Breaking News

Daily Archives: ಮೇ 12, 2026

ಧಾರವಾಡದ ಎನ್.ಟಿ.ಟಿ.ಎಫ್ ಬಳಿ ಭೀಕರ ಅಪಘಾತ: ಡಿವೈಡರ್‌ಗೆ ಬುಲೆಟ್ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಧಾರವಾಡದ ಎನ್.ಟಿ.ಟಿ.ಎಫ್ (NTTF) ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ ನಗರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬುಲೆಟ್ …

Read More »

ಬೆಳಗಾವಿಯ ಹೇಮು ಕಲಾನಿ ಚೌಕನ ಶ್ರೀ ದತ್ತ-ಸಾಯಿ ಮಂದಿರಕ್ಕೆ ನೂತನ ಮೂರ್ತಿಗಳ ಆಗಮನ ನಗರದಲ್ಲಿ ಅದ್ಧೂರಿ ಶೋಭಾಯಾತ್ರೆ

ಬೆಳಗಾವಿಯ ಹೇಮು ಕಲಾನಿ ಚೌಕದ ಶ್ರೀ ದತ್ತ ಸಾಯಿ ಮಂದಿರದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಭವ್ಯ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಬೆಳಗಾವಿಯ ಹೇಮು ಕಲಾನಿ ಚೌಕದಲ್ಲಿರುವ ಶ್ರೀ ದತ್ತ ಶ್ರೀ ಸಾಯಿ ಮಂದಿರದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ನೂತನ ಮೂರ್ತಿಗಳ ಪ್ರತಿಷ್ಠಾಪನೆಗೆ ಅದ್ಧೂರಿ ಚಾಲನೆ ನೀಡಲಾಗಿದೆ. ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಿಂದ ಮಂದಿರದವರೆಗೆ ಭವ್ಯ ಶೋಭಾಯಾತ್ರೆ …

Read More »

ಕಪಿಲೇಶ್ವರ ಕೆರೆ ದುರಂತ: ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ; ಸ್ಥಳಕ್ಕೆ ಆಯುಕ್ತರು ಹಾಗೂ ಸದಸ್ಯರ ಭೇಟಿ ಖಾಸಗಿ ಜಾಗದ ಮಾಲೀಕರೊಂದಿಗೆ ಅಧಿಕಾರಿಗಳ ಸಮಾಲೋಚನೆ

ಬೆಳಗಾವಿಯ ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದ ಹಿಂಭಾಗದ ಕೆರೆಯ ಗೋಡೆ ಕುಸಿದು ಇಬ್ಬರು ಬಾಲಕರು ಬಲಿಯಾದ ಬೆನ್ನಲ್ಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತರ ತಂಡ ಪರಿಶೀಲನೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಮಾಲೀಕರೊಂದಿಗೆ ಚರ್ಚೆ ನಡೆಸಿದೆ. ಬೆಳಗಾವಿಯ ದಕ್ಷಿಣಕಾಶಿ ಶ್ರೀ ಕಪಿಲೇಶ್ವರ ಮಂದಿರದ ಹಿಂಭಾಗದ ಕೆರೆಯ ಗೋಡೆ ಕುಸಿದು ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಬೆಳಗಾವಿಯನ್ನು ಕಂಗೆಡಿಸಿತ್ತು. ಈ …

Read More »

ಶಿವಠಾಣದಲ್ಲಿ ‘ಶ್ರೀ ವಿಠ್ಠಲ-ರುಕ್ಮಿಣಿ’ ಮಂದಿರ ಲೋಕಾರ್ಪಣೆಗೊಳಿಸಿದ ‘ಶಾಸಕ ವಿಠ್ಠಲ್ ಮತ್ತು ರುಕ್ಮಿಣಿ ‘ ಹಲಗೇಕರ್

ಖಾನಾಪುರ ತಾಲೂಕಿನ ಶಿವಠಾಣದಲ್ಲಿ ಗ್ರಾಮಸ್ಥರ ಅಪಾರ ಶ್ರದ್ಧೆ ಹಾಗೂ ಶ್ರಮದ ಫಲವಾಗಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲ-ರುಕ್ಮಿಣಿ ದೇವಾಲಯವು ಇಂದು ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಶಾಸಕ ವಿಠ್ಠಲ ಹಲಗೇಕರ ಅವರು ಮಂದಿರದ ಲೋಕಾರ್ಪಣೆ ನೆರವೇರಿಸಿ, ಆಧ್ಯಾತ್ಮಿಕತೆಯೇ ನೆಮ್ಮದಿಯ ದಾರಿ ಎಂಬ ಸಂದೇಶ ಸಾರಿದರು. ಶಿವಠಾಣ ಗ್ರಾಮದ ಭಕ್ತಿಯ ಸಂಕೇತವಾಗಿ ತಲೆ ಎತ್ತಿರುವ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದ ಉದ್ಘಾಟನಾ ಸಮಾರಂಭವು ಸಡಗರದಿಂದ ನೆರವೇರಿತು. ಶಾಸಕ ವಿಠ್ಠಲ ಹಲಗೇಕರ ಹಾಗೂ ಅವರ ಧರ್ಮಪತ್ನಿ ರುಕ್ಮಿಣಿ …

Read More »

ಸಂಸಾರದಲ್ಲೇ ಸಾರ್ಥಕತೆ ಕಂಡವರು ಹೇಮರೆಡ್ಡಿ ಮಲ್ಲಮ್ಮ; ಶಶಿಕಲಾ ನ್ಯಾಮಗೌಡ

ಮಹಾಸಾಧ್ವಿ ಮಲ್ಲಮ್ಮನವರು ಸಂಸಾರಿಕ ಜೀವನದಲ್ಲೇ ಆಧ್ಯಾತ್ಮಿಕ ಸಾರ್ಥಕತೆ ಕಂಡವರು ಎಂದು ಅವರ ಜೀವನದ ಮಹತ್ವವನ್ನು ಉಪನ್ಯಾಸಕಿ ಶಶಿಕಲಾ ನ್ಯಾಮಗೌಡ ಅವರು ಸ್ಮರಿಸಿದರು. ಬೆಳಗಾವಿಯ ರೆಡ್ಡಿ ಸಮಾಜದ ವತಿಯಿಂದ ಸದಾಶಿವನಗರದಲ್ಲಿರುವ ರೆಡ್ಡಿ ಭವನದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ರೆಡ್ಡಿ ಸಮಾಜದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಗಣ್ಯರ ಹಸ್ತದಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ವೇಳೆ ಉಪನ್ಯಾಸ ನೀಡಿದ ಶಶಿಕಲಾ ನಾಡಗೌಡ ಅವರು ಪೂಜೆ, …

Read More »

ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಗದ್ಯ ಸಾಹಿತಿ ಸಿ.ಕೆ. ಜೋರಾಪುರ: ಡಾ. ಸಿದ್ಧರಾಮ ಮಹಾಸ್ವಾಮಿಗಳು

ಕವನಗಳನ್ನು ಬರೆಯುವುದು ಸುಲಭ, ಆದರೆ ಗದ್ಯ ಸಾಹಿತ್ಯದ ಮೂಲಕ ಜನಮನ ಗೆಲ್ಲುವುದು ಕಷ್ಟದ ಕೆಲಸ. ಅಂತಹ ಸಾಹಸಮಯ ಕೆಲಸವನ್ನು ಡಾ. ಸಿ.ಕೆ. ಜೋರಾಪುರ ಅವರು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದು ಗದುಗಿನ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು ಶ್ಲಾಘಿಸಿದರು. ಇಂದು ಬೆಳಗಾವಿ ಕನ್ನಡ ಭವನದಲ್ಲಿ ಡಾ. ಸಿ.ಕೆ. ಜೋರಾಪುರ ಅವರ ಅಮೃತ ಮಹೋತ್ಸವ ಸಮಾರಂಭ ಮತ್ತು ಅದಮ್ಯ ಚೇತನ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗು ಸನ್ಮಾನ ಸಮಾರಂಭವು …

Read More »

ಪೊಲೀಸರಿಗೆ ತಲೆನೋವಾಗಿದ್ದ ಮನೆಗಳ್ಳ ಕೊನೆಗೂ ಅರೆಸ್ಟ್

ಬೆಳಗಾವಿ ನಗರದ ಶಹಾಪೂರ ಭಾರತನಗರದಲ್ಲಿ ಮನೆ ಕೀಲಿ ಮುರಿದು ಒಳನುಗ್ಗಿ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಶಹಾಪೂರ ಪೊಲೀಸರು, 45.56 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ. ದೆಹಲಿಯ ತಿಲಕ ನಗರದ ನಿವಾಸಿ, ಮಿಂಟು ಅಲಿಯಾಸ್ ಚಿಂಟು ಕುಟಿ ವಿಶ್ವಾಸ (52) ಬಂಧಿತ. ಬಂಧಿತನಿಂದ‌ 294.190 ಗ್ರಾಂ ತೂಕದ ಅಂದಾಜು 44,86,390 ರೂ.ಮೌಲ್ಯದ ಗಟ್ಟಿ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ್ದ 70 ಸಾವಿರ ರೂ.ಮೌಲ್ಯದ ಹೊಂಡಾ ಆಕ್ಟಿವಾ …

Read More »