Breaking News
Home / ರಾಜಕೀಯ / ಮಹಿಳಾ ಉದ್ಯೋಗಿಗೆ ಮತ್ತು ಬರಿಸಿ ಚಲಿಸುವ ಕಾರ್ ನಲ್ಲೇ ಗ್ಯಾಂಗ್ ರೇಪ್; ಐವರು ಅರೆಸ್ಟ್

ಮಹಿಳಾ ಉದ್ಯೋಗಿಗೆ ಮತ್ತು ಬರಿಸಿ ಚಲಿಸುವ ಕಾರ್ ನಲ್ಲೇ ಗ್ಯಾಂಗ್ ರೇಪ್; ಐವರು ಅರೆಸ್ಟ್

Spread the love

ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಪೊಲೀಸರು ಚಲಿಸುತ್ತಿದ್ದ ಕಾರ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐದು ಮಂದಿಯನ್ನು ಬಂಧಿಸಿದ್ದಾರೆ.

ಮೊಬೈಲ್ ಫೋನ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ 20 ವರ್ಷದ ಮಹಿಳೆ ಪರಿಚಯಸ್ಥ ವ್ಯಕ್ತಿಯನ್ನು ಭೇಟಿಯಾಗಲು ತೆರಳಿದ್ದು, ಈ ವೇಳೆ ಆಕೆಗೆ ಮತ್ತು ಬರುವ ಪಾನೀಯ ನೀಡಿದ ಪರಿಚಯಸ್ಥ ತನ್ನ ಸ್ನೇಹಿತರೊಂದಿಗೆ ಸೇರಿ ಚಲಿಸುವ ಕಾರ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ.

ಕಾಂಚಿಪುರಂ ನಗರದ ರಸ್ತೆಗಳಲ್ಲಿ ಆರೋಪಿಗಳು ಆಕೆಯ ಮೇಲೆ ಕಾರ್ ನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಗೆ ಪ್ರಜ್ಞೆ ಮರಳಿದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿ, ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ದಾರಿಹೋಕರು ನೆರವಿಗೆ ಧಾವಿಸಿ ಬರುವುದನ್ನು ಗಮನಿಸಿದ ಆರೋಪಿಗಳು ರಸ್ತೆಬದಿಯಲ್ಲಿ ಆಕೆಯನ್ನು ಎಸೆದು ಪರಾರಿಯಾಗಿದ್ದಾರೆ. ಕಾಂಚಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸೆ. 9 ರಂದು ನಾಲ್ವರನ್ನು ಬಂಧಿಸಿದ್ದು, ಮರುದಿನ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ