Breaking News

ಬೆಳಗಾವಿಯ ಹೇಮು ಕಲಾನಿ ಚೌಕನ ಶ್ರೀ ದತ್ತ-ಸಾಯಿ ಮಂದಿರಕ್ಕೆ ನೂತನ ಮೂರ್ತಿಗಳ ಆಗಮನ ನಗರದಲ್ಲಿ ಅದ್ಧೂರಿ ಶೋಭಾಯಾತ್ರೆ

Spread the love

ಬೆಳಗಾವಿಯ ಹೇಮು ಕಲಾನಿ ಚೌಕದ ಶ್ರೀ ದತ್ತ ಸಾಯಿ ಮಂದಿರದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಭವ್ಯ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.
ಬೆಳಗಾವಿಯ ಹೇಮು ಕಲಾನಿ ಚೌಕದಲ್ಲಿರುವ ಶ್ರೀ ದತ್ತ ಶ್ರೀ ಸಾಯಿ ಮಂದಿರದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ನೂತನ ಮೂರ್ತಿಗಳ ಪ್ರತಿಷ್ಠಾಪನೆಗೆ ಅದ್ಧೂರಿ ಚಾಲನೆ ನೀಡಲಾಗಿದೆ. ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಿಂದ ಮಂದಿರದವರೆಗೆ ಭವ್ಯ ಶೋಭಾಯಾತ್ರೆ ಜರುಗಿತು. ಕಾಂಗಲೆ ಗಲ್ಲಿ, ಬಾಂಧೂರ್ ಗಲ್ಲಿ, ತಾಶೀಲ್ದಾರ್ ಗಲ್ಲಿ ಸೇರಿದಂತೆ ವಿವಿಧ ಗಲ್ಲಿಗಳ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡೋಲ್-ತಾಶಾ ಪಥಕಗಳ ನಿನಾದ ಮತ್ತು ಮಹಿಳೆಯರ ಕುಂಭಮೇಳ ಶೋಭಾಯಾತ್ರೆಗೆ ವಿಶೇಷ ಕಳೆ ತಂದಿತು.
ಈ ಮಂದಿರದ ವಿಶೇಷತೆ ಎಂದರೆ ಇಲ್ಲಿನ ಮೂರ್ತಿಗಳನ್ನು ಜೈಪುರದ ಖ್ಯಾತ ಮೂರ್ತಿಕಾರ ಪಾಂಡೆ ಅವರು ಕೆತ್ತಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ಅಪ್ರತಿಮ ವಿದ್ವಾಂಸ ಶ್ರೀ ಜ್ಞಾನೇಶ್ವರ ಶಾಸ್ತ್ರೀ ಅವರೇ ಇಲ್ಲಿಯೂ ಮೂರ್ತಿಗಳ ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು ಭಕ್ತರ ಸೌಭಾಗ್ಯವಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಅಯೋಧ್ಯೆಯಷ್ಟೇ ಪವಿತ್ರವಾದ ವಾತಾವರಣ ನಿರ್ಮಾಣವಾಗಿದೆ. ಬೈಟ್
ಮುಂದಿನ ಮೂರು ದಿನಗಳ ಕಾಲ ಮಂದಿರದ ಆವರಣದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಹೋಮ-ಹವನಗಳು ಜರುಗಲಿವೆ. ಕೊನೆಯ ದಿನ ಸಂಜೆ 7 ಗಂಟೆಗೆ ಭಕ್ತಾದಿಗಳಿಗೆ ಭವ್ಯ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಂದಿರದ ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಬೈಟ್
ಹಿರಿಯರು, ಮಹಿಳೆಯರು ಮತ್ತು ಯುವಕರು ಉತ್ಸಾಹದಿಂದ ಭಾಗವಹಿಸಿದ್ದು, ಇಡೀ ಪರಿಸರ ಭಕ್ತಿ ಸಂಭ್ರಮದಲ್ಲಿ ಮುಳುಗಿದೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ