Breaking News

Daily Archives: ಜೂನ್ 15, 2026

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಸಿಕ್ಕಿಂ ಮೂಲದ 22 ವರ್ಷದ ಐಪಿ ಹಂಗ್ಮಾ ಮೃತ ಯುವತಿ. ಪ್ರಿಯಕರ ಫುರ್ಬಾ ಲೇಪ್ಸಾ ಕೊಲೆಗೈದ ಆರೋಪಿ. ಇಬ್ಬರೂ ಮೂಲತಃ ಸಿಕ್ಕಿಂ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರೀತಿಯ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಫುರ್ಬಾ ಲೇಪ್ಸಾ, ಯುವತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. …

Read More »

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಗ್ಯಾರಂಟಿ ಇದೆ, ಗ್ಯಾರಂಟಿ ಇರುತ್ತದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಯ ಪರಿಷ್ಕರಣೆಗೆ ಕೈ ಹಾಕಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪೋಸ್ಟ್‌ ಪ್ರಕಟಿಸಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್  ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಈ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಸುಳ್ಳು ಪ್ರಚಾರ …

Read More »

ಯಾವ ಆಣೆ ಪ್ರಮಾಣ, ಎಲ್ಲಿಗೆ ಕರೆದುಕೊಂಡು ಹೋಗ್ತಾರೆ – ಬಾಲಕೃಷ್ಣ ವಿರುದ್ಧ ಹರಿಹಾಯ್ದ ಹೆಚ್‌ಡಿಕೆ

ಮಂಡ್ಯ: ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲೆಸೆದ ಶಾಸಕ ಬಾಲಕೃಷ್ಣ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಯಾವ ಆಣೆ ಪ್ರಮಾಣ, ಎಲ್ಲಿಗೆ ಕರೆದುಕೊಂಡು ಹೋಗ್ತಾರೆ? ನನಗೆ ಇರುವ ದೇವರ ಭಕ್ತಿಯನ್ನು ಅವರಿಂದ ಕಲಿಯಬೇಕಿಲ್ಲ. ಅವರು ಪಾಪ ನಂಬಿಕೊಂಡಿದ್ದಾರೆ ನಂಬಲಿ. ನಾನು ರೈತರ ಪರ ಇದ್ದಿದ್ದಕ್ಕಾಗಿಯೇ ಸುಮ್ಮನೆ ಆದೆ. ಇಲ್ಲದಿದ್ದರೆ 2ನೇ ಬಾರಿ …

Read More »

ಬೇಕಾಬಿಟ್ಟಿ ಗ್ಯಾರಂಟಿ ಕೊಡೋದ್ರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ ಸೀತಾರಾಮನ್‌

ಚಿಕ್ಕಬಳ್ಳಾಪುರ: ಬೇಕಾಬಿಟ್ಟಿ ಗ್ಯಾರಂಟಿಗಳನ್ನ  ಕೊಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ದೇವನಹಳ್ಳಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನ ಕೊಡುತ್ತಿವೆ. ನಿಮ್ಮಿಂದ ಕೊಡಲು ಆಗದಿದ್ದರೆ ಸದನದಲ್ಲಿ ಚರ್ಚೆ ಮಾಡಿ, ಬಜೆಟ್‌ನಲ್ಲಿ ನಿಧಿ ಸಂಗ್ರಹದ ಬಗ್ಗೆ ಪ್ಲಾನ್ ಮಾಡಿ. ಅದನ್ನು ಬಿಟ್ಟು ಬೇಕಾಬಿಟ್ಟಿ ಗ್ಯಾರಂಟಿ ಕೊಡೋದ್ರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು …

Read More »

ಬೆಂಗಳೂರಲ್ಲಿ ಪ್ರಿಯತಮೆಯ ಕತ್ತು ಹಿಸುಕಿ ಕೊಲೆ – ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಬೆಂಗಳೂರು: ಭಗ್ನಪ್ರೇಮಿಯೊಬ್ಬ ಯುವತಿಯ ಕತ್ತುಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯ ತುಳಸಿನಗರದಲ್ಲಿ ನಡೆದಿದೆ. ಭವಾನಿ (22) ಭಗ್ನಪ್ರೇಮಿಯಿಂದ ಕೊಲೆಯಾದ ಯುವತಿ. ಚಂದ್ರಶೇಖರ್ ಕೊಲೆ ಆರೋಪಿ. ಮೊಬೈಲ್‌ ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ, ಕೆಲಸದ ಸ್ಥಳದಲ್ಲೇ ಚಂದ್ರಶೇಖರ್‌ನ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಚಾರ ತಿಳಿದ ಭವಾನಿಗೆ ಮನೆಯಲ್ಲಿ ಬೇರೆ ಹುಡುಗನೊಂದಿಗೆ ಮದ್ವೆ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದ ಚಂದ್ರಶೇಖರ್‌, ಭವಾನಿ …

Read More »

ಬೆಂಗಳೂರಿನ ಮೂವರು ಯುವಕರು ಹೇಮಾವತಿ ನದಿಯಲ್ಲಿ ಮುಳುಗಿ ಸಾವು

ಹಾಸನ: ಗೊರೂರಿನ ಬಳಿ ಈಜಲು ಹೇಮಾವತಿ ನದಿಗೆ ಇಳಿದಿದ್ದ ಬೆಂಗಳೂರು  ಮೂಲದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಚರಣ್ (20), ಮಿಲನ್ (23), ಮಣಿಕಂಠ (20) ಮೃತ ಯುವಕರು. ಆರು ಯುವಕರು ಹಾಗೂ ನಾಲ್ವರು ಯುವತಿಯರು ಒಟ್ಟಾಗಿ ಐದು ಸ್ಕೂಟಿಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಬರುವಾಗ ಗೂಗಲ್ ಮ್ಯಾಪ್‌ನಲ್ಲಿ ಪ್ರವಾಸಿ ತಾಣ ಹುಡುಕಿ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದರು. ಚರ್ಚ್ ಬಳಿ ಹೇಮಾವತಿ ನದಿಯ …

Read More »

ಸಂಪ್‌ಗೆ ಬಿದ್ದು ಮಗು ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಕೋಲಾರ: ಮನೆ ಬಳಿಯ ಸಂಪ್‌ಗೆ  ಬಿದ್ದು ಮಗು ಸಾವನ್ನಪ್ಪಿದ ಘಟನೆ ಕೋಲಾರದ ಕಾರಂಜಿಕಟ್ಟೆ ಬಡಾವಣೆಯ 10ನೇ ಕ್ರಾಸ್‌ನಲ್ಲಿ ನಡೆದಿದೆ. ನಗರದ ವಿಕಾಸ್ ಹಾಗೂ ಹಂಸ ದಂಪತಿ ಪುತ್ರ ಯಶಸ್ (3) ಮೃತಪಟ್ಟ ಮಗು. ಮಗು ಅಂಗಳದಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಸಂಪ್‌ಗೆ ಬಿದ್ದಿದೆ. ಈ ವೇಳೆ ತಕ್ಷಣ ನೀರಿನಿಂದ ಮಗುವನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗಲ್ ಪೇಟೆ …

Read More »

ತೆರೆದ ಬಾವಿಗೆ ಬಿದ್ದ ಪಿಕ್ ಅಪ್ ವಾಹನ – ಮಹಿಳೆಯರು, ಮಕ್ಕಳು ಸೇರಿ 8 ಮಂದಿ ದುರ್ಮರಣ

ಮುಂಬೈ: ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ  ಪರಿಣಾಮ ನಾಲ್ವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿ ಎಂಟು ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ  ಸೋಲಾಪುರ  ಜಿಲ್ಲೆಯ ಮಲ್ಶಿರಾಸ್ ತಹಸಿಲ್‌ನಲ್ಲಿ ನಡೆದಿದೆ. ಈ ಅಪಘಾತದಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಢರಪುರ ಮೂಲದ 15 ಜನರು ಮಾಸ್ವಾಡ್‌ನ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಈ ವೇಳೆ ತಂಡುಲ್ವಾಡಿ ಗ್ರಾಮದ ಬಳಿ ಈ ಅಪಘಾತ …

Read More »

ಟ್ರಯಲ್ ರೂಮ್ ನಲ್ಲಿ ಬಟ್ಟೆ ಚೇಂಜ್ ಮಾಡುವ ಮಹಿಳೆಯರೇ ಎಚ್ಚರ, ರಹಸ್ಯ ವಿಡಿಯೋ ಮಾಡ್ತಾರೆ

ಜುಂಜುನು (ರಾಜಸ್ಥಾನ) – ಇಲ್ಲಿನ ಬಟ್ಟೆ ಅಂಗಡಿಯಲ್ಲಿ ‘ಸೇಲ್ಸ್‌ಮನ್’ ಆಗಿ ಕೆಲಸ ಮಾಡುತ್ತಿದ್ದ ಶಾರುಖ್ ಮನಿಯಾರ್ ಎಂಬಾತ ಅಂಗಡಿಯ ‘ಟ್ರಯಲ್ ರೂಮ್’ನಲ್ಲಿ ಮಹಿಳೆಯರ ರಹಸ್ಯ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆರೋಪಿ ಶಾರುಖ್‌ನನ್ನು ಬಂಧಿಸಿದ್ದಾರೆ. ಜೂನ್ 6 ರಂದು ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಈ ಅಂಗಡಿಗೆ ಹೋಗಿದ್ದರು. ಆಯ್ಕೆ ಮಾಡಿದ ಬಟ್ಟೆಗಳನ್ನು ಧರಿಸಿ ನೋಡಲು ಅವರು ‘ಟ್ರಯಲ್ ರೂಮ್’ಗೆ ಹೋದರು; ಆದರೆ ಶಾರುಖ್ ಮನಿಯಾರ್ ಕೊಠಡಿಯ ಮೇಲ್ಛಾವಣಿಯ …

Read More »