Daily Archives: ಸೆಪ್ಟೆಂಬರ್ 12, 2021

ಒಂದೇ ಸಮುದಾಯದ 70 ಮಂದಿಗೆ ಎಫ್​ಡಿಎ ಅರ್ಹತೆ?; ಕೆಪಿಎಸ್​ಸಿಯಲ್ಲಿ ಮತ್ತೆ ಅಕ್ರಮ ಶಂಕೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಿಗೆ ಜಾಕ್​ಪಾಟ್

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸುದ್ದಿಯಲ್ಲಿದ್ದ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹುದ್ದೆಗಳ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ) ಬಿಡುಗಡೆ ಮಾಡಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಪಿಎಸ್​ಸಿ ಬಿಡುಗಡೆ ಮಾಡಿದ ಎಫ್​ಡಿಎ ಅರ್ಹತಾ ಪಟ್ಟಿಯಲ್ಲಿ 5241, 42, 43 ನೋಂದಣಿ ಸಂಖ್ಯೆಯಲ್ಲಿರುವ ಒಂದೇ ಸಮುದಾಯದ (ನಾಯ್್ಕ ಸುಮಾರು 70ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಒಂದೇ …

Read More »

ಮಧ್ಯಾಹ್ನದ ಬಿಸಿ ಊಟದ ಯೋಜನೆ ಆಡಿಟ್ ಮಾಡು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಕೊರೋನಾದಿಂದಾಗಿ ಮಾರ್ಚ್, 2020 ರಿಂದ ಶಾಲೆಗಳು ಬಂದ್ ಆಗಿದ್ದು, ಮಧ್ಯಾಹ್ನದ ಬಿಸಿ ಊಟದ ಯೋಜನೆಯ ವಿವರವಾದ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಅಡಿಯಲ್ಲಿ ಆಹಾರ ಭದ್ರತೆ ಭತ್ಯೆಯ ಭಾಗವಾಗಿ ಮಕ್ಕಳಿಗೆ ಆಹಾರ ಧಾನ್ಯಗಳು ಮತ್ತು ಅಡುಗೆ ವೆಚ್ಚವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ಕೇಂದ್ರವು ಯೋಜನೆಯ ಫಲಾನುಭವಿಗಳಾದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ತಲಾ 100 …

Read More »

ಮಹಿಳಾ ಉದ್ಯೋಗಿಗೆ ಮತ್ತು ಬರಿಸಿ ಚಲಿಸುವ ಕಾರ್ ನಲ್ಲೇ ಗ್ಯಾಂಗ್ ರೇಪ್; ಐವರು ಅರೆಸ್ಟ್

ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಪೊಲೀಸರು ಚಲಿಸುತ್ತಿದ್ದ ಕಾರ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐದು ಮಂದಿಯನ್ನು ಬಂಧಿಸಿದ್ದಾರೆ. ಮೊಬೈಲ್ ಫೋನ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ 20 ವರ್ಷದ ಮಹಿಳೆ ಪರಿಚಯಸ್ಥ ವ್ಯಕ್ತಿಯನ್ನು ಭೇಟಿಯಾಗಲು ತೆರಳಿದ್ದು, ಈ ವೇಳೆ ಆಕೆಗೆ ಮತ್ತು ಬರುವ ಪಾನೀಯ ನೀಡಿದ ಪರಿಚಯಸ್ಥ ತನ್ನ ಸ್ನೇಹಿತರೊಂದಿಗೆ ಸೇರಿ ಚಲಿಸುವ ಕಾರ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಕಾಂಚಿಪುರಂ ನಗರದ ರಸ್ತೆಗಳಲ್ಲಿ ಆರೋಪಿಗಳು ಆಕೆಯ ಮೇಲೆ ಕಾರ್ ನಲ್ಲೇ ಸಾಮೂಹಿಕ …

Read More »

ಮೈಸೂರಿನಲ್ಲಿ ದೇವಾಲಯಗಳ ನೆಲಸಮಕ್ಕೆ ಜನತೆ ಆಕ್ರೋಶ : ಜಿಲ್ಲಾಡಳಿತದ ಲಿಸ್ಟ್ ನಲ್ಲಿ ಯಾವ ಯಾವ ದೇವಸ್ಥಾನಗಳಿವೆ ಗೊತ್ತ..?

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಹಲವು ದೇವಾಲಯಗಳ ನೆಲಸಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್ ನ ನಿಯಮದಂತೆ ಜಿಲ್ಲಾಡಳಿತ ಮೈಸೂರಿನಲ್ಲಿರುವ ಸುಮಾರು 93 ದೇವಾಲಯಗಳನ್ನು ತೆರವು ಮಾಡಲು ಪಾಲಿಕೆ ಪಟ್ಟಿ ಮಾಡಿದೆ. ಹಿಂದೂ ದೇವಾಲಯಗಳನ್ನೇ ‘ಟಾರ್ಗೆಟ್’ ಮಾಡುತ್ತಿರುವುದು ಏಕೆ..? : ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಸಿಡಿಮಿಡಿ ಸುಪ್ರೀಂಕೋರ್ಟ್ ನ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ನಿಯಮದ ಅನ್ವಯ ಮೈಸೂರು ಜಿಲ್ಲಾಡಳಿತದ ಲಿಸ್ಟ್ …

Read More »

ಜತೆ ಮಹಿಳಾ ಕಾನ್ಸ್​ಟೇಬಲ್​ ಅಶ್ಲೀಲತೆ, ಮಗನ ದುರ್ಬಳಕೆ: ವಿಡಿಯೋ ವೈರಲ್​ ಬೆನ್ನಲ್ಲೇ ಇಬ್ಬರಿಗೂ ಶಾಕ್​!

ಜೈಪುರ: ಮಹಿಳಾ ಕಾನ್ಸ್​ಟೇಬಲ್​ ಜತೆ ಸ್ವಿಮ್ಮಿಂಗ್​ಪೂಲ್​ನಲ್ಲಿ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರಾಜಸ್ಥಾನದ ಉಪ ಪೊಲೀಸ್​ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಅಶ್ಲೀಲ ವಿಡಿಯೋ ವೈರಲ್​ ಆದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಡಿಎಸ್​ಪಿ ಹಿರಾಲಾಲ್​ ಸೈನಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಸ್ವಿಮ್ಮಿಂಗ್​ ಪೂಲ್​ ಒಳಗಡೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಇದು ಅವರ ಖಾಸಗಿ ವಿಚಾರವಾದರೂ ಸೈನಿ ಇನ್ನೊಂದು ಘೋರ ಅಪರಾಧವನ್ನು ಎಸಗಿದ್ದಾರೆ. ಮಹಿಳಾ ಸಿಬ್ಬಂದಿಯ ಮಗನ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದಕ್ಕೆ …

Read More »

ನಡುರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ

ಧಾರವಾಡ: ನಡುರಸ್ತೆಯಲ್ಲಿಯೇ ಜೆಡಿಎಸ್ ಮುಖಂಡನೋರ್ವ ಮಹಿಳೆಯ ಕೈಹಿಡಿದು ಎಳೆದಾಡಿರುವ ಘಟನೆ ಧಾರವಾಡ ಜಿಲ್ಲೆ ಸತ್ತೂರ ಬಡಾವಣೆಯಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಮಹಿಳೆಯ ಕೈಹಿಡಿದು ಎಳೆದಾಡಿದ್ದಾರೆ. ಮಹಿಳೆಯ ಕೈ ಹಿಡಿದು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸತ್ತೂರು ನಿವಾಸಿಯಾಗಿರುವ ಮಹಿಳೆ ಮನೆಯತ್ತ ಹೋಗುತ್ತಿದ್ದರು. ಈ ವೇಳೆ ಜೆಡಿಎಸ್ ಮುಖಂಡ ಮಹಿಳೆ ಕೈ ಹಿಡಿದು ಎಳೆದಾಡಿದ್ದು, ಘಟನೆ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾಗಿರಿ ಠಾಣೆಯಲ್ಲಿ ಮಹಿಳೆ …

Read More »

ಕೌಶಲಾಭಿವೃದ್ಧಿ ಕೇಂದ್ರಕ್ಕೆ ಉಪಕರಣ ಖರೀದಿಯಲ್ಲಿ ಅಕ್ರಮ: ಸಿಬಿಐ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಬೆಂಗಳೂರು: ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೌಶಲಾಭಿವೃದ್ಧಿ ಕೇಂದ್ರದ ಲ್ಯಾಬ್‌ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್‌ ನಡೆಸಿದ್ದು, ಸುಮಾರು 34 ಕೋಟಿ ರೂ. ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಹಾಗೂ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಉನ್ನತ ಶಿಕ್ಷಣ ಸಚಿವರಾದ ಡಾ| ಅಶ್ವತ್ಥ್ ನಾರಾಯಣ್‌ ಅವರ …

Read More »

ಬಿಜೆಪಿ ಸೇರಲು ಹಣದ ಆಮಿಷವಿತ್ತು: ಶ್ರೀಮಂತ ಪಾಟೀಲ್‌

ಕಾಗವಾಡ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಾಗ ಹಣದ ಆಮಿಷ ಬಂದಿತ್ತು. ಆದರೆ ಹಣಕ್ಕೆ ಬೇಡಿಕೆ ಇಡದೆ ಕ್ಷೇತ್ರ ಹಾಗೂ ಜನರ ಸೇವೆ ಮಾಡಲು ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಹೇಳಿದ್ದಾರೆ. ಶನಿವಾರ ಐನಾಪುರ ಪಟ್ಟಣದಲ್ಲಿ ಒಂದು ಕೋಟಿ ರೂ. ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದಾಗ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಸೇರುವಾಗ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದರಿಂದ ಯಡಿಯೂರಪ್ಪನವರ ಸಂಪುಟದಲ್ಲಿ …

Read More »

ಸಿದ್ದರಾಮಯ್ಯ ಕೋಡಿಮಠ ಶ್ರೀ ಭೇಟಿಯಾದರೆ ತಪ್ಪೇನು?: ಎಚ್ಕೆ

ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಡಿಮಠದ ಸ್ವಾಮೀಜಿ ಬಳಿ ಭವಿಷ್ಯ ಕೇಳಿದ್ದರೆ ತಪ್ಪೇನು? ಒಂದೊಮ್ಮೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಪೂಜ್ಯರು ಭವಿಷ್ಯ ನುಡಿದಿದ್ದರೆ ಸಂತಸದ ಸಂಗತಿ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಅವರು ಸಚಿವ ಗೋವಿಂದ ಕಾರಜೋಳರಿಗೆ ತಿರುಗೇಟು ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಭೇಟಿ ಮಾಡುವುದು ಹೊಸದೇನೂ ಅಲ್ಲ. ಮಠಮಾನ್ಯಗಳ ಬಗ್ಗೆ ಅಪಾರ ಗೌರವ ಹೊಂದಿರುವ …

Read More »

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಧಿವೇಶನದ ಅಗ್ನಿ ಪರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿಯಾಗಿ ನಲವತ್ತೈದು ದಿನಗಳ ಆಡಳಿತ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಮಂಡಲ ಅಧಿವೇಶನ ಅಗ್ನಿಪರೀಕ್ಷೆಯಾಗಲಿದೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಾಗ ತಕ್ಕ ತಿರುಗೇಟು ನೀಡುವ ಮೂಲಕ ಸಿಎಂಗೆ ಬೆಂಬಲ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ಅವರೀಗ ಸವಾಲುಗಳಿಗೆ ಸ್ವತಃ ಎದೆಯೊಡ್ಡಬೇಕಾಗಿದೆ. ರಾಜ್ಯ ರಾಜಕಾರಣದಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಮತ್ತು ಉಭಯ ಸದನಗಳಲ್ಲೂ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ …

Read More »