Breaking News
Home / ರಾಜ್ಯ / ಪೆಟ್ರೋಲ್-ಡೀಸೆಲ್ ದರದಲ್ಲಿ ಹೆಚ್ಚಳ : ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಪೆಟ್ರೋಲ್-ಡೀಸೆಲ್ ದರದಲ್ಲಿ ಹೆಚ್ಚಳ : ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

Spread the love

ನವದೆಹಲಿ: ಪೆಟ್ರೋಲ್ 100 ರೂಪಾಯಿ ಗಡಿ ದಾಟಿದ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದಿನ ಸರ್ಕಾರಗಳು ಭಾರತದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಗಮನ ಹರಿಸಿಲ್ಲ ಎಂದು ಬುಧವಾರ ಆರೋಪಿಸಿದ್ದಾರೆ.

ತಮಿಳುನಾಡಿನ ತೈಲ ಮತ್ತು ಅನಿಲ ಯೋಜನೆಗಳ ಆನ್ ಲೈನ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಅವರು ಚಿಲ್ಲರೆ ಇಂಧನ ದರ ಏರಿಕೆ ಯನ್ನು ಉಲ್ಲೇಖಿಸದೆ, 2019-20ನೇ ಹಣಕಾಸು ವರ್ಷದಲ್ಲಿ ಭಾರತವು ತನ್ನ ತೈಲ ಅಗತ್ಯಗಳ ಪೈಕಿ ಶೇ.85ರಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು ಮತ್ತು 53 ಪ್ರತಿಶತ ಅನಿಲದ ಅವಶ್ಯಕತೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಮ್ಮಂಥ ವೈವಿಧ್ಯಮಯ ಪ್ರತಿಭಾವಂತ ರಾಷ್ಟ್ರಇಷ್ಟೊಂದು ಇಂಧನ ಆಮದು ಅವಲಂಬಿತವಾಗಿರಬಹುದೇ?’ ಅಂಥ ಜನತೆಯನ್ನು ಪ್ರಶ್ನೆ ಮಾಡಿದ್ದಾರೆ. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ ಆದರೆ ನಾನು (ಈ ಬಗ್ಗೆ) ಈ ವಿಷಯದ ಬಗ್ಗೆ ಬಹಳ ಹಿಂದೆಯೇ ಗಮನ ಹರಿಸಿದ್ದರೆ ನಮ್ಮ ಮಧ್ಯಮ ವರ್ಗಕ್ಕೆ ಹೊರೆಯಾಗುತ್ತಿರಿಲ್ಲ ಎಂದು ಹೇ ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಇದೇ ವೇಳೆ ಅವರು ಸ್ವಚ್ಛ ಮತ್ತು ಹಸಿರು ಇಂಧನ ಮೂಲಮತ್ತು ಇಂಧನ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವುದು ಒಂದು ಸಾಮೂಹಿಕ ಕರ್ತವ್ಯಎಂದು ಪಿಎಂ ಮೋದಿ ಹೇಳಿದರು.

‘ನಮ್ಮ ಸರ್ಕಾರ ಮಧ್ಯಮ ವರ್ಗದ ಜನರ ಕಾಳಜಿಗೆ ಸಂವೇದನಾಶೀಲವಾಗಿದೆ. ಹೀಗಾಗಿ ಯೇ ಈಗ ಭಾರತ ವು ಎಥೆನಾಲ್ ಗೆ ಹೆಚ್ಚಿನ ಒತ್ತು ನೀಡುತ್ತಿದೆ, ಇದರಿಂದ ರೈತರು ಮತ್ತು ಗ್ರಾಹಕರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ’ ಎಂದು ಪಿಎಂ ಮೋದಿ ಹೇಳಿದರು.

ಕಬ್ಬಿನಿಂದ ತೆಗೆದ ಎಥೆನಾಲ್ ಅನ್ನು ಆಮದಿನ ಅಗತ್ಯವನ್ನು ಕಡಿಮೆ ಮಾಡಲು ಪೆಟ್ರೋಲ್‌ನಲ್ಲಿ ಹಾಕಲಾಗುತ್ತದೆ ಪ್ರಸ್ತುತ, ಶೇಕಡಾ 8.5 ರಷ್ಟು ಪೆಟ್ರೋಲ್ ಎಥೆನಾಲ್ ಆಗಿದೆ ಮತ್ತು ಈ ಪ್ರಮಾಣವನ್ನು 2025 ರ ವೇಳೆಗೆ ಶೇಕಡಾ 20 ಕ್ಕೆ ಏರಿಸುವ ಗುರಿ ಹೊಂದಿದ್ದು, ಪೆಟ್ರೋಲಿಯಂ ಉತ್ಪನಗಳನ್ನು ಆಮದು ಕಡಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ರೈತರಿಗೆ ಪರ್ಯಾಯ ಆದಾಯದ ಮೂಲವನ್ನು ನೀಡುತ್ತದೆ ಅಂತ ಅವರು ಹೇಳಿದರು


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ