Breaking News

Daily Archives: ಸೆಪ್ಟೆಂಬರ್ 15, 2021

ಬೆಳ ಗಾವಿಯಲ್ಲಿಮಂಗಳವಾರ ರಾತ್ರಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ

ಬೆಳಗಾವಿ – ವಡಗಾವಿಯಲ್ಲಿ ಮಂಗಳವಾರ ರಾತ್ರಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಲಕ್ಷ್ಮಿ ನಗರದಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದ 52 ವರ್ಷದ ಬಾಲಕೃಷ್ಣ ಶೆಟ್ಟಿ ಎನ್ನುವವರನ್ನು ರಾತ್ರಿ 10.30ರ ಹೊತ್ತಿಗೆ ಕೊಲೆ ಮಾಡಲಾಗಿದೆ. ಅಂಗಡಿ ಬಂದ್ ಮಾಡಿ ಮನೆಗೆ ಹೋಗುವ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

Read More »

ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..

ಬೆಂಗಳೂರು: ಈತ ವೃತ್ತಿಯಿಂದ ಆಟೋ ಚಾಲಕ, ಆದರೆ ಚಾಳಿಯಿಂದ ಪ್ರೀತಿಸುವ ಸೋಗಲ್ಲಿ ಯುವತಿಯರನ್ನು ಮೋಸ ಮಾಡಿ ಬ್ಲ್ಯಾಕ್​ಮೇಲ್​ ಮಾಡುವ ಕಿರಾತಕ. ಮೊದಲಿಗೆ ಪ್ರೀತಿಯ ನೆಪದಲ್ಲಿ ಯುವತಿಯರನ್ನು ಬಲೆಗೆ ಬೀಸಿಕೊಂಡು, ನಂತರ ಮಾಡಬಾರದ್ದನ್ನೆಲ್ಲ ಮಾಡಿ, ವಿಡಿಯೋ ಕೂಡ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿ ಹಣವನ್ನೂ ಕಿತ್ತುಕೊಳ್ಳುತ್ತಿದ್ದ. ಹೀಗೆ ಹುಡುಗಿಯರನ್ನು ವಂಚಿಸುತ್ತಿದ್ದ ರಾಕೇಶದ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಈತ ಪ್ರೀತಿ ಮಾಡುವುದಾಗಿ ಹೇಳಿ ಹುಡುಗಿಯರನ್ನು ಒಲಿಸಿಕೊಂಡು ಬಳಿಕ ಅವರನ್ನು ನಿರ್ಜನ …

Read More »

ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು

ಚಾಮರಾಜನಗರ: ಬಾಲಕಿಯನ್ನು ಮದುವೆಯಾಗುವುದಾಗಿ ಕರೆದೊಯ್ದು ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು 20 ವರ್ಷ ಜೈಲುಶಿಕ್ಷೆ ಹಾಗೂ 6.25 ಲಕ್ಷ ರೂ ದಂಡ ವಿಧಿಸಿದೆ. ಆರೋಪಿಯ ಕೃತ್ಯಕ್ಕೆ ಸಹಕರಿಸಿದ ಮಹಿಳೆಗೆ 5 ವರ್ಷ ಶಿಕ್ಷೆ 2 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ನಿವಾಸಿ ಚಂದ್ರಶೇಖರ (21) ಶಿಕ್ಷೆಗೆ ಒಳಗಾದವ. ಈತ 2018ರ ಜುಲೈ 11ರಂದು …

Read More »

ಫ್ಲೈಓವರ್​ ಮೇಲೆ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರು ಸ್ಥಳದಲ್ಲೇ ಸಾವು..

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರ ದೇಹಗಳು ಛಿದ್ರಗೊಂಡಿವೆ. ಫ್ಲೈ ಓವರ್ ಮೇಲೆ ಓವರ್ ಟೇಕ್​ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಕ್ಕೂ ಅಪ್ಪಳಿಸಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಕೂಡ ತೀರ ಜಖಂಗೊಂಡಿದ್ದು, ಸ್ಥಳಕ್ಕೆ ಪರಪ್ಪನ …

Read More »

ತಿಂಗಳಿಗೆ ಮೂರು ಲೀಟರ್‌ ಸೀಮೆಎಣ್ಣೆ ವಿತರಣೆ: ಕತ್ತಿ

ಬೆಂಗಳೂರು: ಸಮರ್ಪಕ ವಿದ್ಯುತ್‌ ಸಂಪರ್ಕ ಹೊಂದಿಲ್ಲದ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಡಿತರ ಕುಟುಂಬಗಳಿಗೆ ದೀಪ ಉರಿಸುವ ಉದ್ದೇಶಕ್ಕೆ ವಿತರಿಸುತ್ತಿರುವ ಸೀಮೆಎಣ್ಣೆ ಪ್ರಮಾಣವನ್ನು 3 ಲೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು. ಪರಿಷತ್‌ನಲ್ಲಿ ಬಿಜೆಪಿಯ ಶಾಂತರಾಮ ಸಿದ್ದಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ‘ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಪಡಿತರ ಕುಟುಂಬಗಳಿಗೆ ಅಡುಗೆಗಾಗಿ ತಿಂಗಳಿಗೆ ತಲಾ 3 ಲೀಟರ್‌ …

Read More »

ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳ ವರ್ಗಾವಣೆ:ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆ. 14: ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮೇಜರ್ ಸರ್ಜರಿ ಮಾಡಿದ್ದಾರೆ. ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆಯಕಟ್ಟಿನ ಜಾಗಕ್ಕೆ ದಕ್ಷ ಹಾಗೂ ಅನುಭವವುಳ್ಳ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರವನ್ನು ಕೈಗೆ ತೆಗೆದುಕೊಳ್ಳುವ ಸರ್ಕಸ್ ಮಾಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆಯುಕ್ತರಾಗಿದ್ದ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಆ …

Read More »

ರಾಜ್ಯ ವಿಧಾನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 10 ಮಸೂದೆಗಳ ಮಂಡನೆ

ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 10 ಮಸೂದೆಗಳನ್ನು ಮಂಡಿಸಲಾಯಿತು. ಬಜೆಟ್‌ನಲ್ಲಿ ಘೋಷಣೆ ಮಾಡಿರು ವಂತೆ ಕರ್ನಾಟಕ ಸ್ಟಾಂಪ್‌ ತಿದ್ದುಪಡಿ ಮಸೂದೆ 2021 ಅನ್ನು ಕಂದಾಯ ಸಚಿವ ಆರ್‌. ಅಶೋಕ್‌ ಮಂಡನೆ ಮಾಡಿದರು. 35-45 ಲಕ್ಷ ರೂ. ನಡುವಿನ ಮೌಲ್ಯದ ಅಪಾರ್ಟ್‌ ಮೆಂಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಸುಂಕ ಕಡಿಮೆ ಮಾಡಲು ಈ ತಿದ್ದುಪಡಿ ಮಸೂದೆ ತರಲಾಗಿದೆ. ಮಳೆ ಕೊಯ್ಲು ಕಡ್ಡಾಯ : ಕಾವೇರಿ ನೀರು ಅಥವಾ …

Read More »

ಪೆಟ್ರೊಲ್‌, ಡಿಸೇಲ್‌ ಜಿಎಸ್‌ಟಿ ವ್ಯಾಪ್ತಿಗೆ ತರಲು ಕಾಂಗ್ರೆಸ್‌ ಹೋರಾಟ ಮಾಡಲಿ: ಸಿಟಿ ರವಿ

ಬೆಂಗಳೂರು: ಕಾಂಗ್ರೆಸ್‌ ನವರಂತೆ ದೇಶದ ಚಿನ್ನವನ್ನ ಪ್ರಧಾನಿ ಮೋದಿ ಅವರು ಅಡ ಇಟ್ಟಿಲ್ಲ. ಬೆಲೆ ಏರಿಕೆ ಮಾಡಿ ಮೋದಿ ಅವರು ಭ್ರಷ್ಟಾಚಾರ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ನಿಂದಾದ ಬದಲಾವಣೆಗಳು, ಜಾಗತಿಕ ಮಟ್ಟದಲ್ಲಿ ಹಣದುಬ್ಬರದಿಂದಾಗಿ ಬೆಲೆ ಏರಿಕೆಯಾಗಿದೆ. ಅತಿ ಹೆಚ್ಚು ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿದೆ. ಕಾಂಗ್ರೆಸ್‌ಗೆ ಬೆಲೆ ಏರಿಕೆ ಬಗ್ಗೆ ಮಾತಾಡುವ ನೈತಿಕತೆ …

Read More »

ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆಭುಗಿಲೆದ್ದಿದೆ ವಿವಾದ .

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿನ ದೇಗುಲ ನೆಲಸಮದ ಅನಂತರ ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆ ವಿವಾದ ಭುಗಿಲೆದ್ದಿದೆ. ಸದ್ಯ ಇದು ರಾಜಕೀಯಕ್ಕೂ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ. ಹಾಗಾದರೆ ಈ ದೇಗುಲ ನೆಲಸಮ ವಿವಾದವೆಂದರೆ ಏನು? ಎತ್ತ? ಎಂಬುದರ ಒಂದು ನೋಟ ಇಲ್ಲಿದೆ. ಸುಪ್ರೀಂ ತೀರ್ಪು ಏನು?: 2006ರಲ್ಲಿ ಎಸ್‌ಎಲ್‌ಪಿ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 2009ರ ಸೆ.30ರಂದು ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ …

Read More »

ಎತ್ತಿನಹೊಳೆ ಯೋಜನೆ ಅನುಷ್ಠಾನ: ಬೊಮ್ಮಾಯಿ

https://laxminews24x7.com/bvlaxminews-58312-2/   ಬೆಂಗಳೂರು: ಎತ್ತಿನ ಹೊಳೆ ಯೋಜನೆ ಅನುಷ್ಠಾನ ವಿಚಾರದಲ್ಲಿ ಅಡೆತಡೆ ನಿವಾರಿ ಸಲು ಶೀಘ್ರ ಸಭೆ ಕರೆದು ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಯಲ್ಲಿ ಭರವಸೆ ನೀಡಿದ್ದಾರೆ. ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ| ಜಿ. ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ| ಜಿ. ಪರಮೇಶ್ವರ್‌ ಪ್ರಸ್ತಾವಕ್ಕೆ ಮಧ್ಯಪ್ರವೇಶಿಸಿ ಉತ್ತರ ನೀಡಿದ ಬೊಮ್ಮಾಯಿ ಅವರು ಯೋಜನೆ ಜಾರಿ ಬಗ್ಗೆ ಯಾವುದೇ ಅನುಮಾನ ಬೇಡ, ನಮ್ಮ ಸರಕಾರ …

Read More »