Breaking News

ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಸ್ಥರಿಗೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಂದ ಕಿರುಕುಳ…?

Spread the love

ಚಿಕ್ಕೋಡಿ : ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಸ್ಥರಿಗೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಂದ ಕಿರುಕುಳ ಆರೋಪ

ಚಿಕ್ಕೋಡಿ : ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಟೆಂಡರ್ ಮುಖಾಂತರ ಗುತ್ತಿಗೆ ಪಡೆದ ವಿವಿಧ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರಿಗೆ ಸಾರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬಸ್ ನಿಲ್ದಾಣದಲ್ಲಿರುವ ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಗುತ್ತಿಗೆ ಪಡೆದ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ವಾಣಿಜ್ಯಗಳ ಬಾಡಿಗೆ ಭರಿಸಲು ಸಾಧ್ಯವಾಗದೇ ಮತ್ತು ಸಾರಿಗೆ ಅಧಿಕಾರಿಗಳ ಕಿರುಕುಳದಿಂದ ಈಗಾಗಲೇ ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದಾರೆ. ಶೇ.50 ರಷ್ಟು ವಾಣಿಜ್ಯ ಮಳಿಗೆ ಬಾಗೀಲು ಮುಚ್ಚಿಕೊಂಡಿವೆ. ಅಳಿದುಳಿದ ವಾಣಿಜ್ಯ ಮಳಿಗೆಗಳಲ್ಲಿ ನೆಮ್ಮದಿಯಿಂದ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ವಾಣಿಜ್ಯ ಮಳಿಗೆ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.

ಗುರುವಾರ ಸಾರಿಗೆ ಇಲಾಖೆಯ ಚಿಕ್ಕೋಡಿ ಘಟಕದ ಅಧಿಕಾರಿಗಳು ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಒಂದು ವಾಣಿಜ್ಯ ಮಳಿಗೆಯ ಬಾಗೀಲು ಮುಚ್ಚಿರುವುದು ಚರ್ಚೆಗೆ ಗ್ರಾಸವಾಗಿದೆ


Spread the love

About Laxminews 24x7

Check Also

40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ ಆರಂಭ

Spread the love 40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ