Breaking News

Daily Archives: ಫೆಬ್ರವರಿ 19, 2021

ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ

ಮೈಸೂರು: ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ. ಸಿದ್ದರಾಮಯ್ಯರನ್ನ ಹಿಂದೂ ವಿರೋಧಿ ಅನ್ನುವುದಕ್ಕೆ ಆಗಲ್ಲ ಎಂದು ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ತಮ್ಮ ತಂದೆ ಸಿದ್ದರಾಮಯ್ಯರ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಟಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಹೇಳಿದ್ದಾರೆ. ಜೊತೆಗೆ, ದೇಣಿಗೆ ಎಂಬುದು ಸ್ವಇಚ್ಛೆಯಿಂದ ನೀಡುವುದು ಎಂದು ಸಹ ಹೇಳಿದರು. ನಮ್ಮೂರಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ನೀಡ್ತೇನೆ ಎಂದು ಸಿದ್ದರಾಮಯ್ಯ ಅಂದಿದ್ದಾರೆ. ಅಂತೆಯೇ, ಅನೇಕ ದೇವಸ್ಥಾನಗಳಿಗೆ …

Read More »

ಬಿಹಾರದಲ್ಲಿ ಬಿಜೆ‍ಪಿ ಸೋಲಿಸಲು ವಿಜಯೇಂದ್ರ ದುಡ್ಡು: ಯತ್ನಾಳ

ಬೆಂಗಳೂರು: ‘ಬಿಹಾರದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಜಯೇಂದ್ರ (ಯಡಿಯೂರಪ್ಪ ಪುತ್ರ) ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಶಕ್ತಿ ಕುಗ್ಗಿಸಲು ಹಣ ಸಂದಾಯ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಪಾದಿಸಿದರು. ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಆರ್‌ಜೆಡಿ, ಕಾಂಗ್ರೆಸ್‌ಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ‘ಪಕ್ಷದಿಂದ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಹನ್ನೊಂದು ಪುಟಗಳ …

Read More »

ನಮ್ಮ ಭರವಸೆಗಳು ಸುಳ್ಳಾಗಿವೆ, ನೀವೂ ವಿಫಲರಾಗಿದ್ದೀರಿ: ಪ್ರಧಾನಿ ಮೋದಿ ಬಗ್ಗೆ ಶಂಕರ್ ಬಿದರಿ

ಬೆಂಗಳೂರು, ಫೆ,18: ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ನೋಟ್ ಬ್ಯಾನ್ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಹಲವು …

Read More »

ನಾನು ದೇವಾಲಯಗಳಿಗೆ ಹೋಗೋದು ಕಡಿಮೆ: ಕಷ್ಟಕ್ಕೆ ಸ್ಪಂದಿಸುವುದರಲ್ಲಿ ದೇವರಿದ್ದಾನೆ- ಸಿದ್ದರಾಮಯ್ಯ

ದೇವಾಲಯಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಅಂಥಹದ್ದೇ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಫೆ.18 ರಂದು ಮೈಸೂರಿನ ಟಿ.ನರಸಿಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ, “ನಾನು ದೇವಸ್ಥಾನಗಳಿಗೆ ಹೋಗುವುದು ಕಡಿಮೆ, ಮನೆಯಲ್ಲಿ ಪೂಜೆ ಮಾಡುವುದಿಲ್ಲ ಹಾಗಂತ ದೇವರು ಇಲ್ಲ ಅಂತಲ್ಲ, ಕಷ್ಟಕ್ಕೆ ಸ್ಪಂದಿಸುವುದರಲ್ಲಿ ದೇವರಿದ್ದಾನೆ ಎಂದು ಹೇಳಿದ್ದಾರೆ. ಇದೇ ವೇಳೆ ಪೂಜಾರಿಗಳ ಬಗ್ಗೆಯೂ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕೆಲವು ಪೂಜಾರಿಗಳು ತಟ್ಟೆ ಕಾಸಿಗಾಗಿ …

Read More »

ಕಾಂಗ್ರೆಸ್‌ ಮುಖಂಡರು ತಮ್ಮ ತೀಟೆ ತೀರಿಸಿಕೊಳ್ಳಲು ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು.:H.D.K.

ಮಂಡ್ಯ: ‘ಕಾಂಗ್ರೆಸ್‌ ಮುಖಂಡರು ತಮ್ಮ ತೀಟೆ ತೀರಿಸಿಕೊಳ್ಳಲು ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್‌ನ ಆಶ್ರಯದಿಂದ ನಮ್ಮ ರಾಜಕೀಯ ಜೀವನ ನಡೆಯುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರು ಜೆಡಿಎಸ್‌ನಲ್ಲಿ ಇದ್ದಾಗ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿದ್ದಾರೆ. ಆದರೆ 1999ರಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ನಾನು, ದೇವೇಗೌಡರು ಸೋತಿದ್ದೆವು. …

Read More »

ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಸ್ಥರಿಗೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಂದ ಕಿರುಕುಳ…?

ಚಿಕ್ಕೋಡಿ : ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಸ್ಥರಿಗೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಂದ ಕಿರುಕುಳ ಆರೋಪ ಚಿಕ್ಕೋಡಿ : ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಟೆಂಡರ್ ಮುಖಾಂತರ ಗುತ್ತಿಗೆ ಪಡೆದ ವಿವಿಧ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರಿಗೆ ಸಾರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬಸ್ ನಿಲ್ದಾಣದಲ್ಲಿರುವ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಗುತ್ತಿಗೆ ಪಡೆದ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ವಾಣಿಜ್ಯಗಳ ಬಾಡಿಗೆ ಭರಿಸಲು ಸಾಧ್ಯವಾಗದೇ ಮತ್ತು ಸಾರಿಗೆ ಅಧಿಕಾರಿಗಳ ಕಿರುಕುಳದಿಂದ ಈಗಾಗಲೇ ಕೆಲವು ವ್ಯಾಪಾರಸ್ಥರು …

Read More »

ಮಗುವಿನ ಜೀವ ಉಳಿಸಿದ’: ₹16 ಕೋಟಿ ಮೌಲ್ಯದ ‘ಲಾಟರಿ

ಭಟ್ಕಳ: ಮಾರಣಾಂತಿಕ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವೊಂದು ₹ 16 ಕೋಟಿ ಮೌಲ್ಯದ ಜೀನ್ ಚಿಕಿತ್ಸೆಗೆ ಒಳಗಾಗಿ ಈಗ ಮರುಜೀವ ಪಡೆದಿದ್ದಾಳೆ. ಬಹುರಾಷ್ಟ್ರೀಯ ಔಷಧಿ ಕಂಪನಿ ‘ನೋವಾರ್ಟಿಸ್’ ಲಾಟರಿ ಮೂಲಕ ಈ ಮಗುವಿನ ಚಿಕಿತ್ಸೆಗೆ ಆಯ್ಕೆ ಮಾಡಿತ್ತು. ಪಟ್ಟಣದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ಅವರ ಪುತ್ರಿಯಾಗಿರುವ ಫಾತಿಮಾಳನ್ನು, ಜನವರಿ ಕೊನೆಯಲ್ಲಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಝೋಲ್ಗೆನ್ಸ್ಮಾ’ ಜೀನ್ ಥೆರಪಿಗೆ ಒಳಗಾಗಿದ್ದು ಈಗ ಚೇತರಿಸಿಕೊಳ್ಳುತ್ತಿರುವುದಾಗಿ …

Read More »

ರೈತರಿಂದ ರೈಲು ತಡೆ: ನಿರ್ಲಕ್ಷಿಸಬಹುದಾದ ಪರಿಣಾಮವಷ್ಟೇ ಎಂದ ರೈಲ್ವೆ

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಗುರುವಾರ ದೇಶಾದ್ಯಂತ ನಡೆದ ರೈಲು ತಡೆ ಯಶಸ್ವಿಯಾಗಿದೆಯೆಂದು ರೈತರು ಹೇಳಿದ್ದರೆ, ಇತ್ತ ರೈಲ್ವೆ ಇಲಾಖೆ ರೈಲು ತಡೆಯಿಂದ ಉಂಟಾಗಿರುವುದು ನಿರ್ಲಕ್ಷಿಸಬಹುದಾದ ಪರಿಣಾಮ ಎಂದಷ್ಟೇ ಹೇಳಿದೆ. ಪಂಜಾಬ್ ಮತ್ತು ಹರಿಯಾಣದ ಅನೇಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೇ ಅಧಿಕಾರಿಗಳು ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವೆಡೆ …

Read More »

ಒಂಟಿಯಾಗಿ ಸೈಕಲ್‌ನಲ್ಲಿ ದೇಶ ಪರ್ಯಟನೆ: ಕಾರವಾರ ತಲುಪಿದ ಕೊಲ್ಕತ್ತಾ ವ್ಯಕ್ತಿ

ಕಾರವಾರ: ಕೊಲ್ಕತ್ತಾದ ಈ ವ್ಯಕ್ತಿಯು, ದೇಶ ಪರ್ಯಟನೆಗೆ ಆಯ್ಕೆ ಮಾಡಿದ್ದು ಸೈಕಲ್ ಸವಾರಿಯನ್ನು. ಜ.1ರಂದು ಪ್ರಯಾಣ ಆರಂಭಿಸಿ, ಗುರುವಾರ ಕಾರವಾರಕ್ಕೆ ತಲುಪಿ ಗೋವಾದತ್ತ ಸಾಗಿದರು. 54 ವರ್ಷದ ಪರಿಮಳ ಕಾಂಜಿ ಎಂಬುವವರೇ ಇಂಥ ಸಾಹಸ ಮಾಡುತ್ತಿರುವವರು. ಕೊಲ್ಕತ್ತಾದ ಬೋಡೊ ಬಜಾರ್ ನಿವಾಸಿಯಾಗಿರುವ ಇವರು, ದೇಶದ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳುವುದು, ಪರಿಸರ ಸಂರಕ್ಷಣೆ, ಸಸ್ಯ ಸಂಪತ್ತಿನ ಪಾಲನೆ ಹಾಗೂ ನೀರಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತ ಸೈಕಲ್ ತುಳಿಯುತ್ತಿದ್ದಾರೆ. ದೇಶದ ಕರಾವಳಿ …

Read More »

ರಾಜ್ಯದ ವಿವಿಧ ಆಸ್ಪತ್ರೆಗಳ ಮೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ 40 ಕೆ.ಜಿ ಚಿನ್ನ, ವಜ್ರ ಪತ್ತೆ..!

ಮಂಗಳೂರು: ರಾಜ್ಯದ ವಿವಿಧ ಆಸ್ಪತ್ರೆಗಳ ಮೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಗಳೂರಿನ ಆಸ್ಪತ್ರೆಯೊಂದರ ಮಾಲೀಕರ ಮನೆಯಲ್ಲಿ ಬ್ಬರೋಬ್ಬರಿ 40 ಕೆ.ಜಿ ಚಿನ್ನ, ವಜ್ರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ಐಟಿ ಅಧಿಕಾರಿಗಳು ರಾಜ್ಯದ ವಿವಿಧ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದು, ಇನ್ನೂ ಕೂಡ ಶೋಧ ಮುಂದುವರೆದಿದೆ. ಈ ನಡುವೆ ಮಂಗಳೂರಿನ ಎ.ಜೆ ಆಸ್ಪತ್ರೆ, ಯನಮರಸ್ ಆಸ್ಪತ್ರೆ, ಬೆಂಗಳೂರಿನ ಬಿಜಿಎಸ್, ತುಮಕೂರಿನ ಶ್ರೀದೇವಿ ಮೆಡಿಕಲ್ …

Read More »