Breaking News

ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್: ಡಿಕೆಶಿ

Spread the love

ಬೆಂಗಳೂರು: ಮೇ 13ಕ್ಕೆ ಬೆಂಗಳೂರು  ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಅವರು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಈಗ ಅಧಿಕಾರಿಗಳನ್ನು ಕರೆದು ಸೂಚನೆ ಕೊಟ್ಟಿದ್ದೇನೆ. ಮೇ 13ರಂದು ಬೆಂಗಳೂರು ಜನರಿಗೆ ಒಂದು ದೊಡ್ಡ ಗ್ಯಾರಂಟಿ, ಬಿಗ್ ಗಿಫ್ಟ್ ಕೊಡಲಿದ್ದೇವೆ. ಅದನ್ನು ಮೇ 13ರಂದೇ ತಿಳಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ವಿಚಾರವಾಗಿ ಮಾತನಾಡಿ, ಮೋದಿ ಅವರು ಹೇಳ್ತಾರೆ. ಆದ್ರೆ ಚಿನ್ನದ ಬೆಲೆ ಯಾಕೆ ಜಾಸ್ತಿ ಆಯ್ತು ಅಂತ ಹೇಳ್ತಿಲ್ಲ. ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಅಂತ ಹೇಳ್ತಿದ್ದಾರೆ. ಆದ್ರೆ ಯಾಕಾಯ್ತು ಅಂತ ಹೇಳ್ತಿಲ್ಲ. ಜನರಿಗೆ ಯಾರಿಂದ ತೊಂದರೆ ಆಯ್ತು ಅಂತ ಮೋದಿ ಅವರೇ ವಿವರಣೆ ನೀಡಬೇಕು. ಮದುವೆ ಮಾಡೋರು, ಮುಂಜಿ ಮಾಡೋರು ಯಾರು ಚಿನ್ನ ತೆಗೆದುಕೊಳ್ಳಬೇಡಿ ಅಂತ ಹೇಳೋಕೆ ಆಗುತ್ತಾ? ನೀವು ಜನರಿಗೆ ಸಲಹೆ ಏನು ಬೇಕಿದ್ರು ಕೊಡ್ತೀರಾ. ಆದರೆ ಕೊರೋನಾ ಸಮಯದಲ್ಲಿ ದೀಪ ಹಚ್ಚಿ ಅಂದ್ರಿ, ದೀಪ ಹಚ್ಚಿದ್ವಿ, ಚಪ್ಪಾಳೆ ತಟ್ಟಿ ಅಂದ್ರಿ, ಚಪ್ಪಾಳೆ ತಟ್ಟಿದ್ವಿ. ಏನಾದ್ರೂ ನಿಂತುಕೊಳ್ತಾ, ಏನು ನಿಂತಿಲ್ಲ. ಪ್ರ್ಯಾಕ್ಟಿಕಲ್‌ ಆಗಿ ಇರಬೇಕು ಎಂದು ಹೇಳಿದ್ದಾರೆ.

ಅವರ ಬದುಕಿನಲ್ಲಿ ಕಷ್ಟನೋ, ಸುಖನೋ, ಸಾಲ, ಸೋಲನೋ ಮಾಡಿ ಅವರು ಜೀವನ ಮಾಡ್ತಾರೆ. ಓಡಾಟ ನಡೆಸೋರಿಗೆಲ್ಲ ಸರ್ಕಾರಿ ಬಸ್‌ನಲ್ಲಿ ಓಡಾಡಿ ಅಂದ್ರೆ ಆಗುತ್ತಾ? ಮೊದಲು ಆಫೀಸರ್‌ಗಳಿಗೆ ಹೇಳಲಿ. ಸೆಂಟ್ರಲ್ ಗೌರ್ನಮೆಂಟ್ ಆಫೀಸರ್‌ಗಳು ನೀವು ನಿಮ್ಮ ಗಾಡಿಗಳಲ್ಲಿ ಓಡಾಡಬೇಡಿ ಮೆಟ್ರೋ ಅಥವಾ ಸರ್ಕಾರಿ ಬಸ್‌ನಲ್ಲಿ ಹೋಗಿ ಅಂತ ಹೇಳಿ. ಮೊದಲು ಅಧಿಕಾರಿಗಳಿಗೆ, ಅವರ ಮಂತ್ರಿಗಳಿಗೆ ತಾಕೀತು ಮಾಡಲಿ. ಸೆಂಟ್ರಲ್ ಮಿನಿಸ್ಟರ್‌ಗಳಿಗೆ ತಾಕೀತು ಮಾಡಲಿ. ಅವರ ಸರ್ಕಾರದಲ್ಲಿರುವ ಎಲ್ಲ ಮಂತ್ರಿಗಳಿಗೆ ತಾಕೀತು ಮಾಡಲಿ. ನೀವು ಯಾರು ಇನ್ನು ಮುಂದೆ ಪೆಟ್ರೋಲ್ ಗಾಡಿಯಲ್ಲಿ ಹೋಗಬೇಡಿ. ಸರ್ಕಾರಿ ಬಸ್‌ನಲ್ಲಿ ಹೋಗಿ, ಮೆಟ್ರೋ ಮತ್ತು ಟ್ರೈನ್‌ನಲ್ಲಿ ಹೋಗಿ ಅಂತ ಅವರಿಗೆಲ್ಲ ಹೇಳಲಿ. ಮೊದಲು ನಾವು ನಡೆದುಕೊಳ್ಳಬೇಕು. ಆಮೇಲೆ ಸಾಮಾನ್ಯ ಜನರಿಗೆ ಹೇಳಬೇಕು. ನಾನು ಐಷಾರಾಮಿ ಕಾರು ಇಟ್ಟುಕೊಂಡು ನಾನು ಮಾತ್ರ ಐಷಾರಾಮಿ ಕಾರಲ್ಲಿ ಓಡಾಡೋದು, ಸಾಮಾನ್ಯ ಜನ ನಾರ್ಮಲ್ ಆಗಿ ಓಡಾಡೋದು ಇದೆಲ್ಲ ಆಗದೇ ಇರುವ ಕಥೆ ಎಂದು ವ್ಯಂಗ್ಯವಾಡಿದ್ದಾರೆ.

ತ್ಯಾಗಕ್ಕೂ ಸಿದ್ಧರಾಗಿರಬೇಕು ಅನ್ನೋ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮೊದಲು ನಮ್ಮಿಂದ ಶುರು ಮಾಡಿಸಲಿ. ಮಂತ್ರಿಗಳಿಂದ, ಸೆಂಟ್ರಲ್ ಗವರ್ನಮೆಂಟ್ ಅಧಿಕಾರಿಗಳಿಂದ, ಅವರ ಸರ್ಕಾರ ಇರುವ ಎಲ್ಲ ರಾಜ್ಯ ಸರ್ಕಾರದಿಂದ ಶುರು ಮಾಡಲಿ. ಅವರ ಶಾಸಕರು, ಕಾರ್ಯಕರ್ತರು, ಮುಖಂಡರಿಂದ ತ್ಯಾಗ ಶುರು ಮಾಡಲಿ. ಆ ಮೇಲೆ ಬೇರೆಯವರು ತ್ಯಾಗ ಮಾಡಲಿ ಎಂದಿದ್ದಾರೆ.


Spread the love

About Laxminews 24x7

Check Also

ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ

Spread the loveಕಲಬುರಗಿ/ಬೀದರ್: ಜೂನ್ 28ರಂದು ಬೀದರ್‌ನ ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ