜುಲೈ 11, 2026 ರವರೆಗೆ ಹರಿಯಾಣದ ಹಿಸ್ಸಾರ್‌ನ ವಿದ್ಯಾದೇವಿ ಜಿಂದಾಲ್ ಶಾಲೆಯಲ್ಲಿ ಆಯೋಜಿಸಲಾದ ಅಖಿಲ ಭಾರತ ಐಪಿಎಸ್‌ಸಿ ಹಾಕಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 14 ವರ್ಷ, 17 ವರ್ಷ ಮತ್ತು 19 ವರ್ಷ ವಿಭಾಗಕ್ಕೆ ಒಳಪಟ್ಟ ಬಾಲಕಿಯರ ತಂಡಗಳು ಭಾಗವಹಿಸಿದ್ದವು. ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 15 ಪ್ರತಿಷ್ಠಿತ ಬಾಲಕಿಯರ ಶಾಲೆಗಳು …

Read More »

ಬೆಳಗಾವಿ ಗ್ರಾಮೀಣ ಮತಕ್ಷೇತ್ರ: ಮತದಾರರ ಸಮಗ್ರ ಪರಿಷ್ಕರಣೆ

ಬೆಳಗಾವಿ: ಭಾರತ ಚುನಾವಣಾ ಆಯೋಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026  ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜೂನ್ 30 2026 ರಿಂದ 13-ಬೆಳಗಾವಿ ಗ್ರಾಮೀಣ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ರವರು Enumeration Forms ನೊಂದಿಗೆ ಮತದಾರರ ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ. 13-ಬೆಳಗಾವಿ ಗ್ರಾಮೀಣ ವಿಧಾನ ಸಭಾಕ್ಷೇತ್ರದ ದಿನಾಂಕ: 6-06-2026 ರ …

Read More »

ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಮಾಜಿ ಸಚಿವ ಭೈರತಿ ಬಸವರಾಜ ಭಾಗಿ

ಬೆಳಗಾವಿ: ಬೆಳಗಾವಿ ನಗರದ  ಧರ್ಮನಾಥ ಭವನದ ಹತ್ತಿರವಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ  ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಸಂಘಟನಾತ್ಮಕ ಸಭೆಯನ್ನು ಉದ್ದೇಶಿಸಿ  ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಭೈರತಿ ಬಸವರಾಜ ಭಾಗವಹಿಸಿ ಮುಂಬರುವ ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು ನಂತರ ಮಾತನಾಡಿದ ಅವರು ಪಕ್ಷ ನೀಡುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಮುಖಂಡರು,ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಹೋಗಿ ಪಕ್ಷದ  ಕಾರ್ಯಕರ್ತರಿಗೆ …

Read More »

24 ವರ್ಷದ ಮಹಿಳೆ ಕಾಣೆ: ಪತ್ತೆಗೆ ಮನವಿ

 ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿಯಾದ ನೇತ್ರಾ ಶಿವಾನಂದ ಗಸ್ತಿ ಎಂಬ 24 ವರ್ಷದ ಮಹಿಳೆ ಜುಲೈ 12, 2026 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ತನ್ನ ಇಬ್ಬರು ಮಕ್ಕಳನ್ನು ಗೋಕಾಕ ತಾಲೂಕಿನ ಕೆಮ್ಮನಕೋಲ ಗ್ರಾಮದಲ್ಲಿ ತನ್ನ ತವರು ಮನೆಯಲ್ಲಿ ಬಿಟ್ಟು ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದರ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮಹಿಳೆಯ ಚಹರೆ: ಎತ್ತರ 5 ಫೂಟ, ಸದೃಢ ಮೈಕಟ್ಟು, …

Read More »