Home / Uncategorized / ಸ್ವತಂತ್ರ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಸ್ವತಂತ್ರ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Spread the love

ನವದೆಹಲಿ: ಭಾರತ ಸ್ವತಂತ್ರ ಕಂಡ ದಿನದಿಂದ ಇದುವರೆಗೂ ಕೆಲವೇ ಕೆಲವು ಮಂದಿಯನ್ನು ಗಲ್ಲಿಗೇರಿಸಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಕಲ್ಲು ಶಿಕ್ಷೆ ವಿಧಿಸಿ ಹೊಸ ಚರಿತ್ರೆಯನ್ನು ಬರೆಯುತ್ತದೆ.

ಏಪ್ರಿಲ್ 2008ರಲ್ಲಿ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ರಾಷ್ಟ್ರಪತಿ ಕೂಡ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಭಾರತ ಸ್ವಾತಂತ್ರಗೊಂಡ ಮೇಲೆ ಇದೇ ಮೊದಲ ಬಾರಿ ಮಹಿಳೆಗೆ ಗಲ್ಲು ಶಿಕ್ಷೆ ನೀಡಲಾಗ್ತಿದೆ.150 ವರ್ಷಗಳ ಹಿಂದೆ ಮಥುರಾ ಜೈಲಿನಲ್ಲಿ ಮಹಿಳೆಯರ ನೇಣು ಮನೆ ನಿರ್ಮಾಣ ಮಾಡಲಾಗಿತ್ತು.ಗಲ್ಲಿಗೇರಿಸುವ ತಯಾರಿ ಶುರುವಾಗಿದೆ. ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲಾಡ್, ಈಗಾಗಲೇ ಎರಡು ಬಾರಿ ನೇಣು ಬಿಗಿಯುವ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

ಆದರೆ ಇನ್ನು ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ. ಡೆತ್ ವಾರೆಂಟ್ ಬರ್ತಿದ್ದಂತೆ ಶಬ್ನಮ್ ಳನ್ನು ಗಲ್ಲಿಗೇರಿಸುವುದಾಗಿ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಬಿಹಾರದ ಬಕ್ಸಾರ್ ನಿಂದ ನೇಣು ಹಗ್ಗವನ್ನು ತರಿಸಲಾಗ್ತಿದೆ ಎಂದು ವರದಿಗಳು ತಿಳಿಸಿವೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ