Breaking News

Daily Archives: ಮೇ 13, 2026

ಟೀಕೆ ಬೆನ್ನಲ್ಲೇ ಜ್ಯೋತಿಷಿಗೆ ನೀಡಿದ್ದ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಹುದ್ದೆ ಹಿಂಪಡೆದ ವಿಜಯ್

ಚೆನ್ನೈ: ಟೀಕೆ ಬೆನ್ನಲ್ಲೇ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್  ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಆಗಿ ನೇಮಕ ಮಾಡಿಕೊಂಡ ಆದೇಶವನ್ನು ಸಿಎಂ ವಿಜಯ್ ಹಿಂಪಡೆದುಕೊಂಡಿದ್ದಾರೆ. ನಿನ್ನೆಯಷ್ಟೇ (ಮೇ 12) ವಿಜಯ್ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ನೇಮಕ ಮಾಡಿದ್ದರು. ಅದಾದ ಬಳಿಕ ಮಿತ್ರ ಪಕ್ಷಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ಆದೇಶವನ್ನು ರದ್ದುಗೊಳಿಸಿದ್ದಾರೆ. ವಿಶ್ವಾಸ ಮತ ಯಾಚನೆ ನಂತರ …

Read More »

ಎ ಖಾತೆಗೆ ಭರ್ಜರಿ ಡಿಸ್ಕೌಂಟ್ ಆಫರ್ – ಗೈಡೆನ್ಸ್ ವ್ಯಾಲ್ಯೂ ಭಾರೀ ಇಳಿಕೆ

ಬೆಂಗಳೂರು: ಸಿಲಿಕಾನ್‌ ಸಿಟಿಯ  ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ‘ನಮ್ಮ ಖಾತೆ ನಮ್ಮ ಹಕ್ಕು’ ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಸದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ, ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್‌, ಬೆಂಗಳೂರು  ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ನಾಗರಿಕ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಒಟ್ಟು 23 ಲಕ್ಷ …

Read More »

ಸಿಎಂ ಆದ ಬೆನ್ನಲ್ಲೇ ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌

ಸಿಎಂ ಆದ ಬೆನ್ನಲ್ಲೇ ವಿಜಯ್ ನಟಿ ತ್ರಿಶಾ ನಟನೆಯ `ಕರುಪ್ಪ್’  ಸಿನಿಮಾದ ಮಾರ್ನಿಂಗ್ ಶೋಗೆ ಸ್ಪೆಷಲ್ ಪರ್ಮಿಷನ್ ಕೊಟ್ಟಿದ್ದಾರೆ. ಮೇ 14ರಂದು ತ್ರಿಶಾ ಮತ್ತು ಸೂರ್ಯ ಅಭಿನಯದ `ಕರುಪ್ಪ್’ ಸಿನಿಮಾ ತೆರೆಕಾಣಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ. ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ …

Read More »

ಲಿಂಗಾಯತ ಸಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ

ರಾಮನಗರ: ಹೃದಯಾಘಾತದಿಂದ ನಿಧನರಾದ ನಟ, ನಿರ್ಮಾಪಕ ದಿಲೀಪ್ ರಾಜ್  ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ರಾಮನಗರ ತಾಲೂಕಿನ ಗುನ್ನೂರು  ಬಳಿಯ ಫಾರ್ಮ್‌ ಹೌಸ್‌ನಲ್ಲಿ ನೆರವೇರಿತು. ಸಮಯ ಸಿಕ್ಕಾಗಲೆಲ್ಲಾ ಇಲ್ಲಿನ ತೋಟದ ಮನೆಗೆ ದಿಲೀಪ್ ರಾಜ್‍ ಬರುತ್ತಿದ್ದರು. ಹಳೇ ಶೈಲಿಯಲ್ಲಿ ತೊಟ್ಟಿ ಮನೆ ನಿರ್ಮಾಣ ಮಾಡಿಕೊಂಡಿದ್ದರು. ಗ್ರಾಮಸ್ಥರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ಇಲ್ಲೇ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆಗೂ ಮುನ್ನ ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ, ದಿಲೀಪ್ …

Read More »

ನೀಟ್ ಮರು ಪರೀಕ್ಷೆ ತಕ್ಷಣವೇ ಆಗಲಿ – ಅಶ್ವಥ್ ನಾರಾಯಣ

ಬೆಂಗಳೂರು: ನೀಟ್ ಮರು ಪರೀಕ್ಷೆ  ತಕ್ಷಣವೇ ಆಗಲಿ ಅಂತ ಬಿಜೆಪಿ ನಾಯಕ,ಮಾಜಿ ಡಿಸಿಎಂ ಅಶ್ವಥ್ ನಾರಾಯಣ  ಒತ್ತಾಯ ಮಾಡಿದ್ದಾರೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮರು ಪರೀಕ್ಷೆ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಪರೀಕ್ಷೆ ವಿಚಾರದಲ್ಲಿ ಪೇಪರ್ ಲೀಕ್ ಆಗಿದೆ ಅಂತ ಕೆಲ ಪ್ರದೇಶದಲ್ಲಿ ವರದಿಯಾಗಿದೆ. ಮರು ಪರೀಕ್ಷೆ ಮಾಡೋದಾಗಿ NTA ಹೇಳಿದೆ. ರೀ ಷಡ್ಯೂಲ್ ಮಾಡಿ ಸಮಯ ವ್ಯರ್ಥವಾಗದಂತೆ ಮಾಡಿ ಎಂದರು. ಪ್ರಶ್ನೆ ಪತ್ರಿಕೆ ಸೋರಿಕೆ …

Read More »

KPSC ಹಾಳಾಗೋಕೆ ಕಾಂಗ್ರೆಸ್ ಕಾರಣ, ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ: ಹೆಚ್‌ಡಿಕೆ ಕಿಡಿ

ಬೆಂಗಳೂರು: ಕೆಪಿಎಸ್‌ಸಿ  ಹಾಳಾಗೋಕೆ ಕಾಂಗ್ರೆಸ್ ಕಾರಣ, ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಕಿಡಿಕಾರಿದ್ದಾರೆ. ನೀಟ್ ಮರು ಪರೀಕ್ಷೆ ವಿಚಾರವಾಗಿ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದೆ ಹಾಕಿದ್ದೀರಾ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ನಮ್ಮ ರಾಜ್ಯದಲ್ಲಿ ಕೆಪಿಎಸ್‌ಸಿ ಸಂಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಕೆಪಿಎಸ್‌ಸಿ ಬಗ್ಗೆ ಜನ ಯಾವ …

Read More »

ಮಂತ್ರಾಲಯ ರಾಯರ ಮಠದಲ್ಲಿ ಹುಂಡಿ ಎಣಿಕೆ – 20 ದಿನದಲ್ಲಿ 2.78 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಏಪ್ರಿಲ್ ಹಾಗೂ ಮೇ ತಿಂಗಳಿನ 20 ದಿನಗಳ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 2.78 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಏಪ್ರಿಲ್ ಹಾಗೂ ಮೇ ತಿಂಗಳಿನ 20 ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಒಟ್ಟು 2,78,19,526 ರೂ. ಕಾಣಿಕೆ ಹರಿದು ಬಂದಿದ್ದು, ಇದರಲ್ಲಿ 2,69,28,176 ರೂ. ಕರೆನ್ಸಿ ನೋಟುಗಳು. 8,91,350 ರೂ. …

Read More »

ವ್ಯೂ ಪಾಯಿಂಟ್‌ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳ ಸಾವು

ತಿರುವನಂತಪುರಂ: ವ್ಯೂ ಪಾಯಿಂಟ್ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ನಡೆದಿದೆ. ಇಂದು ಸಂಜೆ 5:30 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಲ್ಲಪುರಂ ನ ಮಂಕಡ ವೆಳ್ಳಿಲ ಕಡುಕಾ ಸಿಟಿ ನಂಬೂರಿಕಾಡ್ ವ್ಯೂ ಪಾಯಿಂಟ್‌ಗೆ ಆಗಮಿಸಿದ್ದ ವೇಳೆ ಸಿಡಿಲು ಬಡಿದು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ರಹೀಸ್ (20), ಬಹಾಸ್ (18), ಸಿಯಾದ್ (18), ಫಹದ್(22) ಮೃತರು. ರೋಶನ್ (20), 2- ಇಶಾತ್ …

Read More »

NEET-UG case | 10 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಖರೀದಿಸಿ 15 ಲಕ್ಷಕ್ಕೆ ಮಾರಿದ್ದ ವೈದ್ಯನ ಮಗ ಅರೆಸ್ಟ್‌

ನವದೆಹಲಿ: ನೀಟ್‌ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ  ಮಂಗಳವಾರ ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಅಂಡ್ ಸರ್ಜರಿ  ವಿದ್ಯಾರ್ಥಿಯನ್ನ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನ ಶುಭಂ ಖೈರ್ನರ್ (30) ಎಂದು ಗುರುತಿಸಲಾಗಿದೆ. ಈತ ʻಊಹೆ ಪ್ರಶ್ನೆಪತ್ರಿಕೆʼ ಯನ್ನು  ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ, ಹರಿಯಾಣದ ಮೂಲದ ವ್ಯಕ್ತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. …

Read More »

ಮಾದಪ್ಪನ ಭಕ್ತರಿಗೆ ಶಿವರಾತ್ರಿ, ಯುಗಾದಿ ವೇಳೆಯಷ್ಟೇ ಕಾಲ್ನಡಿಗೆ ಬರಲು ಅವಕಾಶ: ಸಚಿವ ಖಂಡ್ರೆ

ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ  ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ಮುಂದೆ ಮಾದಪ್ಪನ ಬೆಟ್ಟಕ್ಕೆ ವರ್ಷವಿಡೀ ಪಾದಯಾತ್ರೆಗೆ ನಿಷೇಧ ಹೇರಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಯುಗಾದಿ ಮತ್ತು ಶಿವರಾತ್ರಿ ವೇಳೆ ಮಾತ್ರ ಪಾದಯಾತ್ರೆಗೆ ಅವಕಾಶ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆಸೂಚನೆ ಕೊಟ್ಟಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಹಿನ್ನೆಲೆ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಅವರು …

Read More »