Breaking News

120 ಸ್ಥಾನ ಪಡೆಯೋ ಕಾಲವೂ ಬರುತ್ತೆ, ಅಲ್ಲಿವರೆಗೂ ‌ನಾನೇನು ಸಾಯಲ್ಲ: ಹೆಚ್‌ಡಿಕೆ ತಿರುಗೇಟು

Spread the love

ಬೆಂಗಳೂರು: ಜೆಡಿಎಸ್‌ 120 ಸ್ಥಾನ ಪಡೆಯುವ ಕಾಲವೂ ಬರುತ್ತದೆ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ  ಅವರು, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು.

ಕುಮಾರಸ್ವಾಮಿ 120 ಸ್ಥಾನ ಗೆದ್ದು ತೋರಿಸಲಿ ಎಂಬ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 20 ವರ್ಷಗಳಿಂದ ಟೀಕೆ ‌ಮಾಡ್ತಾನೇ ಇದ್ದಾರೆ. ನನ್ಮ ವಿರುದ್ಧ ವಿಷ ಕಾರುತ್ತಾರೆ. ನೋಡೋಣ 120 ಸೀಟು ಗೆದ್ದು ತೋರಿಸೋ ದಿನ ಬರುತ್ತದೆ. ಅಲ್ಲಿವರೆಗೂ ‌ನಾನೇನು ಸಾಯಲ್ಲ ಎಂದರು.

ಪ್ರಾದೇಶಿಕ ಪಕ್ಷ ಉಳಿಯೋದು‌ ಎಷ್ಟು ಕಷ್ಟ ಅಂತ ಗೊತ್ತಿದೆ. 18 ಸ್ಥಾನ ಗೆದ್ದು ಇನ್ನೂ ಉಳಿದಿದ್ದೇವೆ. ನಿಮ್ಮ ಕಾಂಗ್ರೆಸ್ (Congress) ‌ಪರಿಸ್ಥಿತಿ ಏನಾಗಿದೆ? ಬಂಗಾಳದಲ್ಲಿ ಏನ್‌ ಆಯ್ತು? ಕಾಂಗ್ರೆಸ್ 100 ವರ್ಷಗಳ ಪಕ್ಷ, ತಮಿಳುನಾಡಿನಲ್ಲಿ ಡಿಎಂಕೆ ತಲೆ ಮೇಲೆ ಕೈ ಇಟ್ರಿ. ಪಂಜಾಬ್, ಬಿಹಾರದಲ್ಲಿ‌ ಎಲ್ಲಿಗೆ ಬಂತು ನಿಂತಿದ್ದೀರಾ? ನನ್ನದು ಸಣ್ಣ ಪಕ್ಷ 18 ಸ್ಥಾನ ಗೆದ್ದಿದ್ದೇನೆ. ನಿಮ್ಮ ಸ್ಥಾನ ಎಷ್ಟಿದೆ ನೋಡಿಕೊಳ್ಳಿ ಅಂತ ಲೇವಡಿ ಮಾಡಿದ್ರು

120 ಸ್ಥಾನ ಗೆಲ್ಲುವ ದಿನ ಬರುತ್ತದೆ. ರಾಜ್ಯದ ಜನ ಎಷ್ಟು ದಿನ ಅಂತ ಇವರನ್ನು ಸಹಿಸಿಕೊಳ್ತಾರೆ? 120 ಸ್ಥಾನ ಗೆದ್ದು ತೋರಿಸುವ ದಿನವೂ ಬರಲಿದೆ ಅಂತ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ‌ತಿರುಗೇಟು ಕೊಟ್ಟರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ