Breaking News

ವಿಧಾನಸೌಧದ ಮುಂದೆ ಡಿಕೆಶಿ ಬೆಂಬಲಿಗರಿಂದ ‘ಡಿಕೆ..ಡಿಕೆ’ ಜಯಘೋಷ

Spread the love

ಬೆಂಗಳೂರು: ಸಿಎಲ್‌ಪಿ ಸಭೆ ಬಳಿಕ ಸಿದ್ದರಾಮಯ್ಯ  ಹಾಗೂ ಡಿಕೆ ಶಿವಕುಮಾರ್  ಹೊರಬಂದ ವೇಳೆ ವಿಧಾನಸೌಧದ ಬಳಿ ಡಿಕೆ ಬೆಂಬಲಿಗರು ‘ಡಿಕೆ…ಡಿಕೆ’ ಜಯಘೋಷ ಕೂಗುವ ಮೂಲಕ ಅಬ್ಬರಿಸಿದ್ದಾರೆ.

ಸಿಎಲ್‌ಪಿ ಸಭೆ  ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದೇ ಕಾರಿನಲ್ಲಿ ಲೋಕಭವನಕ್ಕೆ ತೆರಳಿದ್ದಾರೆ. ಲೋಕಭವನಕ್ಕೆ ತೆರಳುವಾಗ ವಿಧಾನಸೌಧದ ಉತ್ತರ ಗೇಟ್‌ನಲ್ಲಿ ಡಿಕೆ ಬೆಂಬಲಿಗರು ಭರ್ಜರಿ ಜಯಘೋಷ ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಡಿಕೆ ಎಂದು ಜೈಕಾರ ಹಾಕಿದ್ದಾರೆ.

ಸಿದ್ದರಾಮಯ್ಯರ ಮುಂದೆಯೇ ಡಿಕೆ ಬೆಂಗಲಿಗರು ಜೈಕಾರ ಕೂಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಮೌನವಾಗಿ ಕುಳಿತಿದ್ದರು. ಸದ್ಯ ಲೋಕಸಭೆಗೆ ತೆರಳಿರುವ ಡಿಕೆ ಶಿವಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಆರಂಭಿಕ ಮಾತುಗಳನ್ನಾಡಿದರು. ಈ ವೇಳೆ ನಿರ್ಣಯ ಮಂಡಿಸಿದರು. ಸಿಎಲ್‌ಪಿ ನಾಯಕನಾಗಿ ಡಿಕೆಶಿ ಹೆಸರನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಅದಕ್ಕೆ ಜಿ.ಪರಮೇಶ್ವರ್ ಅವರು ಅನುಮೋದಿಸಿದರು. ಕೊನೆಗೆ ಡಿಕೆಶಿ ಆಯ್ಕೆಗೆ ಶಾಸಕರು ಕೂಡ ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು.

ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ರಾಷ್ಟ್ರ ರಾಜಕಾರಣಕ್ಕೆ ಬನ್ನಿ: ಕೆ.ಸಿ.ವೇಣುಗೋಪಾಲ್ ಮತ್ತೆ ಆಹ್ವಾನ

Spread the loveಬೆಂಗಳೂರು: ಸಿದ್ದರಾಮಯ್ಯನವರೇ ನೀವು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್  ಮತ್ತೆ ಆಹ್ವಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ