Breaking News
Home / ರಾಜ್ಯ / ಮಾರುಕಟ್ಟೆಯಲ್ಲಿ ಓಡಾಡ್ತಿವೆ 50, 200ರೂ. ಮುಖಬೆಲೆಯ ‌ʼನಕಲಿ ನೋಟುʼಗಳು, ಈ ರೀತಿ ಚೆಕ್‌ ಮಾಡಿ ತಗೊಳ್ಳಿ..!

ಮಾರುಕಟ್ಟೆಯಲ್ಲಿ ಓಡಾಡ್ತಿವೆ 50, 200ರೂ. ಮುಖಬೆಲೆಯ ‌ʼನಕಲಿ ನೋಟುʼಗಳು, ಈ ರೀತಿ ಚೆಕ್‌ ಮಾಡಿ ತಗೊಳ್ಳಿ..!

Spread the love

ನವದೆಹಲಿ: 50 ಮತ್ತು 200 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆ ಆಗ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಗ್ಗೆ ಮಾಹಿತಿ ನೀಡಿದೆ. ಇನ್ನು ನಕಲಿ ನೋಟುಗಳನ್ನ ಹೇಗೆ ಗುರುತಿಸಬೇಕು ಎನ್ನುವುದ್ರ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಿದೆ.

ಆರ್ ಬಿಐ ಆರ್ಥಿಕ ಜಾಗೃತಿ ಸಪ್ತಾಹ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಮಹತ್ವದ ಮಾಹಿತಿ ನೀಡಿದ್ದಾರೆ. ನಕಲಿ ನೋಟು ಪತ್ತೆ ಮಾಡುವುದು ಹೇಗೆ? ಗ್ರಾಹಕರು ಬ್ಯಾಂಕ್ ಸೇವೆ ಬಗ್ಗೆ ತೃಪ್ತಿ ಹೊಂದಿಲ್ಲದಿದ್ದರೆ ಅಥವಾ ಸಮಸ್ಯೆ ಇದ್ದರೆ ಹೇಗೆ ಅವ್ರು ಆರ್ಬಿಐಗೆ ಮಾಹಿತಿ ನೀಡಬೇಕು ಅನ್ನೋದ್ರ ಬಗ್ಗೆ ತಿಳಿಸಿದರು. ಇನ್ನು ಅಸಲು ನೋಟುಗಳನ್ನ ಗುರುತಿಸುವುದು ಹೇಗೆ ಅನ್ನೋ ಮಾಹಿತಿ ಈ ಕೆಳಗಿನಂತಿದೆ.

ನೋಟಿನ ಮುಂಭಾಗ..!
1) ಮುಖಬೆಲೆಯ ಸಂಖ್ಯೆಯೊಂದಿಗೆ ಸೀ-ಥ್ರೂ ರಿಜಿಸ್ಟರ್ 50, 200 ಇರುತ್ತೆ.
2) ದೇವನಗರಿಯಲ್ಲಿ ಸಂಖ್ಯೆ ಇರುತ್ತೆ.
3) ಕೇಂದ್ರದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವಿರುವುದು.
4) ಸೂಕ್ಷ್ಮ ಅಕ್ಷರಗಳು ‘ಆರ್ ಬಿಐ’, ‘cycle’, ‘india’ ಮತ್ತು ’50’ ಬರೆದಿರುತ್ತೆ.
5) ಖಾತರಿ ಕಲಂ, ಮಹಾತ್ಮ ಗಾಂಧಿ ಭಾವಚಿತ್ರದ ಹಕ್ಕುಗಳಿಗೆ ಭರವಸೆ ಕಲಂ ಮತ್ತು ಆರ್ ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ ಇರುತ್ತದೆ.
6) ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿರುವುದು.
7) ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರೋಟೈಪ್ (50) ವಾಟರ್ ಮಾರ್ಕ್ʼಗಳು ಇರುತ್ವೆ.
8) ಸಣ್ಣದಿಂದ ದೊಡ್ಡದಕ್ಕೆ ಬೆಳೆಯುವ ಸಂಖ್ಯೆ ಫಲಕವು ಮೇಲಿನ ಎಡಭಾಗದಲ್ಲಿ ಮತ್ತು ಕೆಳಭಾಗ ಹಾಗೂ ಬಲಭಾಗದಲ್ಲಿ ಇರುತ್ತೆ.

 

ನೋಟಿನ ಹಿಂಭಾಗ..!
ನೋಟಿನ ಹಿಂಭಾಗ..!
1) ಎಡಭಾಗದಲ್ಲಿ ನೋಟಿನ ಮುದ್ರಣದ ವರ್ಷ
2) ಘೋಷವಾಕ್ಯದೊ೦ದಿಗೆ ಸ್ವಚ್ಛ ಭಾರತ ಲೋಗೊ
3) ಭಾಷಾ ಫಲಕ
4) ಹಂಪಿಯ ರಥದ ಮೂರ್ತಿ
5) ದೇವನಗರಿಯಲ್ಲಿ ಡಿನೋಮಿನಲ್ ಸಂಖ್ಯೆ

ಗ್ರಾಹಕರ ದೂರು ಆಲಿಸುತ್ತಿಲ್ಲ ಎಂದಾದಲ್ಲಿ ಬ್ಯಾಂಕ್ ವಿರುದ್ಧ ದೂರು ನೀಡುವ ಬಗ್ಗೆ ಮಾತನಾಡಿದ ಕೇಂದ್ರ ಬ್ಯಾಂಕ್, ಅನುಸರಿಸಬೇಕಾದ ಕ್ರಮಗಳನ್ನ ಪಟ್ಟಿ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿಯಂತ್ರಿಸುವ ಯಾವುದೇ ಸಂಸ್ಥೆಯ ವಿರುದ್ಧ ಲೋಕಪಾಲ್ ಮುಂದೆ ದೂರು ದಾಖಲಿಸಲು, ಗ್ರಾಹಕನು https://cms.rbi.org.in ಲಾಗ್ ಆನ್ ಮಾಡಬಹುದು.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ