Breaking News

ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಗದ್ಯ ಸಾಹಿತಿ ಸಿ.ಕೆ. ಜೋರಾಪುರ: ಡಾ. ಸಿದ್ಧರಾಮ ಮಹಾಸ್ವಾಮಿಗಳು

Spread the love

ಕವನಗಳನ್ನು ಬರೆಯುವುದು ಸುಲಭ, ಆದರೆ ಗದ್ಯ ಸಾಹಿತ್ಯದ ಮೂಲಕ ಜನಮನ ಗೆಲ್ಲುವುದು ಕಷ್ಟದ ಕೆಲಸ. ಅಂತಹ ಸಾಹಸಮಯ ಕೆಲಸವನ್ನು ಡಾ. ಸಿ.ಕೆ. ಜೋರಾಪುರ ಅವರು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದು ಗದುಗಿನ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು ಶ್ಲಾಘಿಸಿದರು.

ಇಂದು ಬೆಳಗಾವಿ ಕನ್ನಡ ಭವನದಲ್ಲಿ ಡಾ. ಸಿ.ಕೆ. ಜೋರಾಪುರ ಅವರ ಅಮೃತ ಮಹೋತ್ಸವ ಸಮಾರಂಭ ಮತ್ತು ಅದಮ್ಯ ಚೇತನ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗು ಸನ್ಮಾನ ಸಮಾರಂಭವು ಡಾ. ಶಿವು ನಂದಗಾಂವಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದ ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು, ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮಿಜೀ, ಕಿತ್ತೂರು ಕಲ್ಮಠದ ಶ್ರೀ ಮಡಿವಾಳೇಶ್ವರ ಸ್ವಾಮಿಜೀ ಹಾಗೂ ಗದುಗಿನ ತೋಂಟದಾರ್ಯಮಠದ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು. ಸಾಹಿತಿ ಸಿ.ಕೆ. ಜೋರಾಪುರ ಅವರು ನಾಡು ನುಡಿಗೆ ಸೀಮಿತರಾಗದೇ, ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಅವರ ಗದ್ಯ ಕೃತಿ ಇಂದು ಜನಮನಸೂರೆಗೊಂಡಿದ್ದು, ಅವರೊಬ್ಬ ಶ್ರೇಷ್ಠ ಸಾಹಿತಿ. ಕವನಗಳನ್ನು ಬರೆಯುವುದು ಸುಲಭ. ಆದರೇ, ಗದ್ಯಗಳನ್ನು ಬರೆಯುವುದು ಕಷ್ಟದ ಕೆಲಸ. ಕನ್ನಡ ಸಾಹಿತ್ಯವನ್ನು ಸಿ.ಕೆ. ಜೋರಾಪುರ ಅವರು ಶ್ರೀಮಂತಗೊಳಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಬೈಟ್

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಾವೇರಿ ಗೊಟಗೊಂಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಟಿ.ಎನ್. ಭಾಸ್ಕರ್ ಅವರು ಸಾಹಿತಿ ಸಿ.ಕೆ. ಜೋರಾಪೂರ ಅವರು ದೇಶ, ನಾಡು, ಸಮಾಜಕ್ಕೆ ಸಂದೇಶ ನೀಡುವ ಹಲವಾರು ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ. ಇದರಾಚೆಗೆ ಒಂದು ಬದುಕು ಅಲ್ಲ. ಬದುಕಿನ ಒಳಗೊಂದು ಬದುಕಿದೆ ಎಂಬುವ ಅನುಭವವನ್ನು ನೀಡಲಾಗುತ್ತದೆ. ಸರ್ವಜನಾಂಗದ ಶಾಂತಿಯ ತೋಟದ ಸಂದೇಶಗಳನ್ನು ಅವರ ಕೃತಿಗಳಲ್ಲಿ ಕಾಣಬಹುದು. ಇದು ಅರಸು ಮುನಿಗಳ ಕಾಲವಲ್ಲದೇ, ಇದು ಅಭಿವ್ಯಕ್ತಿಗಳ ಕಾಲ. ಕಂಡಿದ್ದನ್ನು ಘಟಿಸಿದ್ದನ್ನು ಮನಸ್ಸಿಗೊಳಪಡಿಸಿ ಧನಾತ್ಮಕವಾಗಿರುವ ವಿಚಾರಗಳನ್ನು ಪ್ರಸ್ತುತ ಪಡಿಸುವ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದರು. ಬೈಟ್

ಅಧ್ಯಕ್ಷತೆಯನ್ನು ಡಾ.ಎಚ್. ಬಿ. ರಾಜಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋವಿಂದಪ್ಪ ಗೌಡಪ್ಪಗೋಳ, ರಾಘವೇಂದ್ರ ಕಾಗವಾಡ ಉಪಸ್ಥಿತರಿದ್ಧರು. ಸಂಪುಟವನ್ನನು ಶ್ರೀ ಡಾ. ಸಿದ್ಧರಾಮ ಸ್ವಾಮಿಜೀಗಳು ಬಿಡುಗಡೆಗೊಳಿಸಿದರೇ, ಪ್ರಭಾಕರ ಉಳ್ಳಾಗಡ್ಡಿ ಅವರು ಗ್ರಂಥದ ಕುರಿತು ಅಭಿನಂದನಾಪರ ನುಡಿಗಳನ್ನಾಡಿದರು. ಈ ವೇಳೆ ಎಲ್.ಎಸ್. ಶಾಸ್ತ್ರೀ, ಡಾ. ಎಚ್. ಐ. ತಿಮ್ಮಾಪೂರ, ನೀರೂಪಾದಯ್ಯ ಕಲ್ಲೋಳ್ಳಿಮಠ, ಆರ್.ಪಿ. ಪಾಟೀಲ್, ಸುಜಾತಾ ಪಾಟೀಲ್, ಜಯತೀರ್ಥ ಸವದತ್ತಿ ಇನ್ನುಳಿದವರು ಉಪಸ್ಥಿತರಿದ್ಧರು.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ