Daily Archives: ಸೆಪ್ಟೆಂಬರ್ 15, 2021

ಗೋವಾ ಚುನಾವಣೆ : 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧಾರ

ಪಣಜಿ: ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಶಿವಸೇನೆಯ ಗೋವಾ ರಾಜ್ಯ ಪ್ರಮುಖರಾದ ಜಿತೇಶ್ ಕಾಮತ್, ಮಿಲಿಂದ ಗಾವಸ್ ರವರು ಮುಂಬಯಿಯ ಖಾಸಗಿ ಹೋಟೆಲ್‍ನಲ್ಲಿ ಶಿವಸೇನೆಯ ರಾಷ್ಟ್ರೀಯ ನಾಯಕ ಸಂಜಯ ರಾವುತ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು. ಶಿವಸೇನೆ ಪಕ್ಷ ಪ್ರಮುಖ ಉದ್ಧವ ಠಾಕ್ರೆಯವರೊಂದಿಗೆ ಈ ಕುರಿತಂತೆ ಸಂಜಯ್ ರಾವುತ್ ರವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಗೋವಾ …

Read More »

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣದಾಖಲು

ನವದೆಹಲಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅಂತ್ಯಕ್ರಿಯೆ ವೇಳೆ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸುವ ವೇಳೆ ರಾಷ್ಟ್ರಧ್ವಜದ ಮೇಲೆ ಜೆ.ಪಿ. ನಡ್ಡಾ ಬಿಜೆಪಿ ಬಾವುಟ ಇಟ್ಟಿದ್ದರು. ಈ ಮೂಲಕ ನಡ್ಡಾ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.   ಈ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ವಿರುದ್ಧ ಚಂದ್ರ ಕಿಶೋರ್ ಪರಾಶರ್ ಮುಜಾಫರ್ …

Read More »

ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಕ್ಷೇತ್ರ: ಪುನರ್‌ ವಿಂಗಡನೆ ಖಚಿತ

ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಪುನರ್ವಿಂಗಡನೆ ಸಂಬಂಧ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ರಚನೆಗೆ ಸರಕಾರ ಹೆಜ್ಜೆಯಿರಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ 2021ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಮೂಲಕ ಪ್ರಸ್ತುತ ಇರುವ ತಾಲೂಕು ಮತ್ತು ಜಿ.ಪಂ. ಕ್ಷೇತ್ರ ಪುನರ್‌ ವಿಂಗಡನೆಯನ್ನು ರದ್ದುಪಡಿಸಿ ಮತ್ತೆ ಪುನರ್‌ ವಿಂಗಡಣೆ ಮಾಡಲು ನಿರ್ಧರಿಸಲಾಗಿದೆ. ಮಂಗಳವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ …

Read More »

ಹೆಣ್ಣು ಶಿಶು ಮಾರಾಟ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆ : ಎಂ.ಬಿ.ಪಾಟೀಲ

ವಿಜಯಪುರ: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಶಾಮೀಲಾಗಿ ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟ ಮಾಡಿದ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು. ಈ ಕುರಿತು ಸದನದಲ್ಲಿ ಚರ್ಚೆ ನಡೆಸುವುದಾಗಿ ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಉದಯವಾಣಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟದ ಪ್ರಕರಣದ ಕುರಿತು ವಿಶೇಷ ವರದಿ ಮೂಲಕ ಉದಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಈ ಘಟನೆ …

Read More »

ದಾವಣಗೆರೆ: ಸೆ.18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ

ದಾವಣಗೆರೆ: ಸೆ.18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಕರ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಸೆಪ್ಟಂಬರ್ 18ರ ಸಂಜೆ ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ಕಾರ್ಯಕಾರಿಣಿ ಸಬೆ ನಡೆಯಲಿದೆ. ಅಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಂದು ಬೆಳಿಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, …

Read More »

ಬೆಳಗಾವಿಯ 46 ಅನಧಿಕೃತ ಧಾರ್ಮಿಕ ಕಟ್ಟಡಗಳ ಗುರುತು, ಶೀಘ್ರವೇ ತೆರವು ಎಂದ ಬೆಳಗಾವಿ ಡಿಸಿ….!

    ಬೆಳಗಾವಿ: ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಶೀಘ್ರವೇ ಈ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ. ಈ ಎಲ್ಲ 46 ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಈಗಾಗಲೇ ಒಟ್ಟು 17 ಅನಧಿಕೃತ ಧಾರ್ಮಿಕ ಕೇಂದ್ರದ ಕಟ್ಟಡಗಳ ತೆರವು ಮಾಡಲಾಗಿದೆ. ಇನ್ನುಳಿದ 29 ಅನಧಿಕೃತ ಧಾರ್ಮಿಕ ಕೇಂದ್ರ …

Read More »

ಗೋಕಾಕ ಸರಕಾರಿ ಆಸ್ಪತ್ರೆ ಅವಾಚ್ಯ ಶಬ್ದಗಳ ಬಳಕೆ ಪ್ರಕರಣ ಹಿನ್ನೆಲೆ ಗೋಕಾಕ ಶಹರ ಪಿಎಸ್‌ಐ ಅಮ್ಮಿನಭಾವಿಯನ್ನು ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ

    ಗೋಕಾಕ ಸರಕಾರಿ ಆಸ್ಪತ್ರೆ ಅವಾಚ್ಯ ಶಬ್ದಗಳ ಬಳಕೆ ಪ್ರಕರಣ ಹಿನ್ನೆಲೆ ಗೋಕಾಕ ಶಹರ ಪಿಎಸ್‌ಐ ಅಮ್ಮಿನಭಾವಿ ವರ್ಗಾವಣೆ ಗೋಕಾಕ ಶಹರ ಪೊಲೀಸ್ ಠಾಣೆ ಪಿಎಸ್‌ಐ ಅಮ್ಮಿನಭಾವಿ   ಮಧ್ಯಪಾನ ಮಾಡಿ ಗೋಕಾಕ ಸರ್ಕಾರಿ ಆಸ್ಪತ್ರೆಗೆ ಹೋಗಿ ಡ್ಯೂಟಿಯಲ್ಲಿದ್ದ ಡಾ.ವಿಶ್ವನಾಥ ಭೋವಿ ಹಾಗೂ ಸಿಬ್ಬಂದಿಗಳಿಗೆ   ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನ ಮಾಡಿರುವ ಪ್ರಕರಣ ಹಿನ್ನೆಲೆ ಅವರನ್ನು ಗೋಕಾಕ ಶಹರ ಪೊಲೀಸ್ ಠಾಣೆ ಯಿಂದ ಚಿಕ್ಕೋಡಿ ಸಂಚಾರಿ …

Read More »

ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರು –  ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ. ಈ ಸ್ಕೂಟರ್ ನ ನಂಬರ್ ಪ್ಲೇಟ್ ನಲ್ಲಿ ಕನ್ನಡದ ಅಭಿಮಾನಿ ಎಳೆದ ಕನ್ನಡದ ಬಾವುಟದ ಗೆರೆ  ಪೋಲಿಸರ ಕಣ್ಣಿಗೆ ಬಿದ್ದಿದೆ. ಬಾಪೂಜಿ ನಗರದಲ್ಲಿ ಆತನನ್ನು ನಿಲ್ಲಿಸಿದ ಪೊಲೀಸರು 500 ರೂಪಾಯಿ   ದಂಡ ಕಟ್ಟಿಸಿಕೊಂಡರು. ದಂಡದ ಪಾವತಿಯಲ್ಲಿ …

Read More »

7 ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೌಲ್ಯದ ಅಡಿಕೆ ಎಕ್ಸೈಸ್ ಅಧಿಕಾರಿಗಳ ವಶ

ಬೆಳಗಾವಿ – ಜಿಎಸ್ ಟಿ ದಾಖಲೆಗಳಿಲ್ಲದೆ 7 ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೌಲ್ಯದ ಅಡಿಕೆಗಳನ್ನು ಬೆಳಗಾವಿ ಸೆಂಟ್ರಲ್ ಜಿಎಸ್ಟಿ ಮತ್ತು ಸೆಂಟ್ರಲ್ ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.   ಮಂಗಳೂರಿನಿಂದ ಬಂದ ಮಾಹಿತಿ ಮೇರೆಗೆ ಹುಬ್ಬಳ್ಳಿ – ನವಲಗುಂದ ರಸ್ತೆಯಲ್ಲಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್ ಗಳಿಗೆ ಅಡಿಕೆ ಸಾಗಿಸಲಾಗುತ್ತಿತ್ತು. ಅಡಿಕೆಗೆ ಶೇ. 5ರಷ್ಟು ಜಿಎಸ್ಟಿ ಕಟ್ಟಬೇಕಿತ್ತು. ಆದರೆ ಜಿಎಸ್ಟಿ ಕಟ್ಟಿರುವ ಯಾವುದೇ ದಾಖಲೆ …

Read More »

ಅವಸರದಿಂದ ದೇವಸ್ಥಾನ ಒಡೆಯಬೇಡಿ :ಬೊಮ್ಮಾಯಿ

ಬೆಂಗಳೂರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ‌ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. …

Read More »