Daily Archives: ಫೆಬ್ರವರಿ 18, 2021

ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ

ಬೆಳಗಾವಿ: ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ. ಇಲ್ಲಿನ ರಾಣಾಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ದರೋಡೆ ನಡೆದಿದೆ. ಮನೆ ಕಿಟಕಿ ಮುರಿದು ಒಳಬಂದ 7 ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ನಾವು ನಿಮಗೆ ಏನೂ ಮಾಡಲ್ಲ ನಮಗೆ ಹಣ, ಒಡವೆ ಕೊಟ್ಟುಬಿಡಿ ಎಂದಿದ್ದಾರೆ. ಅಭಿಜಿತ್ ಪತ್ನಿ ಮಾಂಗಲ್ಯ, …

Read More »

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ

ಬೆಳಗಾವಿ: ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನಿಡುವಂತೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಾ ಹಾಗೂ ತೌಸಿಫ್ …

Read More »

ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ​ರಾಹುಲ್​, ಪ್ರಿಯಾಂಕಾ; ಗಮನಸೆಳೆದ ಗೋಕಾಕ್​ ಸಾಹುಕಾರ್​

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ ಎಂಬುದು ಕೆಲವು ಸಂದರ್ಭದಲ್ಲಿ ಸಾಬೀತಾಗುತ್ತಿರುತ್ತದೆ. ಅದೇ ರೀತಿಯ ಸನ್ನಿವೇಶವೊಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಮದುವೆ ಸಂದರ್ಭದಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಈ ಆರತಕ್ಷತೆಯಲ್ಲಿ ಡಿಕೆ ಶಿವಕುಮಾರ್ ಅವರ​ ರಾಜಕೀಯ ಸ್ನೇಹಿತರ ಸಮಾಗಮವಾಗಿದೆ. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಕೂಡ ಆಗಮಿಸಿ ಶುಭಕೋರಿದ್ದಾರೆ. ಇದರಲ್ಲಿ ಗಮನಸೆಳೆದವರು ಎಂದರೇ …

Read More »

ರಾಜ್ಯದ SC, ST ಉದ್ದಿಮೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳ

ಬೆಂಗಳೂರು : ರಾಜ್ಯದ SC, ST ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. ಯೆಸ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ/ಶೆಡ್ ಗಳನ್ನು ನೀಡುವಲ್ಲಿ ಖಾಲಿ ಇರುವ ಸಹಾಯಧನವನ್ನು ಶೇ.50 ರಿಂದ ಶೇ 75 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದ. ಸದರಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತು ಮತ್ತು ಕೆಲವು ನಿಬಂಧನೆಗಳನ್ನು ಮಾರ್ಪಡಿಸಿ ಬಗ್ಗೆ ಪಿ …

Read More »

ಪೆಟ್ರೋಲ್-ಡೀಸೆಲ್ ದರದಲ್ಲಿ ಹೆಚ್ಚಳ : ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಪೆಟ್ರೋಲ್ 100 ರೂಪಾಯಿ ಗಡಿ ದಾಟಿದ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದಿನ ಸರ್ಕಾರಗಳು ಭಾರತದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಗಮನ ಹರಿಸಿಲ್ಲ ಎಂದು ಬುಧವಾರ ಆರೋಪಿಸಿದ್ದಾರೆ. ತಮಿಳುನಾಡಿನ ತೈಲ ಮತ್ತು ಅನಿಲ ಯೋಜನೆಗಳ ಆನ್ ಲೈನ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಅವರು ಚಿಲ್ಲರೆ ಇಂಧನ ದರ ಏರಿಕೆ ಯನ್ನು ಉಲ್ಲೇಖಿಸದೆ, 2019-20ನೇ ಹಣಕಾಸು ವರ್ಷದಲ್ಲಿ ಭಾರತವು ತನ್ನ ತೈಲ ಅಗತ್ಯಗಳ ಪೈಕಿ ಶೇ.85ರಷ್ಟು …

Read More »

ಸಿದ್ದು ಅಹಿಂದ ಆಟ ನಡೆಯಲ್ಲ : ಎಂ.ಪಿ.ರೇಣು ಕಾಚಾರ್ಯ

ಬೆಂಗಳೂರು,ಫೆ.17- ಬಿಜೆಪಿಯಲ್ಲಿ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡಿರುವುದರಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಹಿಂದ ಅಥವಾ ಅಹಿಂದ ಯಾವುದೂ ನಡೆಯುವುದಿಲ್ಲ ಎಂದು ರಾಜ್ಯದ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣು ಕಾಚಾರ್ಯ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ತತ್ವದಡಿ ಪ್ರಧಾನಿ ನರೇಂದ್ರಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಅಹಿಂದ ನಾಟಕವನ್ನು ಜನರು ನಂಬುವುದಿಲ್ಲ. ರಾಜ್ಯದ ಜನತೆ …

Read More »

ತಂಬಾಕು ಮಾರಾಟಕ್ಕೂ ಕಡ್ಡಾಯ ಪರವಾನಿಗಿ ನೀಡಿ

ಬೆಂಗಳೂರು, ಫೆ.17- ರಾಜ್ಯದಲ್ಲಿ ತರಕಾರಿ, ಹಾಲು ಮಾರಾಟ ಮಳಿಗೆ ಮತ್ತು ಬೇಕರಿಯಂತಹ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳು ಸಿಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಕಡ್ಡಾಯವಾಗಿ ಪರವಾನಗಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ ಅವರು, ಮದ್ಯದ ಅಂಗಡಿಗಳಿಗೆ ಪರವಾನಗಿ ಇರುವಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯ ಪರವಾನಗಿ …

Read More »

ಪ್ರತಿಭಟನೆ; ಬಾಂಬೆ ಹೈಕೋರ್ಟ್​ ನ್ಯಾಯಾಧೀಶೆಗೆ ಕಾಂಡೋಮ್ ರವಾನೆ!

ಅಹಮದಾಬಾದ್, ಫೆಬ್ರವರಿ 17; ಬಾಂಬೆ ಹೈಕೋರ್ಟ್​ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರಿಗೆ 150 ಕಾಂಡೋಮ್‌ಗಳನ್ನು ಕಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಪೋಕ್ಸೋ ಕಾಯ್ದೆಯ ಅಡಿ ನ್ಯಾಯಾಧೀಶೆ ನೀಡಿರುವ ಆದೇಶಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅಹಮದಾಬಾದ್ ಮೂಲದ ದೇವಶ್ರೀ ತ್ರಿವೇದಿ ಎಂಬುವವರು ನ್ಯಾಯಾಧೀಶರ 12 ವಿಳಾಸಗಳಿಗೆ ಕಾಂಡೋಮ್‌ಗಳನ್ನು ಕಳಿಸಿರುವುದಾಗಿ ಹೇಳಿದ್ದಾರೆ. ರಾಜಕೀಯ ವಿಶ್ಲೇಷಕರಾದ ಮಹಿಳೆ ನ್ಯಾಯಾಧೀಶರು ಇತ್ತೀಚೆಗೆ ನೀಡಿರುವ ತೀರ್ಪುಗಳಿಗೆ ಪ್ರತಿಭಟನೆಯಾಗಿ ಕಾಂಡೋಮ್ ಕಳಿಸಿದ್ದಾಗಿ ಹೇಳಿದ್ದಾರೆ. ಇತ್ತೀಚಿನ ತೀರ್ಪುಗಳಿಂದ ಅಪ್ರಾಪ್ತ …

Read More »

ಟೂಲ್‌ಕಿಟ್‌ ಪ್ರಕರಣ: ನಿಕಿತಾಗೆ ಜಾಮೀನು

ಮುಂಬೈ: ಟೂಲ್‌ಕಿಟ್‌ ಪ್ರಕರಣದ ಆರೋಪಿ, ಮುಂಬೈನ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜೇಕಬ್‌ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಮೂರು ವಾರಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದೆ. ನಿಕಿತಾ ವಿರುದ್ಧ ದೆಹಲಿ ಪೊಲೀಸರು ಜಾಮೀನುರಹಿತ ವಾರಂಟ್‌ ಪಡೆದುಕೊಂಡಿದ್ದಾರೆ. ಬಂಧನದಿಂದ ರಕ್ಷಣೆ ಪಡೆಯಲು ದೆಹಲಿಯ ನ್ಯಾಯಾಲಯಕ್ಕೆ ಹೋಗುವುದಕ್ಕಾಗಿ ಜಾಮೀನು ಮಂಜೂರು ಮಾಡಲಾಗಿದೆ. ಇನ್ನೊಬ್ಬ ಆರೋಪಿ ಶಾಂತನು ಮುಲುಕ್‌ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಮಂಗಳವಾರವೇ ಜಾಮೀನು ನೀಡಿದೆ. ಈ …

Read More »

ಸ್ವತಂತ್ರ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ನವದೆಹಲಿ: ಭಾರತ ಸ್ವತಂತ್ರ ಕಂಡ ದಿನದಿಂದ ಇದುವರೆಗೂ ಕೆಲವೇ ಕೆಲವು ಮಂದಿಯನ್ನು ಗಲ್ಲಿಗೇರಿಸಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಕಲ್ಲು ಶಿಕ್ಷೆ ವಿಧಿಸಿ ಹೊಸ ಚರಿತ್ರೆಯನ್ನು ಬರೆಯುತ್ತದೆ. ಏಪ್ರಿಲ್ 2008ರಲ್ಲಿ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ರಾಷ್ಟ್ರಪತಿ ಕೂಡ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಭಾರತ ಸ್ವಾತಂತ್ರಗೊಂಡ ಮೇಲೆ ಇದೇ …

Read More »