ಬಾಗಲಕೋಟೆ: ಬಿ.ವಿ.ವಿ ಸಂಘದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ ಸ್ಟಡೀಜ್ (ಬಿಮ್ಸ್)ನಲ್ಲಿ 2005-07ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ ದುಬೈನಲ್ಲಿರುವ ನೆಟವರ್ಕ್ ಇಂಟರನ್ಯಾಷನಲ್ ಎಲ್.ಎಲ್.ಸಿ ಸಂಸ್ಥೆಯ ಗುಪ್ರ್ ಅಕ್ವೈರಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ದುರ್ಗಾ ಪ್ರವೀಣಾ ವಂಕಾ ರವರು ಮಹಿಳಾ ಸಬಲೀಕರಣ ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಬಾಗಲಕೋಟೆ ನಗರದ ಪ್ರತಿಷ್ಠಿತ ಎಂ.ಬಿ.ಎ ಮಹಾವಿದ್ಯಾಲಯವಾದ ಬಿ.ವಿ.ವಿ ಸಂಘದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ ಸ್ಟಡೀಜ್ (ಬಿಮ್ಸ್)ನಲ್ಲಿ ವ್ಯಾಸಾಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ. ಶ್ರವಣಾ ಸಿದ್ನಾಳ ಅವರ ಎಂ.ಬಿ.ಎ ಶಿಕ್ಷಣಕ್ಕಾಗಿ 1,10,000.00 ರೂಗಳ ಸಹಾಯಧನವನ್ನು ನೀಡಿದ್ದಾರೆ. ಈ ಸಹಾಯಧನವು ವಿದ್ಯಾರ್ಥಿನಿಯ ಉನ್ನತ ಶಿಕ್ಷಣ ಕನಸನ್ನು ನನಸಾಗಿಸಲು ಹಾಗೂ ಭವಿಷ್ಯದಲ್ಲಿ ಸಮರ್ಥ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ.
ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ|| ವೀರಣ್ಣ ಸಿ. ಚರಂತಿಮಠ ಹಾಗೂ ಬಿ.ವಿ.ವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ. ಗುರುಬಸವ ಎಸ್. ಸೂಳಿಭಾವಿ ಮತ್ತು ಬಿಮ್ಸ್ ಮಹಾವಿದ್ಯಾಲಯದ ನಿರ್ದೇಶಕರಾದ ಡಾ|| ಪ್ರಕಾಶ ಕೆ. ವಡವಡಗಿರವರು ದುರ್ಗಾ ಪ್ರವೀಣಾ ವಂಕಾ ಅವರ ಸಾಮಾಜಿಕ ಕಳಕಳಿ, ಶಿಕ್ಷಣಾಭಿವೃದ್ಧಿಯ ಬದ್ದತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ನೀಡಿರುವ ಈ ಮಹತ್ವದ ಸಹಾಯಧನವನ್ನು ಶ್ಲಾಘಿಸಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
Laxmi News 24×7