Breaking News

ವಿದ್ಯಾಕಾಶಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರ್‌ನಲ್ಲಿ ಕಳ್ಳತನ

Spread the love

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಒಂದೇ ವಾರದಲ್ಲಿ ಎರಡು ಬಾರ್‍ನಲ್ಲಿ ಕಳ್ಳತನದ ಘಟನೆ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ನಗರದ ತೇಜಸ್ವಿನಗರದಲ್ಲಿ ಎಂಎಸ್‍ಐಎಲ್ ನಲ್ಲಿ ಕಳ್ಳತನ ಮಾಡಿದ್ದರು. ಎಂಎಸ್‍ಐಎಲ್ ನಲ್ಲಿದ್ದ 65 ಸಾವಿರ ನಗದು ಹಾಗೂ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿದ್ದರು. ಈಗ ಮತ್ತೇ ಧಾರವಾಡ ನಗರದ ಸಪ್ತಾಪೂರದಲ್ಲಿ ತ್ರಿವೇಣಿ ಎಂಬ ಬಾರ್ ನಲ್ಲಿಯೂ ಕಳ್ಳತನ ಮಾಡಲಾಗಿದೆ.

ಬಾರ್ ನ ಶಟರ್ ಮುರಿದು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿ, ಬಾರನಲ್ಲಿದ ಬಾಟಲ್, ನಗದು ಹಣದ ಜೊತೆಗೆ ಸಿಸಿಟಿವಿ ಡಿವಿಆರ್‍ನ್ನು ಕದ್ದು ಪರಾರಿಯಾಗಿದ್ದಾರೆ. ಕ್ಯಾಮೆರಾಗಳನ್ನು ಡ್ಯಾಮೆಜ್ ಮಾಡಿರುವ ಕಳ್ಳರು, ಬಾರ್‍ನ ಕೌಂಟರ್ ನಲ್ಲಿದ್ದ 40 ಸಾವಿರಕ್ಕೂ ಹೆಚ್ಚು ನಗದು ಹಣ ಹಾಗೂ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ