Daily Archives: ಫೆಬ್ರವರಿ 15, 2021

ಜಾತಿ ನಿಂದನೆ ಆರೋಪದ ಮೇಲೆ ಯುವರಾಜ್ ಸಿಂಗ್ ವಿರುದ್ಧ ಎಫ್‌ಐಆರ್

ಚಂಡೀಗಢ : 2020 ರಲ್ಲಿ ಇನ್ ಸ್ಟಾ ಗ್ರಾಮ್ ಲೈವ್ ವೇಳೆ ಯುವರಾಜ್ ಸಿಂಗ್ ದಲಿತರ ವಿರುದ್ಧ ಅವಾಚ್ಯ ಶಬ್ಧ ಬಳಸಿದ್ದಾರೆ ಎಂಬ ಆರೋಪದ ಮೇಲೆ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ . ವಕೀಲರೊಬ್ಬರು ನೀಡಿರುವ ದೂರಿನ ಪ್ರಕಾರ, ಕ್ರಿಕೆಟಿಗರಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಬಗ್ಗೆ ಮಾತನಾಡುವ ವೇಳೆ ಯುವರಾಜ್ ಸಿಂಗ್ ಜಾತಿ ನಿಂದನೆ ಪದ ಬಳಸಿದ್ದಾರೆ ಎಂದು ಹೇಳಿದ್ದು, ಈ …

Read More »

ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮ

ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತ್ ಕಾರ್ಯಾಲಯ ದಲ್ಲಿ ಮೊದಲ ಸಭೆ ಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಣುಕಾ ಈರಪ್ಪ ಪಾಟೀಲ ಹಾಗೂ ಉಪಾಧ್ಯಕ್ಷ ಶ್ರೀ ಭೀಮಪ್ಪ ಯಲ್ಲಪ್ಪ ಬಿರನಾಳಿ ಹಾಗೂ ಸರ್ವ ಸದಸ್ಯರು ಹಾಗೂ ಪಿಡಿಒ ಸಾಯೀಶ್ವರಿ ಮೆಣಸಿನಕಾಯಿ ಮತ್ತು ಲೇಕ್ಕಾಧಿಕಾರಿ …

Read More »

ನಟ ಸುಶಾಂತ್ ಸಹೋದರಿಗೆ ಸಂಕಷ್ಟ: FIR ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಕಾರ..!

ಸುಶಾಂತ್ ಸಿಂಗ್ ರಜಪೂತ್ ಸಹೋದರಿ ವಿರುದ್ಧ ದಾಖಲಿಸಲಾಗಿದ್ದ ಎಫ್ ಐಆರ್ ರದ್ದಾತಿಗೆ ಬಾಂಬೆ ಹೈಕೋರ್ಟ್‌ ನಕಾರ ಸೂಚಿಸಿದ್ದು, ಸುಶಾಂತ್‌ ಸಹೋದರಿ ಪ್ರಿಯಾಂಕ ಸಿಂಗ್ʼಗೆ ಸಂಕಷ್ಟ ಎದುರಾಗಿದೆ. ಅಂದ್ಹಾಗೆ, ಪ್ರಿಯಾಂಕ ಸಿಂಗ್ ವಿರುದ್ಧ ಸುಶಾಂತ್‌ ಸಿಂಗ್‌ ರಜಪೂತ್ ಅವ್ರ ಗೆಳತಿ ರಿಯಾ ಚಕ್ರವರ್ತಿ ದೂರು ದಾಖಲಿಸಿದ್ದರು. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ ಐಆರ್‌ ರದ್ದುಗೊಳಿಸಲು ಬಾಂಬೆ ಒಪ್ಪಿಗೆ ಸೂಚಿಸಿಲ್ಲ.

Read More »

ಜೈಲಿನಿಂದ ಬಿಡುಗಡೆಯಾದ ರಾಗಿಣಿ ದ್ವಿವೇದಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ?

ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ನಟಿ ರಾಗಿಣಿ ದ್ವಿವೇದಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ? ಹೀಗೊಂದು ಸುದ್ದಿ ಹಬ್ಬಿದೆ. ರಾಗಿಣಿ ದ್ವಿವೇದಿ ಬಿಗ್ ಬಾಸ್ ಸೀಸನ್ 8 ಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಡಿದೆ. ಈಗಾಗಲೇ ವಾಹಿನಿ ಆಕೆಯನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಜೈಲಿಗೆ ಹೋಗಿ ಇಮೇಜ್ ಕಳೆದುಕೊಂಡಿರುವ ರಾಗಿಣಿಗೆ ಈಗ ಮತ್ತೆ ತನ್ನನ್ನು ಸಾಬೀತುಪಡಿಸಲು ಬಿಗ್ ಬಾಸ್ ವೇದಿಕೆಯಾಗಬಹುದು. ಹೀಗಾಗಿ ಆಕೆ ತೆರಳಿದರೂ ಅಚ್ಚರಿಯಿಲ್ಲ.

Read More »

IOCL Recruitment 2021 : ಅರ್ಜಿ ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನಾಂಕ

ನವದೆಹಲಿ : ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (Indian Oil Corporation Limited IOCL) ತಾಂತ್ರಿಕ ಅಪ್ರೆಂಟಿಸ್ ಮತ್ತು ತಾಂತ್ರಿಕೇತರ ಟ್ರೇಡ್ ಅಪ್ರೆಂಟಿಸ್ (Non-Technical Trade Apprentice) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರ ಅಡಿಯಲ್ಲಿ ಒಟ್ಟು 505 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IOCLನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 26 ಫೆಬ್ರವರಿ 2021 ರೊಳಗೆ ಐಒಸಿಎಲ್ …

Read More »

SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಪರೀಕ್ಷ ಶುಲ್ಕ ಕಟ್ಟುವ ದಿನಾಂಕ ವಿಸ್ತರಣೆ, ಇಲ್ಲಿದೆ ನೂತನ ದಿನಾಂಕ

ಬೆಂಗಳೂರು: 2021ನೇ ಜೂನ್‌ ಮಾಹೆಯಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ,ಅನುದಾನ ರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ಅರ್ಹ ಶಾಲ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮುಖಾಂತರ ನೋಂದಾಯಿಸಲು ಹಾಗೂ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಣೆ ಮಾಡಲು ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ.

Read More »

ಕುರಿ ಕಾಯಲು ತೋಳ ಬಿಟ್ಟಂತೆ: ಎಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು ಹಂಚಿಕೆಯಲ್ಲಿ ₹ 500 ಕೋಟಿ ಮೊತ್ತದ ಅವ್ಯಹಾರ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಹೇಳುತ್ತಿರುವುದು ಕುರಿ ಕಾಯಲು ತೋಳ ಬಿಟ್ಟಂತೆ ಇದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ವಿಶ್ವನಾಥ್‌ ಈಗ ಬಿಡಿಎ …

Read More »

‘ಅನ್ನಭಾಗ್ಯ’ಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್‌

ಬೆಂಗಳೂರು: ‘ಅನ್ನಭಾಗ್ಯ’ಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್‌ ಅನ್ನು ಜಾರಿಗೆ ತರಲು ಮುಂದಾಗಿದ್ದು, ಈ ನಡುವೆ ರಾಜ್ಯ ಸರ್ಕಾರ ಹಾಗೂ ನಾಗರೀಕ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ವಿರುದ್ದ ಖುದ್ದು ಬಿಜೆಪಿ ನಾಯಕರುಗಳೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಫ್ರಿಡ್ಜ್‌ ಹಾಗೂ ವಾಹನಗಳು ಇದ್ದೇ ಇರುತ್ತವೆ, ಸರ್ಕಾರ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಟಿವಿ ಸಹಕಾರಿಯಾಗಲಿದೆ ಅವೇ ಇರಬಾರದು …

Read More »

ಮಾರುಕಟ್ಟೆಯಲ್ಲಿ ಓಡಾಡ್ತಿವೆ 50, 200ರೂ. ಮುಖಬೆಲೆಯ ‌ʼನಕಲಿ ನೋಟುʼಗಳು, ಈ ರೀತಿ ಚೆಕ್‌ ಮಾಡಿ ತಗೊಳ್ಳಿ..!

ನವದೆಹಲಿ: 50 ಮತ್ತು 200 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆ ಆಗ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಗ್ಗೆ ಮಾಹಿತಿ ನೀಡಿದೆ. ಇನ್ನು ನಕಲಿ ನೋಟುಗಳನ್ನ ಹೇಗೆ ಗುರುತಿಸಬೇಕು ಎನ್ನುವುದ್ರ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಿದೆ. ಆರ್ ಬಿಐ ಆರ್ಥಿಕ ಜಾಗೃತಿ ಸಪ್ತಾಹ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಮಹತ್ವದ ಮಾಹಿತಿ ನೀಡಿದ್ದಾರೆ. ನಕಲಿ ನೋಟು ಪತ್ತೆ ಮಾಡುವುದು …

Read More »

ಉಮೇಶ ಕತ್ತಿಗೆ ಕ್ಲಾಸ್ ತೆಗೆದುಕೊಂಡ ಸಿಎಂ B.S.Y….!!!

ಬೆಂಗಳೂರು : ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡಿದ್ದು ಇದರಿಂದ ಕತ್ತಿ ಗರಂ ಆಗಿದ್ದಾರೆ. ಟಿವಿ , ಪ್ರೀಡ್ಜ್, ಬೈಕ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿಪಕ್ಷ ಹಾಗೂ ಸ್ವಪಕ್ಷಿಯದಲ್ಲಿ ಮತ್ತು ರಾಜ್ಯದ ಜನರು ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದ ಸಚಿವರ ನಿರ್ಧಾರದಿಂದ ಸರ್ಕಾರಕ್ಕೆ ಕಪ್ಪು …

Read More »