ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆಸುವ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬಿಗ್ ಶಾಕ್ ನೀಡಿದ್ದಾರೆ. ರಸ್ತೆ ಡಾಂಬರೀಕರಣದಲ್ಲಿ ನಡೆದಿದ್ದ ಗಂಭೀರ ಅಕ್ರಮವನ್ನು ಖುದ್ದಾಗಿ ಪತ್ತೆಹಚ್ಚಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸಹಾಯಕ ಎಂಜಿನಿಯರ್‌ಗೆ ತಲೆದಂಡವಾಗಿದೆ. ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗಂಭೀರ ನಿಯಮ ಉಲ್ಲಂಘನೆ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಬೆಂಗಳೂರು …
Read More »Monthly Archives: ಜೂನ್ 2026
ವಿಧಿಯ ಕ್ರೂರ ಆಟಕ್ಕೆ ಒಂದೇ ಕುಟುಂಬದ ಮೂವರು ಬಲಿ: ಕಿಲ್ಲರ್ ಬಿಎಂಟಿಸಿ ಅಟ್ಟಹಾಸಕ್ಕೆ ಸುಂದರ ಸಂಸಾರವೇ ಸರ್ವನಾಶ!
ಇವರಿಬ್ಬರದ್ದು ಬಡತನದಲ್ಲೇ ಅರಳಿದ್ದ ಅಪರೂಪದ ಪ್ರೀತಿ.. ಜೀವಕ್ಕೆ ಜೀವ ಅಂತಿದ್ದವರು ಪ್ರೀತಿಸಿ ಮದುವೆ ಎನ್ನುವ ಬಂಧದಲ್ಲಿ ಬಂಧಿಯಾಗಿದ್ದರು. ಮನೆಯಲ್ಲಿ ಅದೆಷ್ಟೇ ಬಡತನವಿದ್ದರೂ ಇವರ ಪ್ರೀತಿಗೆ ಮಾತ್ರ ಯಾವುದೇ ಬಡತನವಿರಲಿಲ್ಲ. ಮುದ್ದಾದ ಮಗಳೊಂದಿಗೆ ‘ನನಗೆ ನೀನು, ನಿನಗೆ ನಾನು’ ಅಂತಾ ಇರೋದ್ರಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಆದರೆ, ಇವರ ಈ ಪುಟ್ಟ ಸಂಸಾರದ ಖುಷಿಯನ್ನು ಆ ಭಗವಂತನಿಗೂ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ ಅನಿಸುತ್ತದೆ.. ಬಸ್ ರೂಪದಲ್ಲಿ ಬಂದ ಜವರಾಯ ಇಡೀ ಸಂಸಾರವನ್ನೇ ಮುಗಿಸಿಬಿಟ್ಟಿದ್ದಾನೆ! …
Read More »ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ: ಯು.ಟಿ ಖಾದರ್
ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಮುಂಭಾಗ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮಾತ್ರವಲ್ಲ, ಮನೆಯವರೆಲ್ಲ ಯೋಗ ಅಳವಡಿಸಿಕೊಳ್ಳಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶಕ್ಕೂ ಯೋಗ ಹಬ್ಬಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನವೂ ಯೋಗದಿನವಾಗಬೇಕು ಎಂದು ಯೋಗದ …
Read More »ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್‌ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು: ಕುಮಾರ್ ಬಂಗಾರಪ್ಪ
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ರೂ, ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ತಪ್ಪನ್ನು ಮನ್ನಿಸಬೇಕು. ಪಕ್ಷಕ್ಕೆ ಕರೆತಂದು ಬಿಜೆಪಿಯಿಂದ ವಿಪಕ್ಷ ನಾಯಕರನ್ನಾಗಿ ಮಾಡಬೇಕು ಎಂದು ರೆಬೆಲ್ ನಾಯಕ ಕುಮಾರ್ ಬಂಗಾರಪ್ಪ ಆಗ್ರಹಿಸಿದ್ದಾರೆ. ವಿಧಾನ ಪರಿಷತ್ ಚುಣಾವಣೆಯಲ್ಲಿ ಬಿಜೆಪಿ ನಾಯಕರು ಅಡ್ಡಮತದಾನ ಮಾಡಿದ ಹಿನ್ನೆಲೆ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಭಿನ್ನಮತೀಯರು ದನಿ ಎತ್ತಿದ್ದಾರೆ. ವಿಡಿಯೋ ಹೇಳಿಕೆಯೊಂದನ್ನ ಬಿಡುಗಡೆ …
Read More »ನಾನು ಅಡ್ಡ ಮತದಾನ ಮಾಡಿಲ್ಲ, ಮುಜುಗರ ಉಂಟು ಮಾಡಬೇಡಿ: ಚಂದ್ರು ಲಮಾಣಿ
ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಅವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವುದು ಸಂಪೂರ್ಣ ಸುಳ್ಳು ಸುದ್ದಿ ಎಂದು ಆಕ್ರೋಶ ಹೊರಹಾಕಿದ್ದಾರೆ. ನಾವು ಅಡ್ಡ ಮತದಾನ ಮಾಡಿದ್ದೇವೆ ಎಂದು ಮಾಧ್ಯಮಗಳಲ್ಲಿ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಬಿಜೆಪಿಯಿಂದ ಒಬ್ಬ ಅಭ್ಯರ್ಥಿಗೆ 30 ಮತಗಳಂತೆ, ಇಬ್ಬರು ಅಭ್ಯರ್ಥಿಗಳಿಗೆ ಮತ …
Read More »2 ಕೋಟಿ ವಿಮೆಗಾಗಿ ಗಂಡನನ್ನು ಕೊಂದ ಮಗಳು ಅರೆಸ್ಟ್ – ಊರಲ್ಲಿ ತಲೆ ಎತ್ತಲಾಗದೆ ತಾಯಿ ಆತ್ಮಹತ್ಯೆ
ಬೆಳಗಾವಿ: 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿಬಂಧನಕ್ಕೊಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ. ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಸುಮಾ ಮತ್ತು ಆಕೆಯ ಪ್ರಿಯಕರ …
Read More »ಸಂತೋಷದ ಬದುಕಿಗೆ ಯೋಗ ದಾರಿ : ವೀರಣ್ಣ ಚರಂತಿಮಠ
ಬಾಗಲಕೋಟೆ : ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಜೀವನ ವಿಧಾನವಾಗಿದೆ. ಇಂದಿನ ವೇಗದ ಜೀವನದಲ್ಲಿ ಯೋಗವು ಒತ್ತಡವನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಹೇಳಿದರು. ನಗರದ ಬಿವಿವಿ ಸಂಘದ ಮೈದಾನದಲ್ಲಿ ವಿವಿಧ ಮಹಾವಿದ್ಯಾಲಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹನ್ನೆರಡನೇಯ ಯೋಗದಿನದಲ್ಲಿ ಪಾಲ್ಗೊಂಡು ಮಾತನಾಡಿ ಅವರು …
Read More »ಮನೆಯಲ್ಲಿ ಮಲಗಿದ್ದ ಯುವಕನ ಬರ್ಬರ ಹತ್ಯೆ
ಶಿವಮೊಗ್ಗ: ಮನೆಯಲ್ಲಿ ಮಲಗಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರವೀಣ್ (29) ಕೊಲೆಯಾದ ಯುವಕ. ಈತ ಟ್ರ್ಯಾಕ್ಟರ್ ಬಾಡಿಗೆ ಹಾಗೂ ಇತರೆ ಕೆಲಸಗಳನ್ನು ಮಾಡಿಕೊಂಡಿದ್ದ. ಎಂದಿನಂತೆ ಗುರುವಾರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದಾಗ ಆತನನ್ನು ಹತ್ಯೆ ಮಾಡಲಾಗಿದೆ. ಕೆಲಸಕ್ಕೆ ಬರುವಂತೆ ಹಿಂದಿನ ದಿನ ಕೆಲವು ಯುವಕರಿಗೆ ಪ್ರವೀಣ್ ತಿಳಿಸಿದ್ದ. ಇಂದು ಬೆಳಗ್ಗೆ ಯುವಕರು ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಈ …
Read More »ಪರಿಹಾರ ವಿಚಾರಕ್ಕೆ ಗಲಾಟೆ – ರೈತರ ಶರ್ಟ್ ಹಿಡಿದು ಎಳೆದೊಯ್ದು PSI ದರ್ಪ
ಕೊಪ್ಪಳ: ಪರಿಹಾರ ಹಣದ ವಿಚಾರವಾಗಿ ನಡೆದ ಗಲಾಟೆ ವೇಳೆ ರೈತರ ಶರ್ಟ್ ಕಾಲರ್ ಹಿಡಿದು ಪಿಎಸ್‌ಐ ದರ್ಪ ತೋರಿಸಿರುವ ಘಟನೆ ಯಲಬುರ್ಗಾ ತಾಲೂಕಿನಲ್ಲಿ ಗುತ್ತೂರ ಗ್ರಾಮದಲ್ಲಿ ನಡೆದಿದೆ. ಬೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ ಮೇಲೆ ದರ್ಪ ತೋರಿದ್ದಾನೆ. ಶುಕ್ರವಾರ (ಜೂ.19) 10 ಎಕರೆ ಜಮೀನಿನಲ್ಲಿ ಹೈ-ಟೆನ್ಶನ್ ವಿದ್ಯುತ್‌ನ ನಾಲ್ಕು ಕಂಬ ಅಳವಡಿಸಲು ರೈತರು 1.20 ಕೋಟಿ ರೂ. ಪರಿಹಾರ ಕೇಳಿದ್ದರು. ಆದರೆ …
Read More »ಬಿ.ವಿ.ವಿ ಸಂಘದ ಬಿಮ್ಸ್ ವಿದ್ಯಾರ್ಥಿನಿಗೆ 1.10 ಲಕ್ಷ ರೂಗಳ ಸಹಾಯಧನ
ಬಾಗಲಕೋಟೆ: ಬಿ.ವಿ.ವಿ ಸಂಘದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ ಸ್ಟಡೀಜ್ (ಬಿಮ್ಸ್)ನಲ್ಲಿ 2005-07ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ ದುಬೈನಲ್ಲಿರುವ ನೆಟವರ್ಕ್ ಇಂಟರನ್ಯಾಷನಲ್ ಎಲ್.ಎಲ್.ಸಿ ಸಂಸ್ಥೆಯ ಗುಪ್ರ್ ಅಕ್ವೈರಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ದುರ್ಗಾ ಪ್ರವೀಣಾ ವಂಕಾ ರವರು ಮಹಿಳಾ ಸಬಲೀಕರಣ ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಬಾಗಲಕೋಟೆ ನಗರದ ಪ್ರತಿಷ್ಠಿತ ಎಂ.ಬಿ.ಎ ಮಹಾವಿದ್ಯಾಲಯವಾದ ಬಿ.ವಿ.ವಿ ಸಂಘದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ ಸ್ಟಡೀಜ್ (ಬಿಮ್ಸ್)ನಲ್ಲಿ ವ್ಯಾಸಾಂಗ ಮಾಡುತ್ತಿರುವ ಪ್ರತಿಭಾವಂತ …
Read More »
Laxmi News 24×7