Breaking News

Daily Archives: ಜೂನ್ 30, 2026

ಕೇವಲ 500 ರೂಪಾಯಿಗಾಗಿ ಆಟೋ ಚಾಲಕನ ಹತ್ಯೆ – ಆರೋಪಿ ಅರೆಸ್ಟ್‌

ಹುಬ್ಬಳ್ಳಿ: 500 ರೂ. ಸಾಲದ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆಟೋ ಚಾಲಕನಾಗಿದ್ದ ಈರಣ್ಣ ಹುರಕಡ್ಲಿ (45) ಮೇಲೆ ಜೂ.25 ರಂದು ಶಶಿಧರ್ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಈರಣ್ಣ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂ.28ರ ರಾತ್ರಿ ಅವರು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಈರಣ್ಣ, ಶಶಿಧರ್ ಬಳಿ 500 ರೂ. ಸಾಲ …

Read More »

ಪತಿಯನ್ನು ಕೊಂದು ಹಾರ್ಟ್‌ ಅಟ್ಯಾಕ್‌ ಕಥೆ ಕಟ್ಟಿದ ಶಿಕ್ಷಕಿ ಅಂದರ್‌

ಮೈಸೂರು: ಪತಿಯನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿ, ಹೃದಯಾಘಾತ ಎಂದು ಬಿಂಬಿಸಲು ಪತ್ನಿ ಯತ್ನಿಸಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ. ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹುಡ್ಕೊ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 50 ವರ್ಷದ ನಿತ್ಯಾನಂದ ಮೃತಪಟ್ಟ ವ್ಯಕ್ತಿ. ಅವರು ಮಹೀಂದ್ರಾ ಶೋ ರೂಂನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸುಶೀಲ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ದಂಪತಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಪ್ರಾಥಮಿಕ …

Read More »

ವಿದ್ಯುತ್ ಸರಬರಾಜು ಖಾಸಗೀಕರಣ ಪ್ರಶ್ನೆಯೇ ಇಲ್ಲ: ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು: ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಬಲಿಷ್ಠವಾಗಿದ್ದು, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಬೆಂಗಳೂರಿನ  ಅರಮನೆ ಮೈದಾನದಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟಾಟಾ ಪವರ್ ಕಂಪನಿಯು ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು (ವಿತರಣೆ) ಮಾಡಲು …

Read More »

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

ಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಹೈಕೋರ್ಟ್  ಏಕಸದಸ್ಯ ಪೀಠ ಆದೇಶ ನೀಡಿದೆ. 2024 ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದರು. ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ರು. ಪತಿಗೆ 60,646 ರೂ. ಸಂಬಳವಿದ್ದರೆ ಪತ್ನಿಗೆ 1 ಲಕ್ಷ ಮಾಸಿಕ ಸಂಬಳವಿತ್ತು. ವಿಚಾರಣಾ ನ್ಯಾಯಾಲಯ ಪತಿಗೆ 20,000 ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ …

Read More »

ಹೆಂಡತಿ ಜಗಳವಾಡಿ ತವರಿಗೆ ಹೋಗಿದ್ದಕ್ಕೆ ಮೊಬೈಲ್ ಟವರ್ ಏರಿ ಕುಳಿತ ಪತಿ

ಗದಗ: ಗಂಡ-ಹೆಂಡತಿ ಜಗಳ ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಗದಗ  ಜಿಲ್ಲೆಯಲ್ಲಿ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಜೀರ್ ಸಾಬ್ ಟವರ್ ಏರಿದ ವ್ಯಕ್ತಿ. ನಜೀರ್ ಸಾಬ್ ಮತ್ತು ಅವರ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಬಾರಿಯೂ ಜಗಳವಾದ ಬಳಿಕ …

Read More »

ಪಕ್ಕದ್ಮನೆ ಹುಡುಗಿ ಜೊತೆ ಪತಿ ಲವ್ವಿಡವ್ವಿ – ಪ್ರಶ್ನಿಸಿದ್ದಕ್ಕೆ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆ, ಪತ್ನಿ ಸಾವು

ಬೀದರ್: ಪಕ್ಕದ್ಮನೆ ಹುಡುಗಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ರಾಡ್‌ನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ  ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಕೊಲೆಯಾದ ದುರ್ದೈವಿ ಪತ್ನಿ. ಆರೋಪಿ ಪತಿ ಭಗವತ್ ಜ್ಞಾನೇಶ್ವರ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸಂಜನಾ ಹಾಗೂ ಭಗವತ್ 2 ವರ್ಷದ …

Read More »

ಪತಿಯ ಗೆಳೆಯನೊಂದಿಗೆ ಓಡಿಹೋದ ಪತ್ನಿ – ಮಹಿಳೆಯ ಕುಟುಂಬಸ್ಥರಿಂದ ಯುವಕನ ಮನೆ ಧ್ವಂಸ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಹೇಯ ಕೃತ್ಯ ಬೆಳಕಿಗೆ ಬಂದಿದೆ. ವಿವಾಹಿತಯೊಬ್ಬಳ ಜೊತೆ ಯುವಕನೊಬ್ಬ ಓಡಿಹೋದ ಹಿನ್ನೆಲೆ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಯುವಕನ ಮನೆ ಧ್ವಂಸಗೊಳಿಸಿದ ಘಟನೆ ಬೆಳಗಾವಿ  ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ವರ್ಷ ಬಸಪ್ಪ ನಾಯಕ ಜೊತೆ ನಾಗವ್ವ ವಿವಾಹವಾಗಿದ್ದರು. ಬಸಪ್ಪ ಮತ್ತು ಯಲ್ಲಪ್ಪ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಮೂವರು ಬೆಳಗಾವಿಯ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಯಲ್ಲಪ್ಪ ಹಾಗೂ …

Read More »

ಗೋಕಾಕ್ ತಾಪಂನಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಗೋಕಾಕ್ ತಾಲೂಕು ಪಂಚಾಯತ್‌ನಲ್ಲಿ ಇಂದು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ರಮೇಶ್ ಜಾರಕಿಹೊಳಿ ಅವರು ವಹಿಸಿ, ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವೆಗಳ ಪ್ರಗತಿಯನ್ನು ಪರಿಶೀಲಿಸಿದರು. ಸಭೆಯಲ್ಲಿ ಅಧಿಕಾರಿಗಳಿಗೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಶಾಸಕ ರಮೇಶ್ ಜಾರಕಿಹೊಳಿ …

Read More »

ಪಾಗಲ್‌ ಪ್ರೇಮಿ ನಾಗೇಂದ್ರನಿಗೆ ನಾಡಬಾಂಬ್‌ ತಯಾರಿಸಿಕೊಟ್ಟ ಶಂಕೆ – ಮೂವರು ವಶಕ್ಕೆ

ಕಾರವಾರ: ತುಮಕೂರಿನಲ್ಲಿ ನಾಡಬಾಂಬ್‌ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್‌ ಪ್ರೇಮಿ ನಾಗೇಂದ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಜನರನ್ನು ಅಂಕೋಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹೊನ್ನಾವರದ  ಚಂದಾವರ ಮೂಲದ ಓರ್ವ ಹಾಗೂ ಸರಳೆಬೈಲಿನ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ನಾಗೇಂದ್ರನಿಗೆ ನಾಡಬಾಂಬ್ ತಯಾರಿಸಿ ಕೊಟ್ಟಿರುವ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ. ಸ್ನೇಹಿತರು ಹಾಗೂ ಸಂಬಂಧಿಗಳ ವಿಚಾರಣೆ ವೇಳೆ ಮೂವರಿಂದ ನಾಡಬಾಂಬ್‌ ಖರೀದಿಸಿರುವುದು ದೃಢಪಟ್ಟಿದೆ. ಬಾಂಬ್ ಖರೀದಿ ವೇಳೆ …

Read More »

ಕ್ಯಾಬ್ ಡ್ರೈವರ್ ಲವ್ ಜಿಹಾದ್ ಉರುಳಿಗೆ ಬಲಿಯಾದಳಾ ಫಿಜಿಯೋಥೆರಪಿ ವೈದ್ಯೆ?! ಸುಂದರಿ ಸುರಭಿ ದುರಂತ ಅಂತ್ಯ!

ಅಂದ-ಚಂದಕ್ಕೆ ಕೊರತೆಯಿರದ, ಹೆತ್ತವರ ಪಾಲಿನ ಆಶಾಕಿರಣವಾಗಿದ್ದ ಈಕೆ ವೃತ್ತಿಯಿಂದ ಫಿಜಿಯೋಥೆರಪಿ ವೈದ್ಯೆ. ಇಂಚಿಂಚೂ ಬದುಕನ್ನು ಪ್ರೀತಿಸಬೇಕಿದ್ದ ಯುವತಿ, ಇಂದು ಹೋಂ ಸ್ಟೇ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ! ಹೌದು, ಚಿಕ್ಕಬಳ್ಳಾಪುರ ಮೂಲದ ವೈದ್ಯೆ ಸುರಭಿ ಸಾವು ಸದ್ಯ ಹತ್ತಾರು ಅನುಮಾನಗಳಿಗೆ ಕಾರಣವಾಗಿದ್ದು, ಆಕೆಯ ಪ್ರಿಯಕರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. 🔹 ಟ್ರೇನಿಂಗ್ ವೇಳೆ ಶುರುವಾದ ಲವ್ ಸ್ಟೋರಿ! ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಸುಲ್ತಾನ ಪೇಟೆಯ ನಿವಾಸಿಯಾಗಿದ್ದ ಸುರಭಿ, ಮುದ್ದೇನಹಳ್ಳಿ …

Read More »