Breaking News

Monthly Archives: ಜೂನ್ 2026

ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸಲು ಆಗ್ರಹ

ಬೆಳಗಾವಿ : ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಹತ್ತು ಗ್ರಾಮಗಳವರು ಜು.1ರ ಗಡುವು ನೀಡಿದ್ದಾರೆ. ಶುಕ್ರವಾರ ಗ್ರಾಮಗಳ ಪ್ರಮುಖರು ಈ ಸಂಬಂಧದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ. ಜು.1ರ ನಂತರ ಇಲ್ಲಿ ಕಸ ತಂದು ಸುರಿಯುವುದನ್ನೇ ತಡೆಯುವ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಏಪ್ರಿಲ್ 10ರಂದು ಮನವಿ ಕೊಟ್ಟಾಗ, 60 ದಿನದೊಳಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ …

Read More »

ಸಿಎಂ ‌ಪದಕ‌ ಪಡೆದ ಪಿಎಸ್ಐ ಲೋಕಾಯುಕ್ತ ಬಲೆಗೆ

ಬೆಳಗಾವಿ : ಲಂಚ ಸ್ವೀಕರಿಸುತ್ತಿದ್ದ ವೇಳೆ ಚಿನ್ನದ ಪದಕ ಪಡೆದಿದ್ದ ಪಿಎಸ್ಐ ಹಾಗೂ ಅದೇ ಪೊಲೀಸ್ ಠಾಣೆಯ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ತಡ ರಾತ್ರಿ ನಡೆದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸ್‌ ಠಾಣೆ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಸುಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಹಕಾರ ನೀಡುವುದಾಗಿ …

Read More »

ಖಾಸಗೀಕರಣ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತ ಸಂಘಟನೆಗಳಿಂದ ಮನವಿ

 ಬೆಳಗಾವಿ : ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಸೇರಿ ವಿವಿಧ ಸೇವಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತರು ದೇಶದ ಆಹಾರ ಭದ್ರತೆಯ ಮುಖ್ಯ ಆಧಾರವಾಗಿದ್ದಾರೆ. ಪ್ರತಿಕೂಲ ಹವಾಮಾನ, ಬೆಲೆ ಏರಿಳಿತ, ಉತ್ಪಾದನಾ ವೆಚ್ಚ ಹೆಚ್ಚಳ ಸೇರಿ ಹಲವು ಸಂಷಕ್ಟ ಮತ್ತು ಸವಾಲುಗಳನ್ನು ಎದುರಿಸಿ, ಅನ್ನದಾತರು ದೇಶಕ್ಕೆ ಆಹಾರ …

Read More »

ಎಐ ಬಳಸಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್ – ಮೂವರು ಅರೆಸ್ಟ್

ಬೆಂಗಳೂರು: ಕಾಂತಾರದ  ಕನಕವತಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಗಲಕೋಟೆ ನಿವಾಸಿ ರವಿಕುಮಾರ್ (24), ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಚಂದ್ರಕಾಂತ್ (33) ಮತ್ತು ಬೆಂಗಳೂರು ಮೂಲದ ರಂಜಿತ್ (25) ಬಂಧಿತ ಆರೋಪಿಗಳು.  ಈ ಸಂಬಂಧ ರುಕ್ಮಿಣಿ ವಸಂತ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಎಐ ತಂತ್ರಜ್ಞಾನ ಬಳಸಿ ನನ್ನ …

Read More »

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರ ವಿರುದ್ಧ ಪೋಸ್ಟ್ – ಸಿಎಂ ವಿರುದ್ಧ ದಾಖಲಾಗಿದ್ದ FIR ರದ್ದು

ಬೆಂಗಳೂರು: ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡು ಬಿಜೆಪಿ ನಾಯಕರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮೇಲೆ ದಾಖಲಾಗಿದ್ದ ಎಫ್‌ಐಆರ್  ಅನ್ನು ಹೈಕೋರ್ಟ್‌ ವಜಾಗೊಳಿಸಿದೆ. ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ರದ್ದತಿ ಕೋರಿ ಡಿಕೆ ಶಿವಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ಪರ ವಕೀಲ ಹೆಚ್‌.ವಿ ಪ್ರವೀಣ್‌ ಗೌಡ ಅವರು ವಾದ ಮಂಡಿಸಿ, ಶಿವಕುಮಾರ್‌ ಅವರ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಆಕ್ಷೇಪಾರ್ಹ ಪೋಸ್ಟ್‌ಗಳನ್ನು …

Read More »

ಚಿನ್ನದ ಓಲೆಗಾಗಿ 80 ವರ್ಷದ ಅಜ್ಜಿಯ ಕೊಲೆ – ಕಿವಿ ಕತ್ತರಿಸಿ ಪರಾರಿಯಾದ ಕಳ್ಳ

ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕೊಲೆಗೈದು, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ. 80 ವರ್ಷದ ಸುಬ್ಬಮ್ಮ ಮೃತ ವೃದ್ಧೆ. ಯಾರೂ ಇಲ್ಲದ ವೇಳೆ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ವೃದ್ಧೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಕಿವಿಗಳನ್ನು ಕತ್ತರಿಸಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಕೆಲಸಕ್ಕೆ ಹೋಗಿದ್ದ ಸುಬ್ಬಮ್ಮ ಅವರ ಮಗಳು …

Read More »

ತೀವ್ರ ಎದೆನೋವಿನಿಂದ ASI ಸಾವು

ತುಮಕೂರು: ತೀವ್ರ ಎದೆ ನೋವಿನಿಂದ ಎಎಸ್‌ಐ ಸಾವನ್ನಪ್ಪಿದ ಘಟನೆ ಕೊರಟಗೆರೆಯಲ್ಲಿ  ನಡೆದಿದೆ. ಎನ್.ಜಿ ಪವಾರ್ (54) ಮೃತ ಎಎಸ್‌ಐ. ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಸಿಬ್ಬಂದಿ ಬ್ಯಾರಕ್‌ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿಶ್ರಾಂತಿಗೆ ತೆರಳಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಅವರು ಕೊನೆ ಉಸಿರೆಳಿದಿದ್ದಾರೆ. ಎನ್.ಜಿ ಪವಾರ್ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವರು. ಬಾಗಲಕೋಟೆಯಲ್ಲಿ ಪತ್ನಿ ಹೆಡ್ …

Read More »

ಅಕ್ರಮ ಭೂಮಿ ಮಂಜೂರಾತಿ ಪ್ರಕರಣ – ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸಿಐಡಿ ವಶಕ್ಕೆ

ಹಾಸನ: ಅಕ್ರಮ ಭೂಮಿ ಮಂಜೂರಾತಿ ಪ್ರಕರಣದಲ್ಲಿ  ಜೆಡಿಎಸ್‌ನ ಮಾಜಿ ಶಾಸಕ ಕೆ.ಎಸ್ ಲಿಂಗೇಶ್  ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2018 ರಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಲಿಂಗೇಶ್ ಅವರು ಶಾಸಕಾರಾಗಿ ಆಯ್ಕೆಯಾಗಿದ್ದರು. ಆಗ ಅವರು ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿರುವ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಅಕ್ರಮ ಭೂಮಿ ಮಂಜೂರಾತಿ ಆರೋಪದ ಬಗ್ಗೆ ಕೋಲಾರದ ಆರ್‌ಟಿಐ …

Read More »

ಕೊಕ್ಕನೂರು ಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ ಕೇಸ್‌ – 11 ಮಂದಿ ವಿರುದ್ಧ ಎಫ್‌ಐಆರ್

ದಾವಣಗೆರೆ:‌ ಕೊಕ್ಕನೂರು ಸರ್ಕಾರಿ ಶಾಲೆಯ  ಮುಖ್ಯ ಶಿಕ್ಷಕ ಜಯಪ್ಪ (54) ಆತ್ಮಹತ್ಯೆ ಪ್ರಕರಣದಲ್ಲಿ ಶಾಲಾ ಸಹ ಶಿಕ್ಷಕರು, ಬಿಸಿಯೂಟದ ನಾಲ್ವರು ಅಡುಗೆ ಸಿಬ್ಬಂದಿ, ಸಿಆರ್‌ಪಿ ಹಾಗೂ ಬಿಆರ್‌ಪಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜಯಪ್ಪ ಪತ್ನಿ ಅಂಜನಮ್ಮ ನೀಡಿದ ದೂರಿನ ಮೇರೆಗೆ ಮಲೇಬೆನ್ನೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಾನಸಿಕ ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಿಆರ್‌ಪಿ, ಬಿಆರ್‌ಪಿ, ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ, …

Read More »

ಕೊಡಗಿನ ತಾಯಿ-ಮಗು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಮತಾಂತರ & ಲವ್ ಜಿಹಾದ್‌ಗೆ ದೊಡ್ಡ ಸಂಚು

ಮಡಿಕೇರಿ: ಒಂದೂವರೆ ತಿಂಗಳ ಹಿಂದೆ ಕೊಡಗಿನ  ಕುಶಾಲನಗರದಿಂದ ನಾಪತ್ತೆಯಾಗಿದ್ದ ಸಚಿತಾ ಹಾಗೂ ಆಕೆಯ 9 ವರ್ಷದ ಮಗು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ಹಿಂದೆ ಮತಾಂತರ ಹಾಗೂ ಲವ್ ಜಿಹಾದ್‌ನ  ದೊಡ್ಡ ಸಂಚು ಇದೆ ಎಂದು ಕುಶಾಲನಗರದ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಮಲಪ್ಪುರಂ ಜಿಲ್ಲೆಯ ಪೊನ್ನಾಣಿ ಹಾಗೂ ಮಂಜೇರಿ ಭಾಗಗಳಲ್ಲಿ ಮತಾಂತರ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನೂ ಮಾಡಿವೆ. ಕುಶಾಲನಗರ ಬಳಿಯ ಎನ್‌ಟಿಸಿ ಕಾಂಪ್ಲೆಕ್ಸ್‌ನ …

Read More »