Breaking News

ಸಿಎಂ ಆದ ಬೆನ್ನಲ್ಲೇ ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌

Spread the love

ಸಿಎಂ ಆದ ಬೆನ್ನಲ್ಲೇ ವಿಜಯ್ ನಟಿ ತ್ರಿಶಾ ನಟನೆಯ `ಕರುಪ್ಪ್’  ಸಿನಿಮಾದ ಮಾರ್ನಿಂಗ್ ಶೋಗೆ ಸ್ಪೆಷಲ್ ಪರ್ಮಿಷನ್ ಕೊಟ್ಟಿದ್ದಾರೆ. ಮೇ 14ರಂದು ತ್ರಿಶಾ ಮತ್ತು ಸೂರ್ಯ ಅಭಿನಯದ `ಕರುಪ್ಪ್’ ಸಿನಿಮಾ ತೆರೆಕಾಣಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ. ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ . ಜೊತೆಗೆ ಶೋ ಸಮಯದಲ್ಲಿ ಚಿತ್ರಮಂದಿರದ ಮಾಲೀಕರು ಜನದಟ್ಟಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಈ ಕುರಿತು ಕರುಪ್ಪ್ ಸಿನಿಮಾ ತಂಡ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕರುಪ್ಪ್ ಸಿನಿಮಾಗೆ ಬೆಳಿಗ್ಗೆ 9 ಗಂಟೆಯ ಶೋಗೆ ವಿಶೇಷ ಅನುಮತಿ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಆರ್‌ಜೆ ಬಾಲಾಜಿ ನಿರ್ದೇಶನದ `ಕರುಪ್ಪ್’ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಮೇ 14ರಂದು ತೆರೆಕಾಣಲಿದೆ.

ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಗಿಂತ ಮುಂಚೆ ಥಿಯೇಟರ್‌ಗಳಲ್ಲಿ ಸಿನಿಮಾ ಶೋಗೆ ಅವಕಾಶವಿಲ್ಲ. ಸಿನಿಮಾ ರಿಲೀಸ್ ಆದ ಮೊದಲ ದಿನ ಫಸ್ಟ್ ಶೋ ವೇಳೆ ಅಭಿಮಾನಿಗಳ ಅತಿರೇಕದ ವರ್ತನೆ, ಟ್ರಾಫಿಕ್ ಸಮಸ್ಯೆ, ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಬೆಳಿಗ್ಗೆ 11 ಅಥವಾ 12 ಗಂಟೆಗೆ ಮೊದಲ ಶೋ ಆರಂಭವಾಗುತ್ತದೆ. ಒಂದು ವೇಳೆ ಅದಕ್ಕೂ ಮುಂಚೆ ಶೋ ನಿಗದಿಪಡಿಸಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಇನ್ನೂ ವಾರದ ದಿನಗಳಲ್ಲಿ ದಿನಕ್ಕೆ 4 ಶೋಗಳು ಮತ್ತು ವಾರಾಂತ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಗರಿಷ್ಠ 5 ಪ್ರದರ್ಶನಗಳಿಗೆ ಮಾತ್ರ ಅವಕಾಶವಿದೆ.


Spread the love

About Laxminews 24x7

Check Also

ಬೆಳಗಾವಿಗೆ ಮೂರು ಹೋಸ ಎಕ್ಸ್‌ಪ್ರೆಸ್ ರೈಲುಗಳ ಆರಂಭ

Spread the loveದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್, ಸಿಕಂದರಾಬಾದ್ ಮತ್ತು ಚರ್ಲಪಲ್ಲಿಯನ್ನು ಬೆಳಗಾವಿಯೊಂದಿಗೆ ಸಂಪರ್ಕಿಸುವ ಮೂರು ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ