ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ , ಪವನ್ ಖೇರಾ, ಮನ್ಸೂರ್ ಅಲಿಖಾನ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೊ. ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪವನ್ ಖೇರಾ, ಮನ್ಸೂರ್ ಅಲಿಖಾನ್ ಹಾಗೂ ಪ್ರೊ. ನಾಗರಾಜ್ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಖರ್ಗೆ ಅವರು ದೆಹಲಿಯಲ್ಲಿರುವ ಕಾರಣ ಬೆಂಗಳೂರಿಗೆ ವಾಪಸ್ ಆದ ಬಳಿಕ ಪ್ರಮಾಣ ಪತ್ರ …
Read More »Daily Archives: ಜೂನ್ 12, 2026
ಜೈಲಿನಿಂದಲೇ ಪತ್ನಿ ಕೊಲೆಗೆ ಸುಪಾರಿ – ಬುರ್ಖಾ ಧರಿಸಿ ಬಂದು ಧರ್ಮದೇಟು ತಿಂದ ಪತಿಯ ಸಹಚರರು
ಶಿವಮೊಗ್ಗ: ಬುರ್ಖಾ ಧರಿಸಿ ಮಹಿಳೆಯೊಬ್ಬಳ ಹತ್ಯೆಗೆ ಸಂಚು ರೂಪಿಸಿಕೊಂಡು ಬಂದಿದ್ದ ಮೂವರು ಯುವಕರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆಯಲ್ಲಿ ನಡೆದಿದೆ. ಬೊಮ್ಮನಕಟ್ಟೆಯ ದರ್ಶನ್ (18), ಮಹೇಶ್ (20) ಮತ್ತು ಅಸ್ಲಾಂ (25) ಸಿಕ್ಕಿಬಿದ್ದ ಆರೋಪಿಗಳು. ರೌಡಿಶೀಟರ್ ಸಾತು ಪತ್ನಿ ತಬಸುಮ್ ಬಾನು ಕೊಲೆಗೆ ಆರೋಪಿಗಳು ಬಂದಿದ್ದರು. ತಬಸುಮ್ ಬಾನು ಮನೆಗೆ ನುಗ್ಗಿ, ಕೊಲೆಗೆ ಯತ್ನಿಸಿದ್ದರು. ಆಗ ಮಹಿಳೆ ಕೂಗಿದ್ದರಿಂದ ಪರಾರಿಯಾಗಲು …
Read More »ಗೃಹಲಕ್ಷ್ಮಿ ಯೋಜನೆಗೆ ಈಗ ಕಂಡಿಷನ್ ಯಾಕೆ?: ಸಿ.ಟಿ ರವಿ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಕಾ ಪಾಟೀಲ್ ನಿಂಗೂ ಫ್ರೀ, ಜಮೀರ್ ಅಹ್ಮದ್, ಮಹದೇವಪ್ಪ ನಿಂಗೂ ಫ್ರೀ ಎಂದು ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯನವರು ತಿಳಿಸಿದ್ದರು ಎಂದು ಗಮನ ಸೆಳೆದರು. 10 ಕೆಜಿ ಅಕ್ಕಿ ಕೊಟ್ಟಿದ್ದೀರಾ? ಮೋದಿಯವರು 5 ಕೆಜಿ ಅಕ್ಕಿ ಕೊಡದೇ ಇದ್ದರೆ, …
Read More »ಛತ್ತೀಸ್‌ಗಢ ಸಚಿವ ಗಜೇಂದ್ರ ಯಾದವ್ ಐತಿಹಾಸಿಕ ಲಕ್ಕುಂಡಿ ಕ್ಷೇತ್ರಕ್ಕೆ ಭೇಟಿ: ಪರಂಪರೆಗೆ ಶ್ಲಾಘನೆ
ಗದಗ: ಛತ್ತೀಸ್‌ಗಢ ರಾಜ್ಯದ ಶಾಲಾ ಶಿಕ್ಷಣ, ಗ್ರಾಮೋದ್ಯಮ, ಕಾನೂನು ಹಾಗೂ ಶಾಸನ ವ್ಯವಹಾರಗಳ ಸಚಿವರಾದ ಗಜೇಂದ್ರ ಯಾದವ್ ಅವರು ಇಂದು ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಪುರಾತನ ದೇವಾಲಯಗಳು ಹಾಗೂ ಪಾರಂಪರಿಕ ಸ್ಮಾರಕಗಳನ್ನು ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಲಕ್ಕುಂಡಿ ದೇಶದಲ್ಲೇ ವಿಶಿಷ್ಟವಾದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ತಾಣವಾಗಿದೆ. ಭಗವಾನ್ ಮಹಾದೇವರ ವಿವಿಧ ಸ್ವರೂಪಗಳನ್ನು ಪ್ರತಿಬಿಂಬಿಸುವ ಅನೇಕ ದೇವಾಲಯಗಳು …
Read More »ಲವ್ವರ್‌ಗೆ ಮೆಸೆಜ್ ಮಾಡಿ ಕರೆಸಿ ಮಾರಣಾಂತಿಕ ಹಲ್ಲೆ – ಯುವತಿಯ ಪೋಷಕರ ವಿರುದ್ಧ ಎಫ್‌ಐಆರ್
ತುಮಕೂರು: ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೌರ ಕಾರ್ಮಿಕ ಯುವಕನಿಗೆ ಯುವತಿಯ ಪೋಷಕರು ಮನಸೋ ಇಚ್ಛೆ ಥಳಿಸಿದ ಘಟನೆ ತುಮಕೂರಿನ ಕುಣಿಗಲ್‌ನಲ್ಲಿ ನಡೆದಿದೆ. ಗುಬ್ಬಿ ಪಟ್ಟಣದ ನಿವಾಸಿ ಮೋಹಿತ್ ಥಳಿತಕ್ಕೊಳಗಾದ ಯುವಕ. ಕುಣಿಗಲ್ ಮೂಲದ ಕಾಲೇಜು ಯುವತಿ ಗುಬ್ಬಿ ಜಾತ್ರೆಗೆ ಬಂದಾಗ ಮೋಹಿತ್‌ನ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್‌ನಲ್ಲಿ ತೊಡಗಿದ್ದರು. ಇದು ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಮಗಳ ಮೊಬೈಲ್‌ನಿಂದ ಮೋಹಿತ್‌ಗೆ ಮೆಸೆಜ್ ಮಾಡಿ …
Read More »ಬಾರ್‌ನಲ್ಲಿ ಅಗ್ನಿ ಅವಘಡ – ತಪ್ಪಿದ ಅನಾಹುತ
ಕಲಬುರಗಿ: ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ವೃತ್ತದಲ್ಲಿರುವ ಬಾರ್ & ರೆಸ್ಟೋರೆಂಟ್ ಒಂದರ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾರ್‌ನ ಮೇಲಂತಸ್ತಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಜ್ವಾಲೆಗಳು ವ್ಯಾಪಿಸಿ ಕಟ್ಟಡದ ಮೇಲ್ಭಾಗ ಧಗಧಗನೆ ಹೊತ್ತಿ ಉರಿದಿದೆ. ವಿಷಯ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ …
Read More »ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್
ಉಡುಪಿ: ಇಂದು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಆಗಮಿಸಲಿದ್ದು, ಈ ವೇಳೆ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ತಮಿಳುನಾಡಿನ ಎಂಜಿಆರ್ ಹಾಗೂ ಜಯಲಲಿತಾ ಭೇಟಿ ಬಳಿಕ ಇದೀಗ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಲಿದ್ದಾರೆ. ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದರ್ಶನ ಪಡೆಯುವ ಸಾಧ್ಯತೆ ಇದೆ. ತಮಿಳುನಾಡು …
Read More »ಬೃಹತ್ ಕಳ್ಳಭಟ್ಟಿ ಜಾಲ ಭೇಧಿಸಿದ ಪೊಲೀಸರು
ಬೆಳಗಾವಿ: ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲಾ ಪೊಲೀಸರು ಅಪಾರ ಪ್ರಮಾಣದ ಕಳ್ಳಭಟ್ಟಿ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊರಬ ಗ್ರಾಮದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಕಳ್ಳಭಟ್ಟಿ ಮತ್ತು ಕಚ್ಚಾ ವಸ್ತುಗಳು ಸಹ ಜಪ್ತಿ ಮಾಡಲಾಗಿದೆ. ಕುಡಚಿ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿ ವೇಳೆ ಆರೋಪಿಯ …
Read More »ಬೆಳಗಾವಿಯಲ್ಲಿ ರೈತನ ಮೇಲೆ ಏಕಾಏಕಿ ದಾಳಿ ನಡೆಸಿದ ಕರಡಿ
ಬೆಳಗಾವಿ: ಯುವ ರೈತ ಓರ್ವ ಅರಣ್ಯ ಪ್ರದೇಶದ ಬಳಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ಹುಳಂದ ಗ್ರಾಮದ ನಿವಾಸಿ ಮಹೇಶ್ ಗಾವಡೆ (25) ಎಂಬುವವರೇ ಕರಡಿ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ದುರ್ದೈವಿ ರೈತರಾಗಿದ್ದಾರೆ. ಮಹೇಶ್ ಎಂದಿನಂತೆ ತಮ್ಮ ಹಸುವನ್ನು ಮೇಯಿಸಲು ಗ್ರಾಮದ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ದಿನವಿಡೀ ಮೇಯಿಸಿ, ಸಂಜೆ ವೇಳೆಗೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಪೊದೆಯೊಳಗಿಂದ ಏಕಾಏಕಿ ಬಂದ …
Read More »ತಂಬಾಕು ಮುಕ್ತ ಜಾಗೃತಿ ರ‍್ಯಾಲಿ
ತಂಬಾಕು ಸೇವನೆಯು ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶದ ಕಾಯಿಲೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕಾಗಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ಅವರು ಹೇಳಿದರು. ಅವರು ಚಿಕ್ಕೋಡಿಯಲ್ಲಿ ಕೆ.ಎಲ್.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ಎಲ್.ಇ. ನರ್ಸಿಂಗ್ ಮಹಾವಿದ್ಯಾಲಯ, ಉಪವಿಭಾಗಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ …
Read More »
Laxmi News 24×7