Breaking News
Home / ರಾಜಕೀಯ / ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆಭುಗಿಲೆದ್ದಿದೆ ವಿವಾದ .

ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆಭುಗಿಲೆದ್ದಿದೆ ವಿವಾದ .

Spread the love

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿನ ದೇಗುಲ ನೆಲಸಮದ ಅನಂತರ ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆ ವಿವಾದ ಭುಗಿಲೆದ್ದಿದೆ. ಸದ್ಯ ಇದು ರಾಜಕೀಯಕ್ಕೂ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ. ಹಾಗಾದರೆ ಈ ದೇಗುಲ ನೆಲಸಮ ವಿವಾದವೆಂದರೆ ಏನು? ಎತ್ತ? ಎಂಬುದರ ಒಂದು ನೋಟ ಇಲ್ಲಿದೆ.

ಸುಪ್ರೀಂ ತೀರ್ಪು ಏನು?:

2006ರಲ್ಲಿ ಎಸ್‌ಎಲ್‌ಪಿ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 2009ರ ಸೆ.30ರಂದು ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಬಾರದು. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗಿದ್ದರೆ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ಅಧಿಕಾರಿಗಳ ಎಡವಟ್ಟು:

ಈ ತೀರ್ಪಿನ ಬಳಿಕ ಅಂದಿನ ರಾಜ್ಯ ಸರಕಾರ‌ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ಪಟ್ಟಿ ಮಾಡಿ, ಬಳಿಕ ತೆರವು ಮಾಡುವಂತೆ ಆದೇಶಿಸಿತ್ತು. ಇದೇ ಅವಧಿಯಲ್ಲಿದ್ದ ಅಧಿಕಾರಿಗಳು ರಸ್ತೆ ಬದಿ, ಸಾರ್ವಜನಿಕ ಸ್ಥಳ, ಉದ್ಯಾನ, ಕೆರೆ ಬಳಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ತಯಾರಿಸಿ ರಾಜ್ಯ ಸರಕಾರ‌ಕ್ಕೆ ಸಲ್ಲಿಸಿದ್ದರು. ಇದಾದ ಅನಂತರ 2011ರಲ್ಲಿ ಡಿಸಿಯಾಗಿದ್ದ ಹರ್ಷಗುಪ್ತಾ ಸರಕಾರ‌ದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿದ್ದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಅನಂತರ ಕಟ್ಟಡಗಳ ತೆರವು ಕಾರ್ಯಚರಣೆ ಸ್ಥಗಿತವಾಗಿತ್ತು.

ಈಗ ಏಕೆ ವಿವಾದ? :

ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿದ್ದ ದೇಗುಲ ತೆರವು ಮಾಡುವ ವಿಚಾರವಾಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ತನ್ನ 2009ರ ಆದೇಶದ ಅನುಷ್ಠಾನದ ಬಗ್ಗೆ ಹೈಕೋರ್ಟ್‌ಗಳಿಗೆ ವರದಿ ಕೇಳಿತ್ತು. ಈ ಹಿನ್ನೆಲೆ ಮೈಸೂರಿನಲ್ಲಿ ಮತ್ತೆ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಮರು ಪರಿಶೀಲನೆಗೆ ಆಗ್ರಹ:

ಮೈಸೂರು ಜಿಲ್ಲಾಡಳಿತ 2009ರ ಸುಪ್ರೀಂ ಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂಬ ವಾದವಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ 12 ಧಾರ್ಮಿಕ ಕಟ್ಟಡಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದೆ. ಅಲ್ಲದೇ ಸೆ.8ರಂದು ನಂಜನಗೂಡು ತಾಲೂಕು ಆಡಳಿತ ಸ್ಥಳೀಯ ಶಾಸಕರ ಗಮನಕ್ಕಷ್ಟೇ ತಂದು ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹಾದೇವಮ್ಮ ದೇಗುಲವನ್ನು ಅವೈಜ್ಞಾನಿಕವಾಗಿ ನೆಲಸಮಗೊಳಿಸಿತು.ಇದರಿಂದ ಉದ್ರಿಕ್ತರಾದ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಹಿಂದೆ ಸಿದ್ಧಪಡಿಸಿರುವ 93 ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

ಒಟ್ಟು 157 ದೇಗುಲಗಳ ಪಟ್ಟಿ:

2009ರ ಸೆ.30ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಂತೆ ರಾಜ್ಯ ಸರಕಾರ‌ದ ಸೂಚನೆ ಮೇರೆಗೆ ಜಿಲ್ಲೆಯ 315 ದೇವಾಲಯಗಳನ್ನು ತೆರವುಗೊಳಿಸಲು ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಸಂಬಂಧ 2012ರ ಹೊತ್ತಿಗೆ ಅಂದಿನ ಜಿಲ್ಲಾಡಳಿತ 158 ದೇವಾಲಯಗಳ ಪ್ರಕರಣವನ್ನು ಇತ್ಯರ್ಥಗೊಳಿಸಿ, 157 ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಬಾಕಿ ಉಳಿಸಿತ್ತು.

ಅನಂತರ ಉಳಿದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದ ಜಿಲ್ಲಾಡಳಿತ ಈಗಿರುವ 157 ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ 9 ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದರೆ, 27 ದೇಗುಲಗಳನ್ನು ಉಳಿಸಿಕೊಳ್ಳಲು ಹೆಚ್ಚುವರಿ ದಾಖಲಾತಿ ಯನ್ನು ದೇಗುಲ ಸಮಿತಿಗಳಿಂದ ಕೇಳಿತ್ತು.

ಇದರಿಂದ 121 ಕಟ್ಟಡಗಳು ಸದ್ಯಕ್ಕೆ ತೆರವಿಗೆ ಗುರಿಯಾಗಿದ್ದವು. ಆದರೆ ಇದರಲ್ಲಿ 9 ಕಟ್ಟಡಗಳು ನ್ಯಾಯಾ ಲಯದಲ್ಲಿದ್ದರೆ, 3 ಕಟ್ಟಡಗಳ ಹೆಸರು ಪುನರಾವರ್ತನೆ ಯಾಗಿರುವುದರಿಂದ ಪಟ್ಟಿಯಲ್ಲಿ 109 ಕಟ್ಟಡಗಳು ಮಾತ್ರ ಉಳಿದುಕೊಂಡಿದ್ದವು. ಇತ್ತೀಚೆಗೆ ಜಿಲ್ಲಾಡಳಿತ ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹಾದೇವಮ್ಮ ದೇಗುಲ ಸೇರಿದಂತೆ 12 ದೇಗುಲಗಳನ್ನು ತೆರವು ಮಾಡಿರುವುದರಿಂದ ಸದ್ಯಕ್ಕೆ ಧಾರ್ಮಿಕ ಕಟ್ಟಡಗಳ ತೆರವು ಪಟ್ಟಿಯಲ್ಲಿ 97 ಕಟ್ಟಡಗಳು ತೆರವಿಗೆ ಬಾಕಿ ಉಳಿದಿವೆ. ಇದರಲ್ಲಿ 93 ಹಿಂದೂ ದೇವಾಲ ಯಗಳಿದ್ದರೆ, 5 ಗೋರಿಗಳು, 1 ಚರ್ಚ್‌ ಕೂಡ ಇದೆ.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ